ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯಕ್ಕೆ ಚಂಡಮಾರುತ ಭೀತಿ ಎದುರಾಗಿದ್ದು, ಪಂದ್ಯ ನಡೆಯುತ್ತಾ ಅನ್ನೋ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಅಭಿಮಾನಿಗಳ ಕುತೂಹಲ ಹಾಗೂ ಆತಂಕಕ್ಕೆ ಹವಾಮಾನ ಇಲಾಖೆ ವರದಿ ನೀಡಿದೆ.
ರಾಜ್‌ಕೋಟ್(ನ.07): ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡ ಟೀಂ ಇಂಡಿಯಾಗೆ ಗೆಲ್ಲಲೇಬೇಕಾದ ಅನಿವಾರ್ಯತೆ, 2ನೇ ಪಂದ್ಯ ಗೆದ್ದು ಇತಿಹಾಸ ರಚಿಸಲು ಬಾಂಗ್ಲಾದೇಶ ತಯಾರಿ ಮಾಡಿದೆ. ಇದರ ನಡುವೆ ಮಹತ್ವದ ಪಂದ್ಯಕ್ಕೆ ಚಂಡಮಾರುತದ ಭೀತಿ ಎದುರಾಗಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲು ರೋಹಿತ್ ರೆಡಿ
ಮಹಾ ಸ್ಲೈಕ್ಲೋನ್ ಭೀತಿಯಿಂದ 2ನೇ ಟಿ20 ಪಂದ್ಯ ಸಂಪೂರ್ಣ ನಡೆಯುವುದು ಅನುಮಾನವಾಗಿದೆ. ಅರಬ್ಬಿ ಸಮುದ್ರದಿಂದ ಗುಜರಾತ್ ಕರಾವಳಿ ತೀರದ ಮೂಲಕ ಮಹಾ ಚಂಡಮಾರುತ ಹಾದು ಹೋಗಲಿದೆ. ಸದ್ಯ ಯಾವುದೇ ಮಳೆಯಾಗಿಲ್ಲ. ಆದರೆ ಯಾವುದೇ ಕ್ಷಣದಲ್ಲೂ ಪಂದ್ಯ ಮಳೆಗೆ ಆಹುತಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ರಾಜ್‌ಕೋಟ್‌ನಲ್ಲಿ ಮಳೆ ಇಲ್ಲವೇ ರನ್ ಮಳೆ!
ಮಹಾ ಚಂಡಮಾರುತದಿಂದ ಭಾರಿ ಮಳೆಯಾದಲ್ಲಿ ಪಂದ್ಯ ರದ್ದಾಗಲಿದೆ. ಸದ್ಯ ರಾಜ್‌ಕೋಟ್ ಸಂಪೂರ್ಣ ತಿಳಿಯಾಗಿದ್ದು, ಯಾವುದೇ ಆತಂಕವಿಲ್ಲ. ಕ್ರಿಕೆಟ್ ವಿಶ್ಲೇಷಕ, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ರಾಜ್‌ಕೋಟ್ ಹವಾಮಾನ ಕುರಿತು ವರದಿ ನೀಡಿದ್ದು, ಯಾವುದೇ ಆತಂಕ ಬೇಡ ಎಂದಿದ್ದಾರೆ. ಆದರೆ ಹವಮಾನ ವರದಿ ಪ್ರಕಾರ, ಚಂಡ ಮಾರುತು ನವೆಂಬರ್ 7 ಸಂಜೆ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ. ಹೀಗಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಮಳೆ ಭೀತಿ ನಡುವೆಯೂ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಭರ್ಜರಿ ಅಭ್ಯಾಸ ಮಾಡಿವೆ.
