Asianet Suvarna News Asianet Suvarna News

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲು ರೋಹಿತ್ ರೆಡಿ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಶತಕ ಸಿಡಿಸಿ ದಾಖಲೆ ಬರೆದಿರುವ ರೋಹಿತ್ ಶರ್ಮಾ, ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಪರ ವಿನೂತನ ಮೈಲಿಗಲ್ಲು ಸ್ಥಾಪಿಸಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ರೋಹಿತ್ ಪಾತ್ರರಾಗಲಿರುವ ದಾಖಲೆ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Rohit Sharma set to overtake Shahid Afridi in Rajkot T20I
Author
Bengaluru, First Published Nov 7, 2019, 1:09 PM IST | Last Updated Nov 7, 2019, 1:09 PM IST

ಬೆಂಗಳೂರು[ನ.07]: ಭಾರತ ತಂಡದ ಹಂಗಾಮಿ ನಾಯಕ ರೋಹಿತ್‌ ಶರ್ಮಾ, ಗುರು​ವಾರ ತಮ್ಮ 100ನೇ ಅಂತಾ​ರಾ​ಷ್ಟ್ರೀ​ಯ ಟಿ20 ಪಂದ್ಯ​ವನ್ನು ಆಡ​ಲಿ​ದ್ದಾರೆ. ಈ ಮೈಲಿ​ಗಲ್ಲು ತಲು​ಪ​ಲಿ​ರುವ ಭಾರ​ತದ ಮೊದಲ ಹಾಗೂ ವಿಶ್ವದ 2ನೇ ಆಟ​ಗಾರ ಎನ್ನುವ ಹಿರಿಮೆಗೆ ಅವರು ಪಾತ್ರ​ರಾ​ಗ​ಲಿ​ದ್ದಾರೆ. ಪಾಕಿ​ಸ್ತಾ​ನದ ಶೋಯಿಬ್‌ ಮಲಿಕ್‌ 111 ಪಂದ್ಯ​ಗ​ಳೊಂದಿಗೆ, ಅತಿ​ಹೆಚ್ಚು ಪಂದ್ಯ​ಗ​ಳ​ನ್ನಾ​ಡಿದ ಆಟ​ಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ​ದ​ಲ್ಲಿ​ದ್ದಾರೆ.

ರಾಜ್‌ಕೋಟ್‌ನಲ್ಲಿ ಮಳೆ ಇಲ್ಲವೇ ರನ್‌ ಮಳೆ!

ನವದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿ 99 ಪಂದ್ಯಗಳನ್ನಾಡಿದ್ದರು. ಈ ಮೂಲಕ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ದಾಖಲೆ ಸರಿಗಟ್ಟಿದ್ದರು. ಇದೀಗ ರೋಹಿತ್ ಶರ್ಮಾ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದರೆ ನೂರು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದಂತಾಗುತ್ತದೆ.

2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮಹತ್ತರ ಬದಲಾವಣೆ?

ಭಾರತದ ಎರಡನೇ ಕ್ರಿಕೆಟಿಗ: ಹೌದು, ಈ ಮೊದಲು ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ದಕ್ಷಿಣ ಆಫ್ರಿಕಾ ವಿರುದ್ಧ ಸೂರತ್’ನಲ್ಲಿ ಕಣಕ್ಕಿಳಿಯುವ ಮೂಲಕ 100 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದರು. ಇದೀಗ ಆ ಸಾಲಿಗೆ  ಹಿಟ್ ಮ್ಯಾನ್ ಸೇರ್ಪಡೆಯಾಗಲಿದ್ದಾರೆ.

ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಪಂದ್ಯವನ್ನು ಬಾಂಗ್ಲಾದೇಶ 7 ವಿಕೆಟ್’ಗಳಿಂದ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ರಾಜ್ ಕೋಟ್’ನಲ್ಲಿ ನಡೆಯಲಿರುವ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ರೋಹಿತ್ ಪಡೆ ಸಿಲುಕಿದೆ.

 

Latest Videos
Follow Us:
Download App:
  • android
  • ios