Ind vs SA 4th T20I: ಮತ್ತೊಂದು ಸರಣಿ ಜಯದ ಮೇಲೆ ಭಾರತ ಕಣ್ಣು!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಹಾಗೂ ಕೊನೆಯ ಟಿ20 ಪಂದ್ಯ ಆರಂಭವಾಗಲಿದೆ. ಟೀಂ ಇಂಡಿಯಾ ಮತ್ತೊಂದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. 

Ind vs SA 4th T20I Suryakumar Yadav led Team India eyes on another Series win kvn

ಜೋಹಾನ್ಸ್‌ಬರ್ಗ್: 2024ರಲ್ಲಿ ಆಡಿರುವ 25 ಟಿ20 ಪಂದ್ಯಗಳಲ್ಲಿ 23ರಲ್ಲಿ ಗೆದ್ದಿರುವ ಭಾರತ, ಈ ವರ್ಷ ತಾನಾಡಲಿರುವ ಕೊನೆಯ ಟಿ20 ಪಂದ್ಯವನ್ನೂ ಗೆದ್ದು ಸರಣಿ ಜಯದ ಸಂಭ್ರಮ ಆಚರಿಸಲು ಕಾಯುತ್ತಿದೆ. ಅಲ್ಲದೇ, ಕಳೆದ ವರ್ಷ ಆಗಸ್ಟ್‌ನಿಂದ ಸತತ 7 ಸರಣಿಗಳಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಇಲ್ಲಿನ ವ್ಯಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಗೆಲುವಿನ ನಗಾರಿ ಬಾರಿಸಲು ಸಜ್ಜಾಗಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಟೀಂ ಇಂಡಿಯಾ, 2ನೇ ಪಂದ್ಯದಲ್ಲಿ ವೀರೋಚಿತ ಸೋಲು ಅನುಭವಿಸಿತ್ತು. 3ನೇ ಪಂದ್ಯದಲ್ಲಿ ಪುಟಿದೆದ್ದು 2-1ರ ಮುನ್ನಡೆ ಪಡೆಯಿತು. ಸರಣಿಯಲ್ಲಿ ಭಾರತ ಕೆಲ ಪ್ರಮುಖ ಸಮಸ್ಯೆಗಳನ್ನು ಎದುರಿಸಿದ್ದು, ಇದಕ್ಕೆ ಈ ಪಂದ್ಯದಲ್ಲಾದರೂ ಪರಿಹಾರ ಹುಡುಕಿಕೊಳ್ಳಬೇಕಿದೆ. ಬ್ಯಾಟರ್‌ಗಳು ಸ್ಥಿರತೆ ಕಾಯ್ದುಕೊಳ್ಳುತ್ತಿಲ್ಲಎನ್ನುವುದು ಮೊದಲ ಸಮಸ್ಯೆಯಾದರೆ, ಕೆಲ ಆಟಗಾರರು ಲಯ ಕಳೆದುಕೊಂಡಿರುವುದು ಮತ್ತೊಂದು ಸಮಸ್ಯೆ.

ಈ ಸಲ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಜತೆ ಇನ್ನಿಂಗ್ಸ್ ಆರಂಭಿಸೋದು ಯಾರು? ಇಬ್ಬರ ನಡುವೆ ಪೈಪೋಟಿ!

ಪ್ರಮುಖವಾಗಿ ಸಂಜು ಸ್ಯಾಮನ್ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ, ಸತತ 2 ಪಂದ್ಯದಲ್ಲಿ ಡಕೌಟ್ ಆಗಿದ್ದಾರೆ. ಇನ್ನು ಮೊದಲೆರಡು ಪಂದ್ಯಗಳಲ್ಲಿ ಮಂಕಾಗಿದ್ದ ಅಭಿಷೇಕ್ ಶರ್ಮಾ ಕಳೆದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. ಸಂಜು ಸ್ಯಾಮ್ಸನ್‌ ಲಯಕ್ಕೆ ಮರಳಲು ಎದುರು ನೋಡುತ್ತಿದ್ದರೆ, ಅಭಿಷೇಕ್ ಶರ್ಮಾ ಲಯ ಕಾಪಾಡಿಕೊಳ್ಳಲು ಕಾಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ನಾಯಕನ ಬಳಿ 3ನೇ ಕ್ರಮಾಂಕವನ್ನು ಕೇಳಿ ಪಡೆದ ತಿಲಕ್ ವರ್ಮಾ, ಅಮೋಘ ಶತಕ ಸಿಡಿಸಿ ನಂಬಿಕೆ ಉಳಿಸಿಕೊಂಡಿದ್ದರು. ಸೂರ್ಯಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಸಹ ತಮ್ಮ ಬ್ಯಾಟಿಂಗ್ ಲಯದತ್ತ ಗಮನ ಹರಿಸಲು ಎದುರು ನೋಡುತ್ತಿದ್ದಾರೆ.

ಇನ್ನೊಂದೆಡೆ ರಿಂಕು ಸಿಂಗ್‌ ಬ್ಯಾಟಿಂಗ್ ಕ್ರಮಾಂಕ ಹಾಗೂ ಅವರ ಪಾತ್ರದ ಬಗ್ಗೆ ಹೆಚ್ಚು ಸ್ಪಷ್ಟನೆ ಸಿಗಬೇಕಿದೆ. ಭಾರತ ಟಿ20 ತಂಡದಲ್ಲಿ ಬಹುಕಾಲ ಉಳಿಯಬಲ್ಲ ಆಟಗಾರ ಎಂದು ಗುರುತಿಸಿಕೊಂಡಿರುವ ರಿಂಕು, ಮೊದಲೆರಡು ಪಂದ್ಯಗಳಲ್ಲಿ 6ನೇ ಹಾಗೂ ಕಳೆದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ್ದರು. 3 ಇನ್ನಿಂಗ್ಸ್‌ಗಳಿಂದ ಕೇವಲ 28 ರನ್ ಗಳಿಸಲು ರಿಂಕು, 34 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಅಂಶ ತಂಡದ ಆಡಳಿತವನ್ನು ಗೊಂದಲಕ್ಕೆ ಸಿಲುಕಿಸಬಹುದು. ಜೊತೆಗೆ ರಿಂಕುರ ಮನದಲ್ಲೂ ಆತಂಕ ಮೂಡಿಸಿರಬಹುದು. ಈ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ಸ್ಫೋಟಕ ಇನ್ನಿಂಗ್ಸ್ ಮೂಡಿಬರಬಹುದೇ ಎನ್ನುವ ಕುತೂಹಲವಿದೆ. 

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಹೊಸ ವೇಳಾಪಟ್ಟಿ ಪ್ರಕಟ: ಇಷ್ಟು ಗಂಟೆಗೆ ಪಂದ್ಯ ಆರಂಭ!

ಮತ್ತೊಂದೆಡೆ, ಬೌಲರ್‌ಗಳು ಸುಧಾರಿತ ಪ್ರದರ್ಶನ ತೋರಿದರೆ ಸರಣಿ ಗೆಲುವಿನ ಹಾದಿ ಸುಗಮಗೊಳ್ಳಬಹುದು. ಅರ್ಶದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಇನ್ನು, ಅವಕಾಶಕ್ಕಾಗಿ ಕಾಯುತ್ತಿರುವ ವೇಗಿಗಳಾದ ವೈಶಾಖ್ ವಿಜಯ್‌ ಕುಮಾರ್ ಹಾಗೂ ಯಶ್ ದಯಾಳ್‌ಗೆ ಭಾರತ ತಂಡದ ಕ್ಯಾಪ್ ದೊರೆಯುತ್ತಾ ಎನ್ನುವುದನ್ನು ಕಾದು ನೋಡಬೇಕು.

ಆತಿಥೇಯ ದಕ್ಷಿಣ ಆಫ್ರಿಕಾ, ಭಾರತೀಯ ಸ್ಪಿನ್ನರ್ ಗಳ ಎದುರು ರನ್ ಗಳಿಸಲು ಪರದಾಡುತ್ತಿದೆ. ಸದ್ಯ ಸರಣಿಯಲ್ಲಿ ಆಡುತ್ತಿರುವ ಹಲವು ಆಟಗಾರರು 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯಬಹುದು. ಹೀಗಾಗಿ, ಈ ಸರಣಿ ಅವರಿಗೆಲ್ಲ ಉತ್ತಮ ಪಾಠವಾಗಲಿದೆ. ಸದ್ಯಕ್ಕೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗದಿಂದ ಪಾರಾಗುವುದು ಹರಿಣ ಪಡೆಯ ಮುಂದಿರುವ ಬಹುದೊಡ್ಡ ಗುರಿ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಸಂಜು ಸ್ಯಾಮನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣ್ ದೀಪ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ, ಅರ್ಶ್‌ದೀಪ್ ಸಿಂಗ್.

ದಕ್ಷಿಣ ಆಫ್ರಿಕಾ: ರಿಕಲ್ಟನ್, ರೀಜಾ ಹೆಂಡ್ರಿಕ್ಟ್, ಏಯ್ಡನ್ ಮಾರ್ಕರಮ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಗೆರಾಲ್ಡ್ ಕೋಟ್ಜಿ/ ಎನ್‌ಕಾಬಾಯೋಮಿ ಪೀಟ‌, ಸಿಮಿಲಾನೆ, ಕೇಶವ್ ಮಹರಾಜ್, ಸಿಪಾಮ್ಹಾ.

ಪಂದ್ಯ: ಸಂಜೆ. 8:30ಕ್ಕೆ 
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ 

ಪಿಚ್ ರಿಪೋರ್ಟ್:

ಜೋಹಾನ್ಸ್‌ ಬರ್ಗ್‌ನಲ್ಲಿ ಸಂಪ್ರದಾಯಿಕವಾಗಿ ರನ್ ಹೊಳೆ ಹರಿಯಲಿದೆ. ಕಳೆದ ಬಾರಿ ಭಾರತ ಇಲ್ಲಿ ಟಿ20 ಪಂದ್ಯವನ್ನಾಡಿದ್ದಾಗ ಸೂರ್ಯ ಕುಮಾರ್ ಶತಕ ಸಿಡಿಸಿದ್ದರು. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನಿರೀಕ್ಷೆ ಮಾಡಬಹುದು.
 

Latest Videos
Follow Us:
Download App:
  • android
  • ios