ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮಿಂಚಲು ಯಶಸ್ವಿ ಜೈಸ್ವಾಲ್ ರೆಡಿ..!
ಸದ್ಯ ಭಾರತೀಯ ಕ್ರಿಕೆಟ್‌ನ ಹೊಸ ಸೂಪರ್ ಸ್ಟಾರ್ ಅಂದ್ರೆ ಅದು, ಯಶಸ್ವಿ ಜೈಸ್ವಾಲ್.! ಈ ಯಂಗ್‌ಸ್ಟರ್ ಖತರ್ನಾಕ್ ಬ್ಯಾಟಿಂಗ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾನೆ. ಸದ್ಯ ನಡೆಯುತ್ತಿರೋ ಇಂಗ್ಲೆಂಡ್ ವಿರುದ್ಧದ ಸರಣಿ ಯಲ್ಲಿ ಸತತ 2 ಪಂದ್ಯಗಳಲ್ಲಿ 2 ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾನೆ. ಆದ್ರೆ, ಇನ್ಮುಂದೆ ಈ ಎಡಗೈ ಬ್ಯಾಟರ್, ಬೌಲಿಂಗ್ನಲ್ಲೂ ಮಿಂಚೋ ಪ್ಲಾನ್ ಮಾಡಿದ್ದಾನೆ.
ಬೆಂಗಳೂರು(ಫೆ.20): ಟೀಂ ಇಂಡಿಯಾದ ಈ ಯಂಗ್ ಬ್ಯಾಟರ್, ಸದ್ಯ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾನೆ. ಆದ್ರೆ, ಈತ ಡ್ಯಾಶಿಂಗ್ ಬ್ಯಾಟರ್ ಮಾತ್ರ ಅಲ್ಲ. ಲೆಗ್ ಸ್ಪಿನ್ನರ್ ಕೂಡ ಹೌದು. ಭಾರತದ ಸ್ಪಿನ್ ಲೆಜೆಂಡ್ ಒಬ್ರು ಈತನ ಸ್ಪಿನ್ ಟ್ಯಾಲೆಂಟ್ ಗುರುತಿಸಿದ್ದಾರೆ. ಯಾವುದೇ ಕಾರಣಕ್ಕೂ ಬೌಲಿಂಗ್ ಬಿಡಬೇಡ ಅಂತ ಸಲಹೆ ನೀಡಿದ್ದಾರೆ. ನಾನ್ಯಾರ ಬಗ್ಗೆ ಹೇಳ್ತಿದ್ದೀನಿ ಅನ್ಕೊಂಡ್ರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಯಶಸ್ವಿಯ ಸ್ಪಿನ್ ಟ್ಯಾಲೆಂಟ್ ಗುರುತಿಸಿದ ಸ್ಪಿನ್ ಲೆಜೆಂಡ್..!
ಸದ್ಯ ಭಾರತೀಯ ಕ್ರಿಕೆಟ್‌ನ ಹೊಸ ಸೂಪರ್ ಸ್ಟಾರ್ ಅಂದ್ರೆ ಅದು, ಯಶಸ್ವಿ ಜೈಸ್ವಾಲ್.! ಈ ಯಂಗ್‌ಸ್ಟರ್ ಖತರ್ನಾಕ್ ಬ್ಯಾಟಿಂಗ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾನೆ. ಸದ್ಯ ನಡೆಯುತ್ತಿರೋ ಇಂಗ್ಲೆಂಡ್ ವಿರುದ್ಧದ ಸರಣಿ ಯಲ್ಲಿ ಸತತ 2 ಪಂದ್ಯಗಳಲ್ಲಿ 2 ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾನೆ. ಆದ್ರೆ, ಇನ್ಮುಂದೆ ಈ ಎಡಗೈ ಬ್ಯಾಟರ್, ಬೌಲಿಂಗ್ನಲ್ಲೂ ಮಿಂಚೋ ಪ್ಲಾನ್ ಮಾಡಿದ್ದಾನೆ.
ಯೆಸ್, ಯಶಸ್ವಿ ಜೈಸ್ವಾಲ್ ಬ್ಯಾಟ್ ಜೊತೆಗೆ ಬಾಲ್ ಮೂಲಕವೂ ಅಬ್ಬರಿಸಿದ್ರು ಅಚ್ಚರಿ ಇಲ್ಲ. ಯಾಕಂದ್ರೆ, ಯಶಸ್ವಿ ಕೇವಲ ಬ್ಯಾಟರ್ ಮಾತ್ರ ಅಲ್ಲ. ಲೆಗ್ ಸ್ಪಿನ್ನರ್ ಕೂಡ ಹೌದು. ಭಾರತದ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಜೈಸ್ವಾಲ್ರ ಸ್ಪಿನ್ ಟ್ಯಾಲೆಂಟ್ ಗುರುತಿಸಿದ್ದಾರೆ. 3ನೇ ಟೆಸ್ಟ್ ಮುಗಿದ ನಂತರ ಕುಂಬ್ಳೆ, ಜೈಸ್ವಾಲ್‌ಗೆ ನಿನ್ನೊಳಗೊಬ್ಬ ಲೆಗ್ ಸ್ಪಿನ್ನರ್ ಇದ್ದಾನೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಜೊತೆಗೆ ಸ್ಪಿನ್ ಬೌಲಿಂಗ್ ಪ್ರಾಕ್ಟೀಸ್ ಮಾಡು ಅಂತ ಸಲಹೆ ನೀಡಿದ್ರು.
ಹರ್ಷ ಬೋಗ್ಲೆ VS ಕೊಹ್ಲಿ ಫ್ಯಾನ್ಸ್ ವಾರ್..! ರನ್ ಮಷಿನ್‌ಗೆ ಅವಮಾನ ಮಾಡಿದ್ರಾ ಬೋಗ್ಲೆ..?
ಯಶಸ್ವಿ ಜೈಸ್ವಾಲ್ ನಾನು ಗಮನಿಸಿದ ಹಾಗೇ, ನೀನು ಸಹಜವಾಗಿ ಲೆಗ್‌ಸ್ಪಿನ್ ಮಾಡಬಲ್ಲೆ. ಅದನ್ನ ಬಿಡಬೇಡ, ಮುಂದುವರಿಸು. ಎಂತಹದೇ ಸಂದರ್ಭ ದಲ್ಲೂ ಬೌಲಿಂಗ್ ಮಾಡೋದನ್ನ ನಿಲ್ಲಿಸಬೇಡ. ಈ ಬೌಲಿಂಗ್ ಯಾವಾಗ ಉಪಯೋಗಕ್ಕೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ರೋಹಿತ್ ಶರ್ಮಾ ಬಳಿ ಹೋಗಿ ನಾನು ಕೆಲ ಓವರ್ ಬೌಲಿಂಗ್ ಮಾಡುತ್ತೇನೆ ಅಂತ ಕೇಳುವಂತೆ ಅನಿಲ್ ಕುಂಬ್ಳೆ ಸಲೆಹ ನೀಡಿದ್ರು.
ಪಾರ್ಟ್ ಟೈಮ್ ಬೌಲರ್ ಆಗ್ತಾರಾ ಯಶಸ್ವಿ ಜೈಸ್ವಾಲ್..?
ಟೀಂ ಇಂಡಿಯಾದಲ್ಲಿ ಸದ್ಯ ಪಾರ್ಟ್ ಟೈಮ್ ಬೌಲರ್ಗಳೇ ಇಲ್ಲ. ಇದರಿಂದ ತಂಡಕ್ಕೆ ಹಿನ್ನಡೆಯಾಗ್ತಿದೆ. ಈ ಮೊದಲು ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಎಕ್ಸ್ಟ್ರಾ ಬೌಲರ್ಗಳಾಗಿ ಮಿಂಚ್ತಿದ್ರು. ಆದ್ರೀಗ ತಂಡದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ನೆರವಾಗಲ್ಲ ಆಟಗಾರರಿಲ್ಲ. ಇದರಿಂದ ಜೈಸ್ವಾಲ್ರನ್ನ ಪಾರ್ಟ್ ಟೈಮ್ ಬೌಲರ್ ಆಗಿ ರೂಪಿಸೋ ಪ್ಲಾನ್ ನಮ್ಮ ಮುಂದಿದೆ ಅಂತ ಟೀಂ ಇಂಡಿಯಾ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಈ ಹಿಂದೆಯೇ ಹೇಳಿದ್ರು.
ದೇಸಿ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ಬೇಡ: BCCI ಖಡಕ್ ವಾರ್ನಿಂಗ್
ಯಶಸ್ವಿಗೆ ಲಿಸ್ಟ್ ಎ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಿದ ಅನುಭವವಿದೆ. 7 ವಿಕೆಟ್ಗಳನ್ನೂ ಪಡದುಕೊಂಡಿದ್ದಾರೆ. 31 ರನ್ ನೀಡಿ 2 ವಿಕೆಟ್ ಪಡೆದು ಕೊಂಡದ್ದು ಯಶಸ್ವಿಯ ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ. ಹಿಂದೊಮ್ಮೆ ವೆಸ್ಟ್ ಇಂಡೀಸ್ ಟೂರ್ ವೇಳೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಯಶಸ್ವಿ ಬೌಲಿಂಗ್ ಬಗ್ಗೆ ಮಾತನಾಡಿದ್ರು. ಜೈಸ್ವಾಲ್ಗೆ ಉತ್ತಮ ಬೌಲರ್ಗಳಾಗುವ ಸಾಮರ್ಥ್ಯವಿದೆ. ಅವರು ಬೌಲಿಂಗ್ ಮಾಡುವುದನ್ನ ಸದ್ಯದಲ್ಲಿಯೇ ನೋಡಲಿದ್ದೀರಾ ಅಂದಿದ್ರು.
ಒಟ್ಟಿನಲ್ಲಿ ಬ್ಯಾಟಿಂಗ್ನಲ್ಲಿ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿರೋ ಯಶಸ್ವಿ, ಬೌಲಿಂಗ್ನಲ್ಲೂ ಮಿಂಚೋ ಕಾಲ ದೂರವಿಲ್ಲ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್