ಟೀಂ ಇಂಡಿಯಾ ಮಿಂಚಿನ ದಾಳಿಗೆ ಪಾಕಿಸ್ತಾನ ಬೃಹತ್ ಮೊತ್ತ ಪೇರಿಸಲು ವಿಫಲವಾಗಿದೆ. ಹೀಗಾಗಿ ಮಹತ್ವದ ಪಂದ್ಯದಲ್ಲಿ ಭಾರತ 148 ರನ್ ಟಾರ್ಗೆಟ್ ಪಡೆದಿದೆ.
ದುಬೈ(ಆ.28): ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ರೋಚಕತೆ ಹೆಚ್ಚಾಗಿದೆ. ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಟೀಂ ಇಂಡಿಯಾ ದಾಳಿಗೆ ಪಾಕಿಸ್ತಾನ ಬೃಹತ್ ಮೊತ್ತ ಪೇರಿಸಲು ವಿಫಲವಾಗಿದೆ. ಮೊಹಮ್ಮದ್ ರಿಜ್ವಾನ್ ಹಾಗೂ ಇಫ್ತಿಕಾರ್ ಅಹಮ್ಮದ್ ಹೋರಾಟಿಂದ ಪಾಕಿಸ್ತಾನ 147 ರನ್ ಸಿಡಿಸಿ ಆಲೌಟ್ ಆಗಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಭಾರತ ಆರಂಭದಲ್ಲೇ ಮಿಂಚಿನ ದಾಳಿ ಸಂಘಟಿಸಿತು. ಭುವನೇಶ್ವರ್ ಕುಮಾರ್ ದಾಳಿಗೆ ಪಾಕಿಸ್ತಾನ ನಾಯಕ ಬಾಬರ್ ಅಜಮ್ ವಿಕೆಟ್ ಕೈಚೆಲ್ಲಿದರು. ಬಾಬರ್ 10 ರನ್ ಸಿಡಿಸಿ ನಿರ್ಗಮಿಸಿದರು. ಮೊಹಮ್ಮದ್ ರಿಜ್ವಾನ್ ಹೋರಾಟ ಮುಂದುವರಿಸಿದರು. ಇತ್ತ ಫಕರ್ ಜಮಾನ್ ಅಬ್ಬರಿಸಲಿಲ್ಲ. ಜಮಾನ್ 10 ರನ್ ಸಿಡಿಸಿ ಔಟಾದರು.
ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಇಫ್ತಿಖರ್ ಅಹಮ್ಮದ್ ಹಾಗೂ ಮೊಹಮ್ಮದ್ ರಿಜ್ವಾನ್ ಆಸರೆಯಾದರು. ಇವರಿಬ್ಬರ ಹೋರಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು. ಅಷ್ಟರಲ್ಲೇ ಹಾರ್ದಿಕ್ ಪಾಂಡ್ಯ ದಾಳಿ ಆರಂಭಗೊಂಡಿತ್ತು. 22 ಎಸೆತದಲ್ಲಿ 28 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಇಫ್ತಿಖರ್ ವಿಕೆಟ್ ಪತನಗೊಂಡಿತು. ರಿಜ್ವಾನ್ ಹಾಗೂ ಇಫ್ತಿಖರ್ ಜೊತೆಯಾಟಕ್ಕೆ ಬೇಕ್ ಹಾಕುವಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ನಿರ್ವಹಿಸಿದರು.
ಇಂಡೋ ಪಾಕ್ ಪಂದ್ಯ, ಮಾಧ್ಯಮ ಸೇರಿ ಸಾರ್ವಜನಿಕರಿಗೆ ಪೊಲೀಸರ ಮಹತ್ವದ ಸಲಹೆ!
ಮೊಹಮ್ಮದ್ ರಿಜ್ವಾನ್ ಹೋರಾಟ ಮುಂದುವರಿಸಿದರು. ಹಾಫ್ ಸೆಂಚುರಿಯತ್ತ ಮುನ್ನುಗ್ಗುತ್ತಿದ್ದ ರಿಜ್ವಾನ್‌ಗೆ ಹಾರ್ದಿಕ್ ಪಾಂಡ್ಯ ಶಾಕ್ ನೀಡಿದರು. ರಿಜ್ವಾನ್ 42 ಎಸೆತದಲ್ಲಿ 43 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಕುಶ್ದಿಲ್ ಶಾ ವಿಕೆಟ್ ಕೈಚೆಲ್ಲಿದರು. ಕುಶ್ದೀಲ್ ಶಾ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.
ಶದಬ್ ಖಾನ್ ಹಾಗೂ ಆಸಿಫ್ ಆಲಿ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಭುವನೇಶ್ವರ್ ಕುಮಾರ್ ಮಿಂಚಿನ ದಾಳಿಗೆ ಆಸಿಫ್ ಆಲಿ ಔಟಾದರು. ಆಸಿಫ್ 9 ರನ್ ಕಾಣಿಕೆ ನೀಡಿದರು. ಮೊಹಮ್ಮದ್ ನವಾಜ್ 1 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಪಾಕಿಸ್ತಾನ ಬಿರುಸಿನ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾಯಿತು. ಹ್ಯಾರಿಸ್ ರೌಫ್ ಎರಡು ಬೌಂಡರಿ ಪಾಕಿಸ್ತಾನದ ಮೊತ್ತ ಹೆಚ್ಚಿಸಿತು. ಇತ್ತ ಶದಬ್ ಖಾನ್ 10 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ನಸೀಮ್ ಶಾ ವಿಕೆಟ್ ಪತನಗೊಂಡಿತು. ಈ ಮೂಲಕ ಭುವಿ ಹ್ಯಾಟ್ರಿಕ್ ವಿಕೆಟ್ ಸಾಧನೆಯ ಅವಕಾಶ ಪಡೆದುಕೊಂಡರು. ಆದರೆ ಶಹನವಾಜ್ ಧಹನಿ ಢಿಪೆನ್ಸ್ ಮೂಲಕ ಹ್ಯಾಟ್ರಿಕ್ ಸಾಧನೆ ಕೈತಪ್ಪಿತು.
ಮರು ಎಸೆತದಲ್ಲಿ ಶೆಹನವಾಜ್ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ರೌಫ್ ಹಾಗೂ ಧಹನಿ ಹೋರಾಟದಿಂದ ಪಾಕಿಸ್ತಾನ ಅಂತಿಮ ಹಂತದಲ್ಲಿ ಉತ್ತಮ ರನ್ ಸಿಡಿಸಿತು. ದಹನಿ 16 ರನ್ ಸಿಡಿಸಿ ಔಟಾದರು. ಈ ಮೂಲಕ ಪಾಕಿಸ್ತಾನ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಭುವನೇಶ್ವರ್ ಕುಮಾರ್ 4 ವಿಕೆಟ್ ಕಬಳಿಸಿದರೆ ಹಾರ್ದಿಕ್ ಪಾಂಡ್ಯ 3, ಅರ್ಶದೀಪ್ ಸಿಂಗ್ 2 ಹಾಗೂ ಆವೇಶ್ ಖಾನ್ 1 ವಿಕೆಟ್ ಕಬಳಿಸಿದರು.
ಪಾಕ್ ಮಾಜಿ ಕ್ರಿಕೆಟಿಗನ ತಬ್ಬಿ ಸಂತಸ ಹಂಚಿಕೊಂಡ ವಿರಾಟ್ ಕೊಹ್ಲಿ, ಫೋಟೋ ವೈರಲ್!
