Asianet Suvarna News Asianet Suvarna News

Ind vs NZ: ಲಖನೌ ಕಳಪೆ ಪಿಚ್ ತಯಾರಿಸಿದ ಪಿಚ್ ಕ್ಯೂರೇಟರ್ ತಲೆದಂಡ..!

ಅಚ್ಚರಿಯ ಪಂದ್ಯಕ್ಕೆ ಸಾಕ್ಷಿಯಾದ ಲಖನೌ ಸ್ಟೇಡಿಯಂ
ಕಳಪೆ ಪಿಚ್ ತಯಾರಿಸಿದ ಪಿಚ್‌ ಕ್ಯೂರೇಟರ್‌ಗೆ ಗೇಟ್‌ಪಾಸ್
ಲಖನೌದಲ್ಲಿ ತಿಣುಕಾಡಿ ಪಂದ್ಯ ಜಯಿಸಿದ್ದ ಟೀಂ ಇಂಡಿಯಾ

Ind vs NZ Lucknow Pitch Curator Sacked For Preparing a Shocker Says Report kvn
Author
First Published Jan 31, 2023, 4:57 PM IST

ಲಖನೌ(ಜ.31): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯವು ಅತಿ ಕಡಿಮೆ ಮೊತ್ತದ ಸ್ಕೋರ್‌ಗೆ ಸಾಕ್ಷಿಯಾಯಿತು. ಈ ಪಿಚ್‌ನಲ್ಲಿ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದ್ದು ಕಂಡು ಬಂದಿತ್ತು. ಇದೀಗ, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂ ಪಿಚ್ ನಿರ್ಮಿಸಿದ್ದ, ಪಿಚ್ ಕ್ಯೂರೇಟರ್‌ಗೆ ಗೇಟ್‌ಪಾಸ್ ನೀಡಲಾಗಿದೆ.

ನ್ಯೂಜಿಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. ಹೀಗಿದ್ದೂ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ, ಲಖನೌ ಪಿಚ್‌ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 99 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇನ್ನು ಈ ಸಾಧಾರಣ ಗುರಿ ಬೆನ್ನತ್ತಲು ಪರದಾಡಿದ ಟೀಂ ಇಂಡಿಯಾ 19.5 ಓವರ್‌ಗಳನ್ನಾಡಿ ಗೆಲುವಿನ ಗಡಿ ದಾಟಿತ್ತು. 

ಇದೀಗ ಈ ಕ್ಯೂರೇಟರ್ ಬದಲಾವಣೆ ಕುರಿತಂತೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, " ಆ ಕ್ಯೂರೇಟರ್ ಅವರನ್ನು ತೆಗೆದುಹಾಕಲಾಗಿದ್ದು, ಅವರ ಬದಲಿಗೆ ಅನುಭವಿ ಕ್ಯೂರೇಟರ್ ಸಂಜೀವ್ ಕುಮಾರ್ ಅಗರ್‌ವಾಲ್ ಅವರನ್ನು ನೇಮಕ ಮಾಡಲಾಗಿದೆ. ಇನ್ನೊಂದು ತಿಂಗಳೊಳಗಾಗಿ ನಾವು ಎಲ್ಲಾ ಪರಿಸ್ಥಿತಿಯನ್ನು ಸರಿದೂಗಿಸುತ್ತೇವೆ ಎಂದು ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Ind vs NZ: ಎರಡನೇ ಟಿ20 ಪಂದ್ಯದಲ್ಲಿ ನಿರ್ಮಾಣವಾದ 3 ಇಂಟ್ರೆಸ್ಟಿಂಗ್ ದಾಖಲೆಗಳಿವು..!

"ಸೆಂಟರ್ ವಿಕೆಟ್‌ನಲ್ಲಿ ಈಗಾಗಲೇ ಸಾಕಷ್ಟು ದೇಶಿ ಕ್ರಿಕೆಟ್‌ ನಡೆದಿತ್ತು. ಹೀಗಾಗಿ ಕ್ಯೂರೇಟರ್, ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಒಂದು ಅಥವಾ ಎರಡನೇ ಹಂತದಲ್ಲಿ ಪಿಚ್ ನಿರ್ಮಿಸಬೇಕಿತ್ತು. ಪಿಚ್‌ ಮಿತಿಮೀರಿ ಬಳಸಿಕೊಳ್ಳಲಾಗಿತ್ತು. ವಾತಾವರಣ ಕೂಡಾ ಸರಿಯಾಗಿ ಇರದ ಹಿನ್ನೆಲೆಯಲ್ಲಿ ಪ್ರೆಶ್ ಪಿಚ್ ನಿರ್ಮಿಸಲು ಸಮಯಾವಕಾಶವಿರಲಿಲ್ಲ" ಎಂದು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾಗಿ ವರದಿಯಾಗಿದೆ.

ರನ್ ಗಳಿಸಲು ಬ್ಯಾಟರ್‌ಗಳು ಪರದಾಟ:

ಪಂದ್ಯದಲ್ಲಿ ನಡೆದ ಒಟ್ಟು 39.5 ಓವರ್‌ ಆಟದಲ್ಲಿ 30 ಓವರ್‌ಗಳನ್ನು ಸ್ಪಿನ್ನರ್‌ಗಳೇ ಬೌಲ್‌ ಮಾಡಿದ್ದು, ಪಿಚ್‌ ಹೇಗಿತ್ತು ಎನ್ನುವುದಕ್ಕೆ ಉದಾಹರಣೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್‌ 20 ಓವರ್‌ ಆಡಿ 8 ವಿಕೆಟ್‌ ಕಳೆದುಕೊಂಡು ಗಳಿಸಿದ್ದು 99 ರನ್‌ ಮಾತ್ರ. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ, 4 ವಿಕೆಟ್‌ ಮಾತ್ರ ಕಳೆದುಕೊಂಡರೂ 100 ರನ್‌ ಗಳಿಸಲು 19.5 ಓವರ್‌ ತೆಗೆದುಕೊಂಡಿತು.

ಪಂದ್ಯದಲ್ಲಿ ಕೇವಲ 14 ಬೌಂಡರಿ, ಸಿಕ್ಸ್‌ ಇಲ್ಲ!

ಇಡೀ ಪಂದ್ಯದಲ್ಲಿ ದಾಖಲಾಗಿದ್ದು ಕೇವಲ 14 ಬೌಂಡರಿ. ಭಾರತ 8 ಬೌಂಡರಿ ಗಳಿಸಿದರೆ, ನ್ಯೂಜಿಲೆಂಡ್‌ 6 ಬೌಂಡರಿಗಳನ್ನು ಗಳಿಸಿತು. ಪಂದ್ಯದಲ್ಲಿ ಒಂದೂ ಸಿಕ್ಸರ್‌ ದಾಖಲಾಗಲಿಲ್ಲ. ಲಖನೌ ಮೈದಾನದ ಪಿಚ್‌ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಜಯಿಸುವ ಮೂಲಕ ಸಮಬಲ ಸಾಧಿಸಿವೆ. ಇದೀಗ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಫೆಬ್ರವರಿ 01ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ.

Follow Us:
Download App:
  • android
  • ios