ODI World Cup 2023 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಇಂಡೋ-ಪಾಕ್ ಪಂದ್ಯ ಸೇರಿ 9 ಮ್ಯಾಚ್‌ ವೇಳಾಪಟ್ಟಿ ಬದಲು

ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ
ಭಾರತ-ಪಾಕ್ ಪಂದ್ಯ ಸೇರಿ 9 ಪಂದ್ಯಗಳ ವೇಳಾಪಟ್ಟಿ ಪರಿಷ್ಕರಣೆ
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತದ ಪಂದ್ಯದ ವೇಳಾಪಟ್ಟಿ ಬದಲಾವಣೆ

India v Pakistan clash among 9 World Cup 2023 fixtures rescheduled kvn

ಬೆಂಗಳೂರು(ಆ.09): ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ನೋಡಲು ಸಜ್ಜಾಗಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ಪಂದ್ಯವನ್ನಷ್ಟೇ ಅಲ್ಲದೇ ಮತ್ತೆ ಬೇರೆ ಬೇರೆ ತಂಡಗಳ ನಡುವಿನ 8 ಪಂದ್ಯಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.

ಹೌದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯವು ಅಕ್ಟೋಬರ್ 15ಕ್ಕೆ ನಿಗದಿಯಾಗಿತ್ತು. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲು ವೇದಿಕೆ ಸಜ್ಜಾಗಿತ್ತು. ಆದರೆ ಆ ಪಂದ್ಯವನ್ನು ಒಂದು ದಿನ ಮುಂಚಿನವಾಗಿ ಅಂದರೆ ಅಕ್ಟೋಬರ್ 14ರಂದು ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಧಿಕೃತವಾಗಿ ನಿಗದಿಯಾಗಿದೆ. 

ಅಹಮದಾಬಾದ್‌ ಬಳಿಕ ಈಗ ವಿಶ್ವಕಪ್ ವೇಳಾಪಟ್ಟಿ ಬದಲಿಗೆ ಕೋಲ್ಕತಾ ಮನವಿ..! ಕಾರಣ ಏನು?

ಇನ್ನು ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿ ಪರಿಷ್ಕರಣೆಯಾದ ಬೆನ್ನಲ್ಲೇ , ಇಂಗ್ಲೆಂಡ್ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿ ಕೂಡಾ ಪರಿಷ್ಕರಣೆಯಾಗಿದೆ. ಈ ಮೊದಲು ಇಂಗ್ಲೆಂಡ್-ಆಫ್ಘಾನಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 14ರಂದು ಡೆಲ್ಲಿಯಲ್ಲಿ ಆಯೋಜಿಸಲಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ 24 ಗಂಟೆ ತಡವಾಗಿ ಅಂದರೆ ಅಕ್ಟೋಬರ್ 15ರಂದು ನಡೆಸಲು ನಿರ್ಧರಿಸಲಾಗಿದೆ.

Schedule Shuffle Alert 🚨🔁

Here are our #MenInBlue's revised dates for the upcoming World Cup 🗓️

Make sure to put in an early leave request! 😉#PlayBold #TeamIndia #CWC23 pic.twitter.com/uKTg6XXJ1y

— Royal Challengers Bangalore (@RCBTweets) August 9, 2023

ಇನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ಹೈದರಾಬಾದ್‌ನಲ್ಲಿ ಅಕ್ಟೋಬರ್ 12ಕ್ಕೆ ನಿಗದಿಯಾಗಿದ್ದ ಪಂದ್ಯವನ್ನು ಎರಡು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 10ರಂದು ಆಯೋಜಿಸಲು ತೀರ್ಮಾನಿಸಲಾಗಿದೆ. ಇನ್ನು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಲಖನೌದಲ್ಲಿ ಅಕ್ಟೋಬರ್ 13ರಂದು ನಡೆಯಬೇಕಿದ್ದ ಹೈವೋಲ್ಟೇಜ್ ಪಂದ್ಯ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 12ರಂದು ನಡೆಯಲಿದೆ.

World Cup 2023: ಅಕ್ಟೋಬರ್ 15ರ ಬದಲು ಈ ಡೇಟ್‌ಗೆ ಭಾರತ ಎದುರು ಆಡಲು ಒಪ್ಪಿಕೊಂಡ ಪಾಕಿಸ್ತಾನ..!

ಅದೇ ರೀತಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವೆ ಅಕ್ಟೋಬರ್ 14ರಂದು ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯವು ಕೂಡಾ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 13ರ ಶುಕ್ರವಾರ ನಡೆಯಲಿದ್ದು, ಈ ಪಂದ್ಯವು ಹಗಲು-ರಾತ್ರಿ ಮಾದರಿಯ ಪಂದ್ಯವಾಗಿರಲಿದೆ. ಇನ್ನು ಭಾರತ ತಂಡದ ತನ್ನ ಪಾಲಿನ ಕೊನೆಯ ಲೀಗ್ ಪಂದ್ಯದ ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಿದ್ದು, ಈ ಮೊದಲು ನವೆಂಬರ್ 11ರಂದು ನೆದರ್‌ಲೆಂಡ್ಸ್ ವಿರುದ್ದ ನಿಗದಿಯಾಗಿದ್ದ ಪಂದ್ಯವು ಇದೀಗ ನವೆಂಬರ್ 12ಕ್ಕೆ ಮುಂದೂಡಲ್ಪಟ್ಟಿದ್ದು, ಈ ಪಂದ್ಯ ಕೂಡಾ ಹಗಲು ರಾತ್ರಿ ಪಂದ್ಯವಾಗಿರಲಿದೆ. 

ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಂದು ಆರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಇನ್ನು ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ನವೆಂಬರ್ 19ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.

Latest Videos
Follow Us:
Download App:
  • android
  • ios