ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತ 248 ರನ್ ಟಾರ್ಗೆಟ್ ನೀಡಿತ್ತು. ಇಂಗ್ಲೆಂಡ್ ಕೇವಲ 97 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ದಾಖಲೆಯ ಗೆಲವು ಕಂಡ ಭಾರತ 4-1 ಅಂತರದಲ್ಲಿ ಸರಣಿ ಗೆದ್ದಿದೆ. ಈ ಗೆಲುವಿನೊಂದಿಗೆ ಭಾರತ ಬರೆದ ದಾಖಲೆ ಏನು?

ನವದೆಹಲಿ(ಫೆ.02) ಭಾರತ ಬೃಹತ್ ಮೊತ್ತ ನೋಡಿ ಬೆಚ್ಚಿದ್ದ ಇಂಗ್ಲೆಂಡ್ 10.3 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 150 ರನ್ ಗೆಲುವು ಕಂಡಿದೆ. ಟಿ20ಯಲ್ಲಿ ಗರಿಷ್ಠ ಅಂತರದ ಗೆಲುವಿನ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಭಾರತ 247 ರನ್ ಸಿಡಿಸಿದ್ದರೆ, ಇಂಗ್ಲೆಂಡ್ 97 ರನ್ ಸಿಡಿಸಿ ಆಲೌಟ್ ಆಗಿದೆ. ಟೀಂ ಇಂಡಿಯಾ ದಾಳಿಗೆ ಇಂಗ್ಲೆಂಡ್ ಬಳಿ ಉತ್ತರವೇ ಇರಲಿಲ್ಲ.

ಚೇಸಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಶಿವಂ ದುಬೆ ಹಾಗೂ ಅಭಿಷೇಕ್ ಶರ್ಮಾ ದಾಳಿ ಕಗ್ಗಂಟಾಯಿತು. ಶಮಿ 3 ವಿಕೆಟ್ ಕಬಳಿಸಿದರೆ ವರುಣ್, ಶಿವಂ, ಅಭಿಷೇಕ್ ತಲಾ 2 ವಿಕೆಟ್ ಪಡೆದರು. ಬಿಷ್ಣೋಯ್ 1 ವಿಕೆಟ್ ಕಬಳಿಸಿದರು. 

ಅಭಿಷೇಕ್ ಸೆಂಚುರಿಗೆ ಬೆಚ್ಚಿದ ಇಂಗ್ಲೆಂಡ್, 248 ಟಾರ್ಗೆಟ್ ಕೊಟ್ಟು ಹಲವು ದಾಖಲೆ ಬರೆದ ಭಾರತ

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಭಾರತಕ್ಕೆ ಅಭಿಷೇಕ್​ ಶರ್ಮಾ (54 ಎಸೆತಗಳಲ್ಲಿ 135) ಅವರ ಶತಕ ಭಾರೀ ಮೊತ್ತ ಕಲೆಹಾಕಲು ನೆರವಾಯಿತು. ಸಂಜು ಸ್ಯಾಮ್ಸನ್​ (16) ಮತ್ತು ಸೂರ್ಯಕುಮಾರ್​ ಯಾದವ್​ (2) ಮತ್ತೊಮ್ಮೆ ನಿರಾಸೆ ಮೂಡಿಸಿದರು. 30 ರನ್​ ಗಳಿಸಿದ ಶಿವಂ ದುಬೆ ಭಾರತದ ಎರಡನೇ ಅತ್ಯಧಿಕ ಸ್ಕೋರರ್​. ಭಾರತ ಒಂಬತ್ತು ವಿಕೆಟ್​ ಕಳೆದುಕೊಂಡಿತು. ಇಂಗ್ಲೆಂಡ್​ ಪರ ಬ್ರೈಡನ್​ ಕಾರ್ಸ್​ ಮೂರು ವಿಕೆಟ್​ ಪಡೆದರು.

ಸಾಲ್ಟ್​ ಹೊರತಾಗಿ ಇಂಗ್ಲೆಂಡ್​ ಪರ ಜೇಕಬ್​ ಬೆಥೆಲ್​ (10) ಮಾತ್ರ ಎರಡಂಕಿ ಅಂಕ ದಾಟಿದರು. ಮೊದಲ ಎರಡು ಓವರ್​ಗಳಲ್ಲಿ ಇಂಗ್ಲೆಂಡ್​ 23 ರನ್​ ಗಳಿಸಿದರೂ ನಂತರ ಕುಸಿತ ಕಂಡಿತು. ಬೆನ್​ ಡಕೆಟ್​ (0) ಮೊದಲ ಎಸೆತದಲ್ಲೇ ಔಟಾದರು. ಜೋಸ್​ ಬಟ್ಲರ್​ (7), ಹ್ಯಾರಿ ಬ್ರೂಕ್​ (2), ಲಿಯಾಮ್​ ಲಿವಿಂಗ್​ಸ್ಟೋನ್​ (9), ಬ್ರೈಡನ್​ ಕಾರ್ಸ್​ (3) ಯಾರೂ ಎರಡಂಕಿ ಅಂಕ ದಾಟಲಿಲ್ಲ. ಜಾಮಿ ಓವರ್ಟನ್​ (1), ಆದಿಲ್​ ರಶೀದ್​ (6), ಮಾರ್ಕ್​ ವುಡ್​ (0) ಔಟಾದ ಇತರ ಆಟಗಾರರು. ಜಾಫ್ರಾ ಆರ್ಚರ್​ (1) ಔಟಾಗದೆ ಉಳಿದರು.

ಇದಕ್ಕೂ ಮೊದಲು, ಆರ್ಚರ್​ ಎಸೆದ ಮೊದಲ ಓವರ್​ನಲ್ಲಿ 16 ರನ್​ ಗಳಿಸುವ ಮೂಲಕ ಭಾರತ ಆರಂಭಿಸಿತು. ಆ ಓವರ್​ನಲ್ಲಿ ಸಂಜು ಎರಡು ಸಿಕ್ಸರ್​ ಮತ್ತು ಮೂರು ಬೌಂಡರಿ ಬಾರಿಸಿದರು. ಆದರೆ ಎರಡನೇ ಓವರ್​ನ ಐದನೇ ಎಸೆತದಲ್ಲಿ ವುಡ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ತಿಲಕ್​ ವರ್ಮಾ (15 ಎಸೆತಗಳಲ್ಲಿ 24) ಅಭಿಷೇಕ್​ ಜೊತೆ 115 ರನ್​ ಸೇರಿಸಿದರು. ಇದರಲ್ಲಿ ಹೆಚ್ಚಿನವು ಅಭಿಷೇಕ್​ ಕೊಡುಗೆ. ಒಂಬತ್ತನೇ ಓವರ್​ನಲ್ಲಿ ತಿಲಕ್​ ಕಾರ್ಸ್​ಗೆ ವಿಕೆಟ್​ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್​ ಕೇವಲ ಮೂರು ಎಸೆತಗಳನ್ನು ಎದುರಿಸಿದರು. ಕಾರ್ಸ್​ ಅವರನ್ನೂ ಔಟ್​ ಮಾಡಿದರು.

ನಂತರ ದುಬೆ ಮತ್ತು ಅಭಿಷೇಕ್​ 37 ರನ್​ ಸೇರಿಸಿದರು. ದುಬೆ ಔಟಾದಾಗ ಭಾರತದ ಮೊತ್ತ ನಾಲ್ಕು ವಿಕೆಟ್​ಗೆ 182 ರನ್​. ಹಾರ್ದಿಕ್​ ಪಾಂಡ್ಯ (9) ಮತ್ತು ರಿಂಕು ಸಿಂಗ್​ (9) ನಿರಾಸೆ ಮೂಡಿಸಿದರೂ ಅಭಿಷೇಕ್​ ದೊಡ್ಡ ಹೊಡೆತಗಳನ್ನು ಮುಂದುವರಿಸಿದರು. 18ನೇ ಓವರ್​ನಲ್ಲಿ ಅವರು ಔಟಾದರು. 13 ಸಿಕ್ಸರ್​ ಮತ್ತು ಏಳು ಬೌಂಡರಿಗಳನ್ನು ಅವರ ಇನ್ನಿಂಗ್ಸ್​ ಒಳಗೊಂಡಿತ್ತು. ಭಾರತದ ಟಿ20 ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್​ ಇದಾಗಿದೆ. 126 ರನ್​ ಗಳಿಸಿದ್ದ ಶುಭ್​ಮನ್​ ಗಿಲ್​ ಅವರನ್ನು ಹಿಂದಿಕ್ಕಿದರು. ಟಿ20ಯಲ್ಲಿ ಭಾರತದ ಎರಡನೇ ವೇಗದ ಶತಕವೂ ಇದಾಗಿದೆ. ಅಕ್ಷರ್​ ಪಟೇಲ್​ (15) ರನೌಟ್​ ಆದರು. ರವಿ ಬಿಷ್ಣೋಯ್​ (0) ಔಟಾದ ಇನ್ನೊಬ್ಬ ಆಟಗಾರ. ಮೊಹಮ್ಮದ್​ ಶಮಿ (0) ಔಟಾಗದೆ ಉಳಿದರು.

'ನನ್ನ ಹೆಂಡತಿ ನೋಡುತ್ತಾಳೆ, ನಾನದನ್ನು ಹೇಳೊಲ್ಲ': ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ರೋಹಿತ್ ಶರ್ಮಾ!