ರೂಟ್ ತಪ್ಪಿದ ಜೋ ರೂಟ್..! ಭಾರತ ಎದುರು ರನ್‌ಗಿಂತ ಓವರೇ ಜಾಸ್ತಿ..!
ಜೋ ರೂಟ್..! ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರು.. ಟೆಸ್ಟ್‌ನಲ್ಲಿ 11,493 ರನ್, 30 ಶತಕ, 60 ಅರ್ಧಶತಕ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಇತಿಹಾಸದಲ್ಲಿ ಅತಿಹೆಚ್ಚು ಅಂದ್ರೆ 2,603 ರನ್ ಹೊಡೆದ ಪ್ಲೇಯರ್. ಟೆಸ್ಟ್ ಕ್ರಿಕೆಟ್ನಲ್ಲಿ ಮೋಸ್ಟ್ ಡೇಂಜರಸ್ ಬ್ಯಾಟರ್.
ರಾಜ್‌ಕೋಟ್(ಫೆ.20): ಈತ ಬ್ಯಾಟಿಂಗ್ ಆಲ್ರೌಂಡರ್. ಆದ್ರೆ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಮೂರು ಟೆಸ್ಟ್‌ನಲ್ಲೂ ಬ್ಯಾಟಿಂಗ್ ಮಾಡಿದಕ್ಕಿಂತ ಬೌಲಿಂಗ್ ಮಾಡಿದ್ದೇ ಜಾಸ್ತಿ. ಇದೇ ಆತನ ಕಳಪೆ ಫಾರ್ಮ್ಗೆ ಕಾರಣವಾಯ್ತಾ..? ಎರಡು ಟೆಸ್ಟ್‌ಗಳ ಸೋಲಿಗೆ ಆತನೇ ಕಾರಣನಾದ್ನಾ..? ಯಾರಾತ..? ಈ ಎಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ.
ಬ್ಯಾಟರ್ ಆಗಿ ಆಡದಕ್ಕಿಂತ ರೂಟ್ ಬೌಲರ್ ಆಗಿ ಆಡಿದ್ದೇ ಹೆಚ್ಚು..!
ಜೋ ರೂಟ್..! ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರು.. ಟೆಸ್ಟ್‌ನಲ್ಲಿ 11,493 ರನ್, 30 ಶತಕ, 60 ಅರ್ಧಶತಕ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಇತಿಹಾಸದಲ್ಲಿ ಅತಿಹೆಚ್ಚು ಅಂದ್ರೆ 2,603 ರನ್ ಹೊಡೆದ ಪ್ಲೇಯರ್. ಟೆಸ್ಟ್ ಕ್ರಿಕೆಟ್ನಲ್ಲಿ ಮೋಸ್ಟ್ ಡೇಂಜರಸ್ ಬ್ಯಾಟರ್. ಫಾಬ್-4 ಬ್ಯಾಟರ್ಸ್ ಲಿಸ್ಟ್ನಲ್ಲಿ ಗರಿಷ್ಠ ಶತಕ ಬಾರಿಸಿದ 3ನೇ ಆಟಗಾರ. ಆದ್ರೀಗ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ರೂಟ್ ಅವರ ರೂಟ್ ತಪ್ಪಿದೆ. ಇದು ಸ್ಟಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣಕ್ಕೆ ಅವರು ಕಳಪೆ ಫಾರ್ಮ್ನಲ್ಲಿರೋದು.
ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮಿಂಚಲು ಯಶಸ್ವಿ ಜೈಸ್ವಾಲ್ ರೆಡಿ..!
77 ರನ್, 107 ಓವರ್, 7 ವಿಕೆಟ್..!
ಭಾರತ-ಇಂಗ್ಲೆಂಡ್ ನಡುವಿನ ಮೂರು ಟೆಸ್ಟ್ಗಳು ಮುಗಿದಿವೆ. ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್, ಮೂರು ಟೆಸ್ಟ್ನಲ್ಲೂ ರನ್ ಗಳಿಸಲು ಒದ್ದಾಡಿದ್ದಾರೆ. ಆರು ಇನ್ನಿಂಗ್ಸ್ನಿಂದ ರೂಟ್ ಹೊಡೆದಿರುವುದು ಜಸ್ಟ್ 77 ರನ್. ರೂಟ್ ಭಾರತೀಯ ಪಿಚ್ನಲ್ಲಿ ರನ್ಗಳಿಸಲು ಪರದಾಡುತ್ತಿರುವುದು ಮಾತ್ರವಲ್ಲ, ಅದಕ್ಕಿಂತ ಹೆಚ್ಚಾಗಿ ಕ್ರೀಸ್ ಕಚ್ಚಿ ನಿಲ್ಲಲು ತಡಕಾಡುತ್ತಿದ್ದಾರೆ. ಭಾರತಕ್ಕೆ ಬರುವ ಮುಂಚೆ ಉತ್ತಮ ಫಾರ್ಮ್ನಲ್ಲಿದ್ದ ರೂಟ್, ಈಗ ಕಳಪೆ ಫಾರ್ಮ್ನಲ್ಲಿರುವುದು ಆಂಗ್ಲ ಪಡೆಗೆ ತಲೆ ನೋವು ತಂದಿದೆ.
ಇನ್ನು ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿರುವ ರೂಟ್, ಬೌಲಿಂಗ್ ಕಡೆ ಹೆಚ್ಚು ಗಮನಹರಿಸಿದ್ದಾರೆ. ಅನುಭವಿ ಸ್ಪಿನ್ನರ್ ಜ್ಯಾಕ್ ಲೀಚ್ ಅನುಪಸ್ಥಿತಿಯಲ್ಲಿ ಜೋ ರೂಟ್ ಕಳೆದ ಮೂರು ಟೆಸ್ಟ್ಗಳಲ್ಲೂ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂರು ಟೆಸ್ಟ್ನಲ್ಲಿ ಬರೋಬ್ಬರಿ 107 ಓವರ್ ಬೌಲಿಂಗ್ ಮಾಡಿದ್ದಾರೆ. ಅಂದರೆ ಟೀಮ್ ಇಂಡಿಯಾ ವಿರುದ್ಧ 642 ಬಾಲ್ಗಳನ್ನ ಎಸೆದು, 7 ವಿಕೆಟ್ಗಳನ್ನ ಪಡೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಅಂದ್ರೆ ಮೇನ್ ಬ್ಯಾಟರ್ ಆಗಿರೋ ಜೋ ರೂಟ್, ಹೊಡೆದಿರುವ ರನ್ಗಳಿಗಿಂತ ಹೆಚ್ಚು ಓವರ್ ಎಸೆದಿದ್ದಾರೆ. ಮೊದಲ ಟೆಸ್ಟ್ನಲ್ಲಿ 5 ವಿಕೆಟ್ ಪಡೆದು ಇಂಗ್ಲೆಂಡ್ ಗೆಲುವಿಗೆ ಕಾರಣರಾಗಿದ್ದರು.
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾಗೆ ರೆಸ್ಟ್?
ಬುಮ್ರಾಗಿಂತ ಹೆಚ್ಚು ಓವರ್, ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಾಯ್ತಾ..?
ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಈ ಸರಣಿಯಲ್ಲಿ 80 ಓವರ್ ಬೌಲಿಂಗ್ ಮಾಡಿದ್ದಾರೆ. ಬ್ಯಾಟರ್ ಆಗಿರುವ ಜೋ ರೂಟ್, 107 ಓವರ್ಗಳನ್ನ ಎಸೆದಿದ್ದಾರೆ. ಅಂದರೆ ಇಲ್ಲಿ ಜೋ ರೂಟ್ ಬ್ಯಾಟಿಂಗ್ ಬದಲು ಬೌಲಿಂಗ್ನತ್ತ ವಾಲಿದ್ದಾರೆ ಅನಿಸ್ತಿದೆ. ಹೀಗಾಗಿಯೇ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡ್ತಿರುವುದು. ಇದರಿಂದ ಸ್ಪಷ್ವವಾಗಿ ಗೊತ್ತಾಗ್ತಿದೆ ಜೋ ರೂಟ್, ರೂಟ್ ತಪ್ಪಿದ್ದಾರೆ ಎಂಬುದು.
ದೇಸಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ಬೇಡ: BCCI ಖಡಕ್ ವಾರ್ನಿಂಗ್
ಜೋ ರೂಟ್ ಬ್ಯಾಟಿಂಗ್ ಆಲ್ರೌಂಡರ್. ಅವರ ಮೊದಲ ಆದ್ಯತೆ ಬ್ಯಾಟಿಂಗ್.. ಅರೆಕಾಲಿಕ ಸ್ಪಿನ್ನರ್. ಆದ್ರೆ ಭಾರತೀಯ ಪಿಚ್ಗಳು ಸ್ಪಿನ್ನರ್ಸ್ಗೆ ಹೆಲ್ಪ್ ಆಗೋದ್ರಿಂದ ರೂಟ್ ಅವರಿಂದ ಹೆಚ್ಚು ಬೌಲಿಂಗ್ ಮಾಡಿಸಲಾಗ್ತಿದೆ. ಬೌಲಿಂಗ್ ಮಾಡಿ ಸುಸ್ತಾಗೋ ರೂಟ್, ಬ್ಯಾಟಿಂಗ್ ವೇಳೆ ಕ್ರೀಸಿನಲ್ಲಿ ಕಚ್ಚಿ ನಿಲ್ಲಲು ಆಗ್ತಿಲ್ಲ. ಮುಂದಿನ ಎರಡು ಟೆಸ್ಟ್ನಲ್ಲಾದ್ರೂ ರೂಟ್ ಅವರಿಂದ ಬೌಲಿಂಗ್ ಕಡಿಮೆ ಮಾಡಿಸಿ, ಬ್ಯಾಟಿಂಗ್ನಲ್ಲಿ ಗಮನ ಹರಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಮೇಲಿದೆ. ಆಗಷ್ಟೇ ರೂಟ್ ಫಾರ್ಮ್ಗೆ ಮರಳಲು ಸಾಧ್ಯ.
- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್