ಇಂಗ್ಲೆಂಡ್ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅತೀ ವೇಗದ ಶತಕ ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ. ಇತ್ತ ಟೀಂ ಇಂಡಿಯಾ 248 ರನ್ ಟಾರ್ಗೆಟ್ ನೀಡಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಈ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆ ಏನು? 

ಮುಂಬೈ(ಫೆ.2) ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಪಂದ್ಯ ಕೊನೆಯ ಹಂತಕ್ಕೆ ತಲುಪಿದೆ. 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ಅಬ್ಬರದ ಬ್ಯಾಟಿಂಗ್ ಹಲವು ದಾಖಲೆಗೆ ಸಾಕ್ಷಿಯಾಗಿದೆ. ಅಭಿಷೇಕ್ ಶರ್ಮಾ ಭಾರತದ ಪರ ಎರಡನೇ ಅತೀವೇಗದ ಟಿ20 ಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 247 ರನ್ ಸಿಡಿಸಿದೆ. ಅಭಿಷೇಕ್ ಶರ್ಮಾ ಹಾಗೂ ಭಾರತ ಈ ಪಂದ್ಯದ ಮೂಲಕ ಹಲವು ದಾಖಲೆ ಬರೆದಿದೆ. ಅಭಿಷೇಕ್ ಶರ್ಮಾ 54 ಎಸೆತದಲ್ಲಿ 135 ರನ್ ಸಿಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ 247 ರನ್ ಟಾರ್ಗೆಟ್ ಟಿ20ಯಲ್ಲಿ ಭಾರತದ 4ನೇ ಗರಿಷ್ಠ ಮೊತ್ತ ಅನ್ನೋ ದಾಖಲೆ ಬರೆದಿದೆ

ಭಾರತದ ಗರಿಷ್ಠ ಟಿ20 ಸ್ಕೋರ್
297/6 vs ಬಾಂಗ್ಲಾದೇಶ (2024)
283/1 vs ಸೌತ್ ಆಫ್ರಿಕಾ( 2024)
260/5 vs ಶ್ರೀಲಂಕಾ( 2017)
247/9 vs ಇಂಗ್ಲೆಂಡ್ (2025)

'ನನ್ನ ಹೆಂಡತಿ ನೋಡುತ್ತಾಳೆ, ನಾನದನ್ನು ಹೇಳೊಲ್ಲ': ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ರೋಹಿತ್ ಶರ್ಮಾ!

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆಯನ್ನು ಅಭಿಷೇಕ್ ಶರ್ಮಾ ನಿರ್ಮಿಸಿದ್ದಾರೆ. ಈ ಮೂಲಕ ಶುಭಮನ್ ಗಿಲ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗರಿಷ್ಠ ರನ್
 135 ರನ್, ಅಭಿಷೇಖ್ ಶರ್ಮಾ, 2025 
126* ರನ್, ಶುಭಮನ್ ಗಿಲ್, 2023
123* ರನ್, ರುತುರಾಜ್ ಗಾಯಕ್ವಾಡ್, 2023
122* ರನ್, ವಿರಾಟ್ ಕೊಹ್ಲಿ, 2022
121* ರನ್, ರೋಹಿತ್ ಶರ್ಮಾ, 2024

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಕೀರ್ತಿಯೂ ಇದೀಗ ಅಭಿಷೇಕ್ ಶರ್ಮಾ ಪಾಲಾಗಿದೆ. ಈ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ 10 ಸಿಕ್ಸರ್ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದಿದ್ದಾರೆ. 

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್
 13 ಸಿಕ್ಸರ್, ಅಭಿಷೇಕ್ ಶರ್ಮಾ, 2025
10 ಸಿಕ್ಸರ್, ರೋಹಿತ್ ಶರ್ಮಾ, 2017
10 ಸಿಕ್ಸರ್, ಸಂಜು ಸ್ಯಾಮ್ಸನ್,2024
10 ಸಿಕ್ಸರ್, ತಿಲಕ್ ವರ್ಮಾ, 2024

ಭಾರತ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.

ಇಂಗ್ಲೆಂಡ್: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಬೆನ್ ಡಕೆಟ್, ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಜೇಮಿ ಓವರ್ಟನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.

ಅಂಡರ್ 19 ಮಹಿಳಾ ವಿಶ್ವಕಪ್: ಹರಿಣಗಳ ಬೇಟೆಯಾಡಿದ ಭಾರತ, ಸತತ ಎರಡನೇ ಬಾರಿಗೆ ಚಾಂಪಿಯನ್ ಕಿರೀಟ!