Asianet Suvarna News Asianet Suvarna News

IND vs NZ Test:ನ್ಯೂಜಿಲೆಂಡ್ 62 ರನ್‌ಗೆ ಆಲೌಟ್, ಭಾರತ ವಿರುದ್ಧ ಅತೀ ಕಡಿಮೆ ಮೊತ್ತಕ್ಕೆ ಕುಸಿದ ಕಿವೀಸ್!

  • ಸಿರಾಜ್, ಅಶ್ವಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್
  • ಮುಂಬೈ ಟೆಸ್ಟ್ ಮೊದಲ ಇನ್ನಿಂಗ್ಸ್‌ನಲ್ಲಿ ಕಿವಿಸ್ 62 ರನ್‌ಗೆ ಆಲೌಟ್
  • ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ಗೆ ರನ್ ಹಿನ್ನಡೆ
IND vs NZ Team India restrict New zealand by 62 runs first innings in mumbai test day 2 ckm
Author
Bengaluru, First Published Dec 4, 2021, 3:52 PM IST

ಮುಂಬೈ(ಡಿ.04):  ಮೊಹಮ್ಮದ್ ಸಿರಾಜ್(Mohammed Siraj) ಹಾಗೂ ಆರ್ ಅಶ್ವಿನ್(R ashwin) ದಾಳಿಗೆ ನ್ಯೂಜಿಲೆಂಡ್ ತಂಡ ತತ್ತರಿಸಿದೆ. ಪರಿಣಾಮ ಟೀಂ ಇಂಡಿಯಾ(Team India) ವಿರುದ್ಧದ ಮುಂಬೈ ಟೆಸ್ಟ್(Mumbai Test) ಪಂದ್ಯದಲ್ಲಿ ಕೇವಲ 62 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್ ಹಿನ್ನಡೆ ಅನುಭವಿಸಿದೆ. ಭಾರತದ ವಿರುದ್ದ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ನ್ಯೂಜಿಲೆಂಡ್ ಪಾತ್ರವಾಗಿದೆ. 

ಭಾರತ ವಿರುದ್ಧ ಕಡಿಮೆ ಮೊತ್ತಕ್ಕೆ ಕುಸಿದ ತಂಡದ ವಿವರ:
62 ರನ್, ನ್ಯೂಜಿಲೆಂಜ್ , ಮುಂಬೈ 2021*
79 ರನ್, ಸೌತ್ ಆಫ್ರಿಕಾ,  ನಾಗ್ಪುರ  2015
81 ರನ್, ಇಂಗ್ಲೆಂಡ್, ಅಹಮ್ಮದಾಬಾದ್ 2021
82 ರನ್ ಶ್ರೀಲಂಕಾ, ಚಂಡೀಘಡ 1990

Ind vs NZ Mumbai Test: ಬೌಲ್ಡ್ ಆದರೂ DRS ಮೊರೆ ಹೋದ ಅಶ್ವಿನ್‌..! ವಿಡಿಯೋ ವೈರಲ್

ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಾಖಲಾದ ಅತೀ ಕಡಿಮೆ ಮೊತ್ತ ಅನ್ನೋ ಅಪಖ್ಯಾತಿಗೆ ನ್ಯೂಜಿಲೆಂಡ್ ಗುರಿಯಾಗಿದೆ. 

ಭಾರತದಲ್ಲಿ ದಾಖಲಾದ ಅತೀ ಕಡಿಮೆ ಮೊತ್ತ(ಟೆಸ್ಟ್ ಪಂದ್ಯ)
62 ರನ್, ನ್ಯೂಜಿಲೆಂಡ್ v ಭಾರತ, ಮುಂಬೈ, 2021
75 ರನ್, ಭಾರತ v ವೆಸ್ಟ್ ಇಂಡೀಸ್, ದೆಹಲಿ, 1987
76 ರನ್, ಭಾರತ v ಸೌತ್ ಆಫ್ರಿಕಾ, ಅಹಮ್ಮದಾಬಾದ್, 2008
79 ರನ್, ಸೌತ್ ಆಫ್ರಿಕಾ v ಭಾರತ, ನಾಗ್ಪು, 2015

Ajaz Patel Pics 10 Wickets: ಇತಿಹಾಸ ಬರೆದ ಭಾರತ ಮೂಲದ ಕಿವೀಸ್‌ ಸ್ಪಿನ್ನರ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಾಲದ ಕನಿಷ್ಠ ಮೊತ್ತ:
62 ರನ್,  ನ್ಯೂಜಿಲೆಂಡ್ v ಭಾರತ,  2021*
93 ರನ್, ಆಸ್ಟ್ರೇಲಿಯಾ v ಭಾರತ, 2004
100 ರನ್, ಭಾರತ v ಇಂಗ್ಲೆಂಡ್, 2006
102 ರನ್ ಇಂಗ್ಲೆಂಡ್ v ಭಾರತ, 1981
104 ರನ್, ಭಾರತ v ಆಸ್ಟ್ರೇಲಿಯಾ, 2004
ಟೀಂ ಇಂಡಿಯಾ ಸಿಡಿಸಿದ 325 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್(New zealand) ಮೊದಲ ಇನ್ನಿಂಗ್ಸ್ ಆರಂಭಿಸಿತು. ಆದರೆ ನ್ಯೂಜಿಲೆಂಡ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ಆರಂಭದಲ್ಲಿ ಸಿರಾಜ್ ದಾಳಿಗೆ ನ್ಯೂಜಿಲೆಂಡ್ ವಿಕೆಟ್ ಕಳೆದುಕೊಂಡರೆ ಬಳಿಕ ಅಶ್ವಿನ್ ಸ್ಪಿನ್ ಮೋಡಿ ಪ್ರವಾಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.

ಕೈಲ್ ಜ್ಯಾಮಿಸ್ಸನ್ ಹಾಗೂ ಟಾಮ್ ಲಾಥಮ್ ಎರಡಂಕಿ ಗಡಿ ದಾಟಿದ್ದಾರೆ. ಇನ್ನುಳಿದ ಯಾವ ಬ್ಯಾಟ್ಸ್‌ಮನ್ 10 ರನ್ ದಾಟಿಲ್ಲ. ವಿಲ್ ಯಂಗ್ ಕೇವಲ 4 ರನ್ ಸಿಡಿಸಿ ಔಟಾದರು. ಟಾಮ್ ಲಾಥಮ್ 10, ರಾಸ್ ಟೇಲರ್ 1, ಡರಿಲ್ ಮಿಚೆಲ್ 8, ಹೆನ್ರಿ ನಿಕೋಲಸ್ 7, ಟಾಮ್ ಬ್ಲಂಡೆಲ್ 8, ರಾಚಿನ್ ರವಿಂದ್ರ 4 ರನ್ ಸಿಡಿಸಿ ಔಟಾದರು. ಕೈಲ್ ಜ್ಯಾಮಿಸನ್ ಹೋರಾಟ ನೀಡಿದರು.

ಟಿಮ್ ಸೌಥಿ ಶೂನ್ಯ ಸುತ್ತಿದರು. ವಿಲಿಯಮ್ ಸೋಮರವಿಲ್ಲೆ ಡಕೌಟ್ ಆದರು. ಕೈಲ್ ಜ್ಯಾಮಿನ್ಸನ್ 17 ರನ್ ಸಿಡಿಸಿ ಔಟಾದರು. ಈ ಮೂಲಕ ನ್ಯೂಜಿಲೆಂಡ್ 62 ರನ್‌ಗೆ ಆಲೌಟ್ ಆಯಿತು.  ಭಾರತದ ಪರ ಮೊಹಮ್ಮದ್ ಸಿರಾಜ್ 3, ಆರ್ ಅಶ್ವಿನ್ 4, ಅಕ್ಸರ್ ಪಟೇಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಕಬಳಿಸಿದರು. 

ಮುಂಬೈ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ  ಟೀಂ ಇಂಡಿಯಾ ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್ ಹಾಗೂ ಅಕ್ಸರ್ ಪಟೇಲ್ ಹೋರಾಟದಿಂದ 325 ರನ್ ಸಿಡಿಸಿ ಆಲೌಟ್ ಆಗಿತ್ತು. ಕನ್ನಡಿಗ ಮಯಾಂಕ್ ಅಗರ್ವಾಲ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚಿದ್ದರು. 317 ಎಸೆತ ಎದುರಿಸಿದ ಮಯಾಂಕ್ ಅಗರ್ವಾಲ್ 17 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 150 ರನ್ ಸಿಡಿಸಿದರು. ಇತ್ತ ಮತ್ತೊರ್ವ ಆರಂಭಿಕ ಶುಭಮನ್ ಗಿಲ್ 44 ರನ್ ಕಾಣಿಕೆ ನೀಡಿದ್ದರು. ಅಕ್ಸರ್ ಪಟೇಲ್ ಹೋರಾಟದಿಂದ ಟೀಂ ಇಂಡಿಯಾ 300 ರನ್ ಗಡಿ ದಾಟಿತ್ತು. ಅಕ್ಸರ್ 52 ರನ್ ಕಾಣಿಕೆ ನೀಡಿದ್ದರು. ಮುಂಬೈ ಟೆಸ್ಟ್ ಪಂದ್ಯಕ್ಕೆ ಮರಳಿದ ನಾಯಕ ವಿರಾಟ್ ಕೊಹ್ಲಿ ಡಕೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದ್ದರು. 

Follow Us:
Download App:
  • android
  • ios