ಇಂದೋರ್(ನ.15): ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ, ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಸಿಡಿಸಿದ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾ 2ನೇ ದಿನದಾಟದ ಅಂತ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 493 ರನ್ ಸಿಡಿಸಿದೆ. ಈ ಮೂಲಕ 343 ರನ್ ಮುನ್ನಡೆ ಪಡೆದುಕೊಂಡಿದೆ.

ಇದನ್ನೂ ಓದಿ: INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

1 ವಿಕೆಟ್ ನಷ್ಟಕ್ಕೆ 86 ರನ್‌ಗಳೊಂದಿಗೆ ಭಾರತ 2ನೇ ದಿನದಾಟ ಮುಂದುವರಿಸಿತು.   ಭಾರತಕ್ಕೆ ಮಂಯಾಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದರು. ಪೂಜಾರಾ 54 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರು.

ಅಜಿಂಕ್ಯ ರಹಾನೆ ಹಾಗೂ ಮಯಾಂಕ್ ಹೋರಾಟಕ್ಕೆ ಬಾಂಗ್ಲಾದೇಶ ಸುಸ್ತಾಯಿತು. ಮಯಾಂಕ್ ಸೆಂಚುರಿ ಸಿಡಿಸಿ ಮುನ್ನಗ್ಗಿದರೆ, ರಹಾನೆ ಹಾಫ್ ಸೆಂಚುರಿ ಸಿಡಿಸಿದರು. ಆದರೆ ರಹಾನೆ 86 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ ಜೊತೆ ಬ್ಯಾಟಿಂಗ್ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಸಿಡಿಸಿ ದಾಖಲೆ ಬರೆದರು.

ಇದನ್ನೂ ಓದಿ: ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!.

ಡಬಲ್ ಸೆಂಚುರಿ ಬಳಿಕ ವೇಗವಾಗಿ ಬ್ಯಾಟ್ ಬೀಸಿದ ಮಯಾಂಕ್ 243 ರನ್ ಸಿಡಿಸಿ ಔಟಾದರು. ವೃದ್ಧಿಮಾನ್ ಸಾಹ 12 ರನ್ ಸಿಡಿಸಿ  ನಿರ್ಗಮಿಸಿದರು. ಉಮೇಶ್ ಯಾದವ್ ಜೊತೆ ಸೇರಿದ ರವೀಂದ್ರ ಜಡೇಜಾ ದಿಟ್ಟ ಹೋರಾಟ ನೀಡಿದರು. ಜಡೇಜಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ದಿನದಾಟ ಅಂತ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 493 ರನ್ ಸಿಡಿಸಿ 343 ರನ್ ಮುನ್ನಡೆ ಪಡೆದುಕೊಂಡಿದೆ. ಜಡೇಜಾ ಅಜೇಯ 60 ರನ್ ಸಿಡಿಸಿದರೆ, ಉಮೇಶ್ ಯಾದವ್ ಅಜೇಯ 25 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.