ಭಾರತ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯ ಕೊಹ್ಲಿ, ಪಂತ್ ಹಾಫ್ ಸೆಂಚುರಿ, 5 ವಿಕೆಟ್ ನಷ್ಟಕ್ಕೆ 186 ರನ್ ವೆಸ್ಟ್ ಇಂಡೀಸ್ ಆರಂಭಿಕರಿಂದ ದಿಟ್ಟ ಉತ್ತರ

ಕೋಲ್ಕತಾ(ಫೆ.18) ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿದೆ. ವಿರಾಟ್ ಕೊಹ್ಲಿ, ರಿಷಬ್ ಪಂತ್ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿದೆ. ಈ ಮೂಲಕ ವಿಂಡೀಸ್‌ಗೆ 187 ರನ್ ಟಾರ್ಗೆಟ್ ನೀಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ರೋಹಿತ್ ಶರ್ಮಾ 19 ರನ್ ಸಿಡಿಸಿ ಔಟಾದರು. ಇತ್ತ ಆರಂಭಿಕ ಇಶಾನ್ ಕಿಶನ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. 59 ರನ್‌ಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡಿತು. ಕುಸಿತದ ತಂಡಕ್ಕೆ ನೆರವು ನೀಡಿದ ವಿರಾಟ್ ಕೊಹ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ದಿಢೀರ್ ಎನ್ನುವಂತೆ ಸನ್‌ರೈಸರ್ಸ್‌ಹೈದರಾಬಾದ್ ತಂಡದ ಕೋಚ್ ಹುದ್ದೆ ತೊರೆದ ಸೈಮನ್ ಕ್ಯಾಟಿಚ್‌.!

ಕಳಪೆ ಫಾರ್ಮ್‌ನಿಂದ ಟೀಕೆ ಎದುರಿಸಿದ್ದ ವಿರಾಟ್ ಕೊಹ್ಲಿ ಇದೀಗ ಹಾಫ್ ಸೆಂಚುರಿ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಕೊಹ್ಲಿ 39 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಆದರೆ ಸೂರ್ಯಕುಮಾರ್ ಯಾದವ್ 8 ರನ್ ಸಿಡಿಸಿ ಔಟಾದರು. ಪಂತ್ ಹಾಗೂ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಉತ್ತಮ ಮೊತ್ತ ಪೇರಿಸಿತು.

ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಟೀಂ ಇಂಡಿಯಾವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಿತು. ವಿರಾಟ್ ಕೊಹ್ಲಿ 41 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಆದರೆ ಪಂತ್ ಇನ್ನಿಂಗ್ಸ್ ಮುಂದುವರಿಯಿತು. ರಿಷಬ್ ಪಂತ್ ಹಾಗೂ ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಭಾರತದ ರನ್ ವೇಗ ಹೆಚ್ಚಿಸಿತು. ವೆಂಕಟೇಶ್ ಅಯ್ಯರ್ 18 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 33 ರನ್ ಸಿಡಿಸಿ ಔಟಾದರು.

IND vs WI T20 ರೋಹಿತ್ ಅಬ್ಬರ, ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು!

ರಿಷಬ್ ಪಂತ್ 28 ಎಸೆತದಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಅಜೇಯ 52 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತು. ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ 3 ವಿಕೆಟ್ ಕಬಳಿಸಿ ಮಿಂಚಿದರು. ರೋಮಾರಿಯೋ ಶೆಫಾರ್ಡ್ 1 ವಿಕೆಟ್ ಕಬಳಿಸಿದರೆ, ಶೆಲ್ಡಾನ್ ಕಾಟ್ರೆಲ್ ಒಂದು ವಿಕೆಟ್ ಕಬಳಿಸಿ ಮಿಂಚಿದರು.

ವಿರಾಟ್ ಕೊಹ್ಲಿ ಟಿ20 ಕರಿಯರ್
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 30 ಹಾಫ್ ಸೆಂಚುರಿ ಪೂರೈಸಿದ್ದಾರೆ. ಇನ್ನು 92 ಟಿ20 ಪಂದ್ಯದಿಂದ 3296 ರನ್ ಸಿಡಿಸಿದ್ದಾರೆ. 94 ರನ್ ಕೊಹ್ಲಿ ವೈಯುಕ್ತಿಗ ಗರಿಷ್ಠ ಸ್ಕೋರ್. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 137.68ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ವೆಸ್ಟ್ ಇಂಡೀಸ್ ಇನ್ನಿಂಗ್ಸ್:
ಟೀಂ ಇಂಡಿಯಾ ಬೃಹತ್ ಮೊತ್ತಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ದಿಟ್ಟ ಹೋರಾಟ ನೀಡಿದೆ. ಆದರೆ ವಿಂಡೀಸ್ ಜೊತೆಯಾಟಕ್ಕೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ ಬ್ರೇಕ್ ಹಾಕಿದರು. 34 ರನ್‌ಗಳಿಗೆ ವೆಸ್ಟ್ ಇಂಡೀಸ್ ಮೊದಲ ವಿಕೆಟ್ ಕಳೆದುಕೊಂಡಿತು. ಕೈಯ್ ಮೇಯರ್ಸ್ 8 ರನ್ ಸಿಡಿಸಿ ಔಟಾದರು.