Asianet Suvarna News Asianet Suvarna News

IND vs WI T20 ರೋಹಿತ್ ಅಬ್ಬರ, ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು!

  • ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಮೊದಲ ಟಿ20
  • ಟೀಂ ಇಂಡಿಯಾಗೆ 6 ವಿಕೆಟ್ ಭರ್ಜರಿ ಗೆಲುವು
  • ಸರಣಿಯಲ್ಲಿ ರೋಹಿತ್ ಶರ್ಮಾ ಸೈನ್ಯ 1-0 ಮುನ್ನಡೆ
Ind vs WI tst t20 Rohit sharma help Team india to beat west indies by 6 wickets in Kolkata Ckm
Author
Bengaluru, First Published Feb 16, 2022, 10:49 PM IST

ಕೋಲ್ಕತಾ(ಫೆ.16): ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ.ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್, ಇಶಾನ್ ಕಿಶನ್ ಅಬ್ಬರ, ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಅಯ್ಯರ್ ಹೋರಾಟದಿಂದ  ಟೀಂ ಇಂಡಿಯಾ ಕೋಲ್ಕತಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್ ಗೆಲುವು ಕಂಡಿದೆ.

ಗೆಲುವಿಗೆ 158 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಸ್ಫೋಟಕ ಆರಂಭ ನೀಡಿದರು. ಇದರಿಂದ ಟೀಂ ಇಂಡಿಯಾ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಕೇವಲ 19 ಎಸೆತದಲ್ಲಿ ರೋಹಿತ್ ಶರ್ಮಾ 40 ರನ್ ಸಿಡಿಸಿದರು. 210ರ ಸ್ಟ್ರೈಕ್‌ರೇಟ್‌ನಲ್ಲಿ ರೋಹಿತ್ ಬ್ಯಾಟ್ ಬೀಸಿದರು. ಸ್ಫೋಟಕ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ ಅರ್ಧಶತಕದಿಂದ ವಂಚಿತರಾದರು.

Yuzvendra Chahal : "ಪಾಜಿ, ನಿಂಬು ಕಟ್ಟಾ ಹೇ" ರೀಲ್ ಗೆ ಸಖತ್ ರೆಸ್ಪಾನ್ಸ್!

ಇಶಾನ್ ಕಿಶನ್ ಸಮಯೋಚಿತ ಬ್ಯಾಟಿಂಗ್ ಟೀಂ ಇಂಡಿಯಾಗೆ ನೆರವಾಯಿತು ಕಿಶನ್ 42 ಎಸೆತದಲ್ಲಿ 35 ರನ್ ಕಾಣಿಕೆ ನೀಡಿದರು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ವಿಕೆಟ್ ಪತನದ ಬೆನ್ನಲ್ಲೇ ಭಾರತ ದಿಢೀರ್ ಎರಡು ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 17 ರನ್ ಸಿಡಿಸಿ ನಿರ್ಗಮಿಸಿದರು. 95 ರನ್ ಗಳಿಸುವಷ್ಟರಲ್ಲೇ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡಿತು.

ರಿಷಬ್ ಪಂತ್ ಅಬ್ಬರಿಸಲಿಲ್ಲ. ಕೇವಲ 8 ರನ್ ಸಿಡಿಸಿ ಔಟಾದರು. ದಿಢೀರ್ ಕುಸಿತ ಕಂಡ ಟೀಂ ಇಂಡಿಯಾಗೆ ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಅಯ್ಯರ್ ಜೊತೆಯಾದರು. ದಿಟ್ಟ ಹೋರಾಟ ನೀಡಿದ ಈ ಜೋಡಿ ಭಾರತದ ಗೆಲುವು ಖಚಿತಪಡಿಸಿದರು.

ಸೂರ್ಯಕುಮಾರ್ ಯಾದವ್ ಅಜೇಯ ರನ್ ಸಿಡಿಸಿದರೆ, ವೆಂಕಟೇಶ್ ಅಯ್ಯರ್ ಅಜೇಯ ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ ಗೆಲವು ಸಾಧಿಸಿದೆ.  ವಿಕೆಟ್ ಗೆಲುವು ಸಾಧಿಸಿದ ಟೀಂ ಇಂಡಿಯಾ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

IPL 2022: ಮದುವೆಯ ಖುಷಿಯಲ್ಲಿರುವ ಮ್ಯಾಕ್ಸ್‌ವೆಲ್‌, ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಸೆ..

ವೆಸ್ಟ್ ಇಂಡೀಸ್ ಇನ್ನಿಂಗ್ಸ್:
ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ನಿಕೋಲಸ್ ಪೂರನ್ ಆಸರೆಯಾಗಿದ್ದರು. ಪೂರನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. ಪೂರನ್ 43 ಎಸೆತದಲ್ಲಿ 61 ರನ್ ಸಿಡಿಸಿದರು. ಆದರೆ ಪೂರನ್ ಹೊರತು ಪಡಿಸಿದರೆ ಇತರ ಬ್ಯಾಟ್ಸ್‌ಮನ್ ಅಬ್ಬರಿಸಲು ಟೀಂ ಇಂಡಿಯಾ ಅವಕಾಶ ನೀಡಲಿಲ್ಲ.

ಮೊದಲ ಓವರ್‌ನಲ್ಲೇ ಭುವನೇಶ್ವರ್ ಕುಮಾರ್ ಬ್ರಾಂಡನ್ ಕಿಂಗ್ ವಿಕೆಟ್ ಕಬಳಿಸಿ ಟೀಂ ಇಂಡಿಯಾಗೆ ಯಶಸ್ಸು ತಂದುಕೊಟ್ಟರು. ಕೈಲ್ ಮೆಯರ್ಸ್ ಅಲ್ಪ ಹೋರಾಟ ನೀಡಿ 31 ರನ್ ಸಿಡಿಸಿದರು. ರೋಸ್ಟನ್ ಚೇಸ್ ಹಾಗೂ ರೋಮ್ ಪೊವೆಲ್ ಅಬ್ಬರಿಸಲಿಲ್ಲ. ನಾಯಕ ಕೀರನ್ ಪೊಲಾರ್ಡ್ ಅಂತಿಮ ಹಂತದಲ್ಲಿ 24 ರನ್ ಕಾಣಿಕೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ 7 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು. ಭಾರತದ ಪರ ಹರ್ಷಲ್ ಪಟೇಲ್ ಹಾಗೂ ರವಿ ಬಿಶ್ನೋಯ್ ತಲಾ 2 ವಿಕೆಟ್ ಉರುಳಿಸಿದರು. ಇನ್ನು ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್ ಹಾಗೂ ದೀಪಕ್ ಚಹಾರ್ ತಲಾ 1 ವಿಕೆಟ್ ಕಬಳಿಸಿದರು. 

Follow Us:
Download App:
  • android
  • ios