INDvBAN ಇಂದೋರ್ ಟೆಸ್ಟ್; ಮೊದಲ ದಿನ ಭಾರತಕ್ಕೆ ಭರ್ಜರಿ ಮೈಲುಗೈ!

ಸೌತ್ ಆಫ್ರಿಕಾ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶ ವಿರುದ್ಧದ ಇಂದೋರ್ ಟೆಸ್ಟ್ ಪಂದ್ಯದಲ್ಲೂ  ಪರಾಕ್ರಮ ಮುಂದುವರಿಸಿದೆ. ಮೊದಲ ದಿನ ಬಾಂಗ್ಲಾ ತಂಡವವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ, ದಿಟ್ಟ ತಿರುಗೇಟು ನೀಡಿದೆ. ಮೊದಲ ದಿನದಾಟದ ಹೈಲೈಟ್ಸ್ ಇಲ್ಲಿದೆ.

India vs bangladesh indore test mayank pujara take india to comfortable position at day 1

ಇಂದೋರ್(ನ.14): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಪಾಲಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಬಾಂಗ್ಲಾಗೆ ಶಾಕ್ ನೀಡಿದೆ. ಬಾಂಗ್ಲಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಮಾಡಿದದ ಭಾರತ, ಮೊದಲ ದಿನದಾಟದ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಸಿಡಿಸಿದೆ. 

ಇದನ್ನೂ ಓದಿ: ಭಾರತೀಯ ಬೌಲರ್‌ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!

ಭಾರತೀಯ ಬೌಲರ್‌ಗಳ ಪರಾಕ್ರಮಕ್ಕೆ ತತ್ತರಿಸಿದ ಬಾಂಗ್ಲಾದೇಶ ಕೇವಲ 150 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮಾ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ  ಭಾರತದ ಆರಂಭಿಕರಿಂದೆ ಕೇವಲ 14 ರನ್ ಜೊತೆಯಾಟ ಮಾತ್ರ ಮೂಡಿಬಂತು.

ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಜೊತೆಯಾಟದಿಂದ ಬಾಂಗ್ಲಾದೇಶ ನಿರೀಕ್ಷೆ ತಲೆಕೆಳಗಾಯಿತು. ಮಯಾಂಕ್ ಅಜೇಯ 37 ಹಾಗೂ ಪೂಜಾರ ಅಜೇಯ  43 ರನ್ ಸಿಡಿಸಿದರು. ದಿನದಾಟ ಅಂತ್ಯದಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 86 ರನ್ ಸಿಡಿಸಿತು. ಮೊದಲ ಇನಿಂಗ್ಸ್‌ನಲ್ಲಿ 64 ರನ್ ಹಿನ್ನಡೆಯಲ್ಲಿದೆ.

ಇದನ್ನೂ ಓದಿ: ಇಂದೋರ್ ಟೆಸ್ಟ್: ಮತ್ತೆ ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್..!

ಭಾರತದ ಮೊದಲ ಇನಿಂಗ್ಸ್ ಬ್ಯಾಟಿಂಗ್‌ಗೂ ಮುನ್ನ ಬಾಂಗ್ಲಾದೇಶ ನಿರೀಕ್ಷಿತ ಹೋರಾಟ ನೀಡಲಿಲ್ಲ. ನಾಯಕ ಮೊಮಿನಲ್ ಹಕ್ 37, ಮುಶ್ಫಿಕರ್ ರಹೀಮ್ 43, ಲಿಟ್ಟನ್ ದಾಸ್ 21 ರನ್ ಕಾಣಿಕೆ ನೀಡಿದರು. ಇತರ ಬ್ಯಾಟ್ಸ‌ಮನ್‌ಗಳು ಆಸರೆಯಾಗಲಿಲ್ಲ. ಹೀಗಾಗಿ ಬಾಂಗ್ಲಾದೇಶ 150 ರನ್‌ಗೆ ಆಲೌಟ್ ಆಯಿತು. 

Latest Videos
Follow Us:
Download App:
  • android
  • ios