Asianet Suvarna News

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಕಿವೀಸ್‌ ಬಳಗಕ್ಕೆ ಭಾರತ ತಿರುಗೇಟು

* ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್‌

* 5ನೇ ದಿನದಾಟದ ಮೊದಲ ಸೆಷನ್‌ನಲ್ಲಿ 3 ವಿಕೆಟ್ ಕಬಳಿಸಿದ ಟೀಂ ಇಂಡಿಯಾ ವೇಗಿಗಳು

* ಶಮಿಗೆ 2, ಇಶಾಂತ್ ಶರ್ಮಾ ಒಂದು ವಿಕೆಟ್

Ind vs NZ WTC Final Team India Fight back on Day 5 kvn
Author
Southampton, First Published Jun 22, 2021, 6:16 PM IST
  • Facebook
  • Twitter
  • Whatsapp

ಸೌಥಾಂಪ್ಟನ್‌(ಜೂ.22): ಮಳೆಯಾಟದ ನಡುವೆಯೇ ಭಾರತದ ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ದಿಟ್ಟ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಲಂಚ್ ಬ್ರೇಕ್‌ ವೇಳೆಗೆ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು 135 ರನ್‌ ಬಾರಿಸಿದ್ದು, ಇನ್ನೂ 82 ರನ್‌ ಹಿನ್ನಡೆಯಲ್ಲಿದೆ.

ಐದನೇ ದಿನದಾಟ ಆರಂಭಿಸುವಾಗ ಕೇವಲ 2 ವಿಕೆಟ್ ಕಳೆದುಕೊಂಡು 101 ರನ್‌ ಕಲೆಹಾಕಿದ್ದ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್ ತನ್ನ ಖಾತೆಗೆ 34 ರನ್‌ ಸೇರಿಸುವಷ್ಟರಲ್ಲಿ ಮತ್ತೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರಾಸ್ ಟೇಲರ್ 11 ರನ್‌ ಗಳಿಸಿ ಶಮಿಗೆ ಮೊದಲ ಬಲಿಯಾದರೆ, ಹೆನ್ರಿ ನಿಕೋಲಸ್‌ 7 ರನ್‌ ಗಳಿಸಿ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್‌ ಸೇರಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಬಿ.ಜೆ. ವ್ಯಾಟ್ಲಿಂಗ್(1) ಶಮಿಗೆ ಎರಡನೇ ಬಲಿಯಾಗಿದ್ದಾರೆ.

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: 5ನೇ ದಿನದಾಟ ಪಂದ್ಯ ನಡೆಯುತ್ತಾ?

ಸದ್ಯ ನಾಯಕ ಕೇನ್‌ ವಿಲಿಯಮ್ಸನ್‌(19) ಹಾಗೂ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌(0) ಕ್ರೀಸ್‌ ಕಾಯ್ದುಕೊಂಡಿದ್ದಾರೆ.


 

Follow Us:
Download App:
  • android
  • ios