Asianet Suvarna News Asianet Suvarna News

Ind vs NZ Mumbai Test: ಬೌಲ್ಡ್ ಆದರೂ DRS ಮೊರೆ ಹೋದ ಅಶ್ವಿನ್‌..! ವಿಡಿಯೋ ವೈರಲ್

* ಮುಂಬೈ ಟೆಸ್ಟ್‌ನಲ್ಲಿ ಚರ್ಚೆಗೆ ಗ್ರಾಸವಾದ ಅಶ್ವಿನ್ ತೆಗೆದುಕೊಂಡ ಡಿಆರ್‌ಎಸ್

* ಅಜಾಜ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ ಅಶ್ವಿನ್‌

* ಒಂದು ರಿವ್ಯೂ ಹಾಳು ಮಾಡಿದ ಅಶ್ವಿನ್ ಎಂದ ಆಸೀಸ್‌ ಮಾಜಿ ಕ್ರಿಕೆಟಿಗ

Ind vs NZ Ravichandran Ashwin reviews after being bowled by Ajaz Patel in Mumbai Test kvn
Author
Bengaluru, First Published Dec 4, 2021, 2:14 PM IST

ಮುಂಬೈ(ಡಿ.04): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್‌ (Ravichandran Ashwin), ನ್ಯೂಜಿಲೆಂಡ್ ಸ್ಪಿನ್ನರ್‌ ಅಜಾಜ್‌ ಪಟೇಲ್‌ (Ajaz Patel) ಬೌಲಿಂಗ್‌ನಲ್ಲಿ ಆರನೇ ಬಲಿಯಾಗಿದ್ದಾರೆ. ಎರಡನೇ ದಿನದಾಟದ ಆರಂಭದಲ್ಲೇ ಅಶ್ವಿನ್ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದ್ದಾರೆ. ಆದರೆ ಅಶ್ವಿನ್‌ ಬೌಲ್ಡ್ ಆದ ಬೆನ್ನಲ್ಲೇ ಡಿಆರ್‌ಎಸ್ (DRS) ಮೊರೆ ಹೋಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹೌದು, ವಾಂಖೆಡೆ ಕ್ರಿಕೆಟ್‌ ಮೈದಾನದಲ್ಲಿ (Mumbai Wankhede Stadium) ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಜಾಜ್‌ ಪಟೇಲ್‌ ಮಾರಕ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಎರಡನೇ ದಿನದಾಟದ ಮೊದಲ ಓವರ್‌ನಲ್ಲೇ ವೃದ್ದಿಮಾನ್ ಸಾಹ ವಿಕೆಟ್ ಕಬಳಿಸಿದರು. ಮರು ಎಸೆತದಲ್ಲೇ ಅಶ್ವಿನ್‌ ಕೂಡಾ ವಿಕೆಟ್‌ ಒಪ್ಪಿಸಿದರು. ಅಶ್ವಿನ್, ಅಂಪೈರ್ ಕ್ಯಾಚ್ ಎಂದು ಔಟ್ ನೀಡಿರಬೇಕೆಂದು ತಿಳಿದು ಡಿಆರ್‌ಎಸ್‌ ಮೊರೆ ಹೋದರು. ಆದರೆ ರೀಪ್ಲೆನಲ್ಲಿ ಚೆಂಡು ತಿರುವು ಪಡೆದು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿದ್ದು ಸ್ಪಷ್ಟವಾಗಿತ್ತು. ಡಿಆರ್‌ಎಸ್‌ ಫಲಿತಾಂಶ ಹೊರಬರುವ ಮುನ್ನವೇ ಅಶ್ವಿನ್‌ ಪೆವಿಲಿಯನ್ ಸೇರಿದ್ದರು.

ಈ ಕುರಿತಂತೆ ಟ್ವೀಟ್‌ ಮಾಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್(Brad Hogg), ಬೌಲ್ಡ್ ಆಗಿದ್ದರೂ ಸಹಾ ರಿವ್ಯೂ ಪಡೆಯುವ ಮೂಲಕ ಅಶ್ವಿನ್ ಭಾರತದ ಒಂದು ಡಿಆರ್‌ಎಸ್ ಖಂಡಿತವಾಗಿಯೂ ಹಾಳು ಮಾಡಿದರು. ಒಂದು ವೇಳೆ ನಿಮಗೆ ಗೊಂದಲವಿದ್ದರೆ, ಸಹ ಆಟಗಾರನ ಸಲಹೆಯನ್ನೇಕೆ ಪಡೆಯಬಾರದು ಎಂದು ಪ್ರಶ್ನಿಸಿದ್ದಾರೆ.

ಹರ್ಭಜನ್ ಸಿಂಗ್ ದಾಖಲೆ ಹಿಂದಿಕ್ಕಿದ್ದ ರವಿಚಂದ್ರನ್ ಅಶ್ವಿನ್: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಾನ್ಪುರ ಟೆಸ್ಟ್‌ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ (Harbhajan Singh) ಅವರನ್ನು ಹಿಂದಿಕ್ಕಿ ಅಶ್ವಿನ್‌ ಮೂರನೇ ಸ್ಥಾನಕ್ಕೇರಿದ್ದರು. 103 ಟೆಸ್ಟ್‌ ಪಂದ್ಯಗಳಿಂದ ಹರ್ಭಜನ್ ಸಿಂಗ್ 417 ವಿಕೆಟ್ ಕಬಳಿಸಿದ್ದರು. ಆದರೆ ಇದೀಗ ಅಶ್ವಿನ್ ಕೇವಲ 80 ಪಂದ್ಯಗಳಿಂದ 419 ವಿಕೆಟ್ ಕಬಳಿಸುವ ಮೂಲಕ ಭಜ್ಜಿ ದಾಖಲೆ ಅಳಿಸಿಹಾಕಿದ್ದಾರೆ.

BCCI Annual General Meeting: ದಕ್ಷಿಣ ಆಫ್ರಿಕಾ ಪ್ರವಾಸ ಬಗ್ಗೆ ಮಹತ್ವದ ಚರ್ಚೆ..!

ರವಿಚಂದ್ರನ್‌ ವಿಕೆಟ್‌ ಪತನವಾದಾಗ ಟೀಂ ಇಂಡಿಯಾ (Team India) ಮೊದಲ ದಿನದಾಟದ ಖಾತೆಗೆ ಕೇವಲ 2 ರನ್‌ ಸೇರಿಸಿದೆ. ಇದರೊಂದಿಗೆ ಟೀಂ ಇಂಡಿಯಾ 224 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಏಳನೇ ವಿಕೆಟ್‌ಗೆ ಜತೆಯಾದ ಮಯಾಂಕ್‌ ಅಗರ್‌ವಾಲ್ ಹಾಗೂ ಅಕ್ಷರ್ ಪಟೇಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಯಿತು. ಏಳನೇ ವಿಕೆಟ್‌ಗೆ ಈ ಜೋಡಿ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಮಯಾಂಕ್‌ ಅಗರ್‌ವಾಲ್ (Mayank Agarwal) 150 ರನ್‌ ಬಾರಿಸಿ ಅಜಾಜ್ ಪಟೇಲ್‌ಗೆ ಏಳನೇ ಬಲಿಯಾದರು.

ಚೊಚ್ಚಲ ಅರ್ಧಶತಕ ಚಚ್ಚಿದ ಅಕ್ಷರ್ ಪಟೇಲ್‌: ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 28 ರನ್ ಬಾರಿಸಿದ್ದ ಅಕ್ಷರ್ ಪಟೇಲ್‌, ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಒಟ್ಟು 113 ಎಸೆತಗಳನ್ನು ಎದುರಿಸಿದ ಅಕ್ಷರ್ ಪಟೇಲ್‌ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅರ್ಧಶತಕ ಬಾರಿಸಿದರು. ಅಂತಿಮವಾಗಿ ಅಕ್ಷರ್ ಪಟೇಲ್‌ 52 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.
 

Follow Us:
Download App:
  • android
  • ios