ಆರಂಭದಲ್ಲಿ ಆಘಾತ ಎದುರಿಸಿದ್ದ ಟೀಂ ಇಂಡಿಯಾಗೆ ಶುಭಮನ್ ಗಿಲ್ ಸಿಡಿಸಿದ ಆಕರ್ಷಕ ಸೆಂಚುರಿಯಿಂದ ಇದೀಗ ಬೃಹತ್ ಮೊತ್ತ ಸಿಡಿಸಿದೆ. ಗಿಲ್ ಸೆಂಚುರಿಯಿಂದ ಭಾರತ ಅಂತಿಮ ಟಿ20 ಪಂದ್ಯದಲ್ಲಿ 234 ರನ್ ಸಿಡಿಸಿದೆ.

ಅಹಮ್ಮದಾಬಾದ್(ಫೆ.01): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಟಿ20 ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಶುಭಮನ್ ಗಿಲ್ ಆಕರ್ಷಕ ಸೆಂಚುರಿ, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ಭಾರತ 4 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಶಾನ್ ಕಿಶನ್ ಕೇವಲ 1 ರನ್ ಸಿಡಿಸಿ ಔಟಾದರು. ಆದರೆ ಶುಭಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟದಿಂದ ಟೀಂ ಇಂಡಿಯಾ ಉತ್ತಮ ಹೋರಾಟ ನೀಡಿತು. ಇವರ ಜೊತೆಯಾಟಕ್ಕೆ ನ್ಯೂಜಿಲೆಂಡ್ ತಂಡಕ್ಕೆ ತಲೆನೋವು ಹೆಚ್ಚಿಸಿತು.

Border Gavaskar Trophy: ಮದುವೆ ಬೆನ್ನಲ್ಲೇ ಅಭ್ಯಾಸ ಆರಂಭಿಸಿದ ಕೆ ಎಲ್ ರಾಹುಲ್..!

ಅಬ್ಬರಿಸಿದ ರಾಹುಲ್ ತ್ರಿಪಾಠಿ 22 ಎಸೆತದಲ್ಲಿ 44 ರನ್ ಸಿಡಿಸಿ ಔಟಾದರು. ಆದರೆ ಗಿಲ್ ಹೋರಾಟ ಮುಂದುವರಿಸಿದರು. ಸೂರ್ಯಕುಮಾರ್ ಯಾದವ್ ಜೊತೆ ಸೇರಿ ಅಬ್ಬರಿಸಿದರು. ಆದರೆ ಸೂರ್ಯಕುಮಾರ್ ಯಾದವ್ 13 ಎಸೆತದಲ್ಲಿ 24 ರನ್ ಸಿಡಿಸಿ ಔಟಾದರು.

ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಶುಬಮನ್ ಗಿಲ್ ಹೋರಾಟಕ್ಕೆ ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಿತು. ಗಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಕರ್ಷಕ ಸೆಂಚುರಿ ಸಿಡಿಸಿದರು. ಈ ಮೂಲಕ ಶುಬಮನ್ ಗಿಲ್ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿಕೊಂಡರು. ಮೂರು ಮಾದರಿಯಲ್ಲಿ ಸೆಂಚುರಿ ಸಿಡಿಸಿದ 5ನೇ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

Ind vs NZ: ಲಖನೌ ಕಳಪೆ ಪಿಚ್ ತಯಾರಿಸಿದ ಪಿಚ್ ಕ್ಯೂರೇಟರ್ ತಲೆದಂಡ..!

ಮೂರು ಮಾದರಿಯಲ್ಲಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್
ಸುರೇಶ್ ರೈನಾ
ರೋಹಿತ್ ಶರ್ಮಾ
ಕೆಎಲ್ ರಾಹುಲ್
ವಿರಾಟ್ ಕೊಹ್ಲಿ
ಶುಭಮನ್ ಗಿಲ್ 

ಸೆಂಚುರಿ ಬಳಿಕ ಗಿಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮಂದಾದರು. ಈ ವೇಳೆ ಗಿಲ್ ಕ್ಯಾಚ್ ಕೈಚೆಲ್ಲಿದ ನ್ಯೂಜಿಲೆಂಡ್ ಮತ್ತಷ್ಟು ಆತಂಕ ಎದುರಿಸಿತು. ಬೌಂಡರಿ ಸಿಕ್ಸರ್ ಅಬ್ಬರ ಹಚ್ಚಾಯಿತು. ಹಾರ್ದಿಕ್ ಪಾಂಡ್ಯ 17 ಎಸೆತದಲ್ಲಿ 30 ರನ್ ಸಿಡಿಸಿ ಔಟಾದರು. ಗಿಲ್ ಮತ್ತೆ ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಶಭಮನ್ ಗಿಲ್ 63 ಎಸೆತದಲ್ಲಿ ಅಜೇಯ 126 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿತು. 

ನ್ಯೂಜಿಲೆಂಡ್ ವಿರುದ್ದ ಶಭಮನ್ ಗಿಲ್ ಮತ್ತೊಂದು ದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೂ ಟಿ20ಯಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಏಕದಿನ, ಶುಭಮನ್ ಗಿಲ್, 208 ರನ್
ಟಿ20, ಶುಭಮನ್ ಗಿಲ್, 123(ಅಜೇಯ)

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಭಾರತೀಯ ಬ್ಯಾಟ್ಸಮನ್
ಶುಭಮನ್ ಗಿಲ್ 126* vs ನ್ಯೂಜಿಲೆಂಡ್, 2023
ವಿರಾಟ್ ಕೊಹ್ಲಿ 122* vs ಆಫ್ಘಾನಿಸ್ತಾನ, 2022
ರೋಹಿತ್ ಶರ್ಮಾ 118 vs ಶ್ರೀಲಂಕಾ, 2017