ಚಾಂಪಿಯನ್ಸ್ ಟ್ರೋಫಿ ಜರ್ಸಿಯಲ್ಲಿ ಪಾಕಿಸ್ತಾನ ಹೆಸರು ನಿರಾಕರಿಸಿದ ಟೀಂ ಇಂಡಿಯಾ
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸಿರುವ ಪಾಕಿಸ್ತಾನಕ್ಕೆ ಬಿಸಿಸಿಐ ಮತ್ತೊಂದು ಸ್ಟ್ರೋಕ್ ನೀಡಿದೆ. ಇದೀಗ ಟೀಂ ಇಂಡಿಯಾ ಜರ್ಸಿಯಲ್ಲಿ ಪಾಕಿಸ್ತಾನ ಹೆಸರು ಹಾಕಲು ನಿರಾಕರಿಸಿದೆ.

ನವದೆಹಲಿ(ಜ.20) ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. 1996ರ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಐಸಿಸಿ ಟೂರ್ನಿ ಆಯೋಜಿಸುತ್ತಿದೆ. ಆದರೆ ಪಾಕಿಸ್ತಾನದ ತಲೆನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯ ಆಡಲಿದೆ. ಆದರೆ ಭಾರತದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿದೆ. ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಸ್ಟ್ರೋಕ್ ನೀಡಿದೆ. ಐಸಿಸಿ ಟೂರ್ನಿ ಆತಿಥ್ಯವಹಿಸುವ ದೇಶದ ಹೆಸರು ಎಲ್ಲಾ ತಂಡಗಳ ಜರ್ಸಿ ಮೇಲೆ ಇರಲಿದೆ. ಆದರೆ ಪಾಕಿಸ್ತಾನ ಹೆಸರು ಜರ್ಸಿಯಲ್ಲಿ ಹಾಕಲು ಬಿಸಿಸಿಐ ನಿರಾಕರಿಸಿದೆ ಎಂದು IANS ವರದಿ ಮಾಡಿದೆ.
ಭಾರತದ ಪಂದ್ಯಗಳನ್ನು ಪಾಕಿಸ್ತಾನ ಆಯೋಜಿಸುತ್ತಿಲ್ಲ. ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ದುಬೈ ಪ್ರವಾಸ ಮಾಡಲಿದೆ. ಭಾರತದ ಪಂದ್ಯಗಳನ್ನು ದುಬೈ ಆಯೋಜಿಸುತ್ತಿದೆ. ಹೀಗಾಗಿ ಆತಿಥ್ಯ ದೇಶ ಪಾಕಿಸ್ತಾನ ಹೆಸರನ್ನು ಟೀಂ ಇಂಡಿಯಾ ಜರ್ಸಿಯಲ್ಲಿ ಹಾಕಲು ಭಾರತ ನಿರಾಕರಿಸಿದೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಐಸಿಸಿ ಟೂರ್ನಿಗಳಲ್ಲಿ ಎಲ್ಲಾ ತಂಡಗಳು ಐಸಿಸಿ ಸಂಪ್ರದಾಯ ಪಾಲಿಸುತ್ತಾರೆ.ಆತಿಥ್ಯ ದೇಶದ ಹೆಸರನ್ನು ಹಾಕಿಸಿಕೊಳ್ಳುತ್ತದೆ. ಆದರೆ ಭಾರತ ನಿರಾಕರಿಸಿದೆ. ಭಾರತ ಪ್ರತಿ ಹಂತದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಪಿಸಿಬಿ ಆರೋಪಿಸಿದೆ. ಮೊದಲು ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಭಾರತ ನಿರಾಕರಿಸಿತ್ತು. ಎಲ್ಲಾ ರೀತಿಯ ಭದ್ರತೆಯ ಭರವಸೆ ನೀಡಿದರೂ ಪಾಕಿಸ್ತಾನ ಪ್ರವಾಸಕ್ಕೆ ಭಾರತ ಒಪ್ಪಿಲ್ಲ. ಟೂರ್ನಿಯನ್ನೇ ಬೇರೆಗೆ ಸ್ಥಳಾಂತರಿಸಲು ಭಾರತ ಸೂಚಿಸಿತ್ತು. ಬಳಿಕ ಉದ್ಘಾಟನಾ ಸಮಾರಂಭಕ್ಕೆ ನಾಯಕ ರೋಹಿತ್ ಶರ್ಮಾ ಕಳುಹಿಸಲು ಭಾರತ ನಿರಾಕರಿಸಿದೆ. ಇದೀಗ ಜರ್ಸಿ ಹೆಸರು ಹಾಕಿಸಲು ನಿರಾಕರಿಸಿದೆ ಎಂದು ಪಿಸಿಬಿ ಹೇಳಿದೆ. ಈ ಕುರಿತು IANS ವರದಿ ಮಾಡಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ಸಿರಾಜ್ ಕೈಬಿಟ್ಟಿದ್ದೇಕೆ? ಮೌನ ಮುರಿದ ಕ್ಯಾಪ್ಟನ್ ರೋಹಿತ್ ಶರ್ಮಾ
ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಆರಂಭಗೊಳ್ಳುತ್ತಿದೆ.ಆದರೆ ಭಾರತ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಆರಂಭಿಸಲಿದೆ. ಬಾಂಗ್ಲಾದೇಶ ವಿರುದ್ಧ ಭಾರತ ಪಂದ್ಯ ಆಡಲಿದೆ. ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಆದರೆ ಭಾರತ ವಿರುದ್ದ ಆಡುವ ತಂಡಗಳು ಪಾಕಿಸ್ತಾನ ಹಾಗೂ ದುಬೈ ಎರಡೂ ಕಡೆ ಪ್ರವಾಸ ಮಾಡಬೇಕಿದೆ. ಫೆಬ್ರವರಿ 23 ರಂದು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆತಿಥ್ಯವಹಿಸಿರುವ ಪಾಕಿಸ್ತಾನ ತಂಡ ದುಬೈಗೆ ಪ್ರವಾಸ ಮಾಡಬೇಕಿದೆ. ಕಾರಣ ಫೆಬ್ರವರಿ 23ರಂದು ಭಾರತ ಪಾಕಿಸ್ತಾನ ಪಂದ್ಯ ನಡೆಯಲಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ದ ಭಾರತ ಪಂದ್ಯ ಆಡಲಿದೆ.