ಕೇವಲ ಎರಡೇ ತಂಡ, ಐಪಿಎಲ್ ಹರಾಜಿನ ಕುರಿತು ಅಚ್ಚರಿ ಹೇಳಿಕೆ ನೀಡಿದ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಆಯ್ಕೆಯಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ನಡುವೆ ವೈಭವ್ ನೀಡಿದ ಹೇಳಿಕೆಯೂ ಭಾರಿ ವೈರಲ್ ಆಗುತ್ತಿದೆ. ಅದರಲ್ಲೂ ಐಪಿಎಲ್ ಹರಾಜಿನ ಕುರತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಂಚಲನ ಸೃಷ್ಟಿಸಿದ ಹರಾಜು ಹೇಳಿಕೆ
ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿ ದಾಖಲೆ ಬರೆದ ವೈಭವ್ ಸೂರ್ಯವಂಶಿ ಇದೀಗ ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದರ ನಡುವೆ ವೈಭವ್ ಐಪಿಎಲ್ ಯಶಸ್ಸು ಹಾಗೂ ಹರಾಜಿನ ಕುರಿತು ಮಾತನಾಡಿರುವುದು ಸಂಚಲನ ಸೃಷ್ಟಿಸಿದೆ.
ಕೇವಲ ಎರಡೇ ತಂಡ, ವೈಭವ್ ಹೇಳಿದ್ದೇನು?
ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ವೈಭವ್ ಸೂರ್ಯವಂಶಿ 2025ರ ಐಪಿಎಲ್ ಹರಾಜು ಕುರಿತು ಮಾತನಾಡಿದ್ದಾರೆ. ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎರಡೇ ತಂಡ ನನ್ನ ಹೆಸರು ಬಂದಾಗ ಬಿಡ್ಡಿಂಗ್ ನಡೆಸಿತು. ಹೀಗೆ ಯಾಕೆ? ಎಂದು ವೈಭವ್ ಸೂರ್ಯವಂಶಿ ಪ್ರಶ್ನಿಸಿದ್ದಾರೆ.
ನನ್ನ ಪ್ರದರ್ಶನ ಉತ್ತಮವಾಗಿತ್ತು, ಆದರೆ..
ನಾನು ಉತ್ತಮ ಪ್ರದರ್ಶನ ನೀಡಿದ್ದೆ. ಟ್ರಯಲ್ಸ್‌ನಲ್ಲಿ ಉತ್ತಮವಾಗಿ ಆಡಿದ್ದೆ. ನನ್ನ ಇಡೀ ವರ್ಷದ ಪ್ರದರ್ಶನ ಉತ್ತಮವಾಗಿತ್ತು. ಆದರೆ ಹರಾಜಿನಲ್ಲಿ ಕೇವಲ ಎರಡು ತಂಡ ಮಾತ್ರ ಬಿಡ್ಡಿಂಗ್ ಮಾಡಿತ್ತು. ಕೆಲ ತಂಡಗಳಾದರೂ ಮುಂದೆ ಬರಬೇಕಿತ್ತು. ಒಬ್ಬ ಆಟಗಾರನಿಗೆ ಹೆಚ್ಚಿನ ತಂಡಗಳು ಬಿಡ್ಡಿಂಗ್ ಮಾಡುತ್ತಿದೆ ಎಂದರೆ ಉತ್ತಮವಾಗಿ ಆಡುತ್ತಾನೆ. ತಂಡಕ್ಕೆ ಅತ್ಯಮ್ಯೂಲ್ಯ ಎಂದು ಪರಿಗಣಿಸಲಾಗುತ್ತದೆ. ನಾನು ಇಷ್ಟು ಪ್ರದರ್ಶನ ನೀಡಿದರೂ ಎರಡೇ ತಂಡ ಮಾತ್ರ ಬಿಡ್ಡಿಂಗ್ ಮಾಡಿತ್ತು. ಯಾಕೆ ಹೀಗಾಯಿತು ಎಂದು ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ನನ್ನ ಪಿಕ್ ಮಾಡಿದ್ದು ಹೆಚ್ಚು ಖುಷಿ ನೀಡಿದೆ
ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ 1 ಕೋಟಿ ವರೆಗೆ ಬಿಡ್ಡಿಂಗ್ ಮಾಡಿದ್ದರು. ಆದರೆ ರಾಜಸ್ಥಾನ ರಾಯಲ್ಸ್ 1.10 ಕೋಟಿ ರೂಪಾಯಿ ನೀಡಿ ವೈಭವ್ ಸೂರ್ಯವಂಶಿ ಖರೀದಿಸಿತ್ತು. ದೇವರಿಗೆ ಧನ್ಯವಾದ, ನನ್ನನ್ನು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿತು. ನನಗೆ ಉತ್ತಮ ಮಾರ್ಗದರ್ಶನ ಸಿಕ್ಕಿತು. ಪ್ರೋತ್ಸಾಹ ಸಿಕ್ಕಿತು ಎಂದು ವೈಭವ್ ಹೇಳಿದ್ದಾರೆ.
ನನ್ನ ಫೋಕಸ್ ಒಂದೇ
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ದಿಗ್ಗಜ ಆಟಗಾರರು ಆಡಿದ್ದಾರೆ. ತಂಡದ ಕಲ್ಚರ್ ಹೇಗಿದೆ ಎಂದರೆ ಎಲ್ಲರೂ ನೇರವಾಗಿ ಸಿಗುತ್ತಾರೆ. ಕುಟುಂಬದ ರೀತಿ ಫೀಲ್ ಕೊಡುತ್ತೆ. ಎಲ್ಲರೂ ಉತ್ತಮವಾಗಿ ಸಲಹೆ ನೀಡುತ್ತಾರೆ. ಇದರಿಂದ ನನಗೆ ಬ್ಯಾಟಿಂಗ್ ಮೇಲೆ ಹೆಚ್ಚು ಫೋಕಸ್ ಮಾಡಲು ಸಾಧ್ಯವಾಗಿದೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ಆರೇಂಜ್ ಕ್ಯಾಪ್ ಸಾಧಕ
ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ, ಶೀಘ್ರದಲ್ಲೇ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. 15ರ ವಯಸ್ಸಿನ ಹುಡುಗ ವೈಭವ್ ಇದೀಗ ಟೀಂ ಇಂಡಿಯಾ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಐಪಿಎಲ್ 2026ರಲ್ಲಿ ಆರೇಂಜ್ ಕ್ಯಾಪ್ ಗೆದ್ದ ವೈಭವ್ ಇದೀಗ ಟೀಂ ಇಂಡಿಯಾದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

