Asianet Suvarna News Asianet Suvarna News

ಐಸಿಸಿ ಟಿ20 ವಿಶ್ವಕಪ್ ಮೇಲೆ ಉಗ್ರರ ಕರಿ ನೆರಳು..! ಪಾಕ್ ಮೂಲದ ಭಯೋತ್ಪಾದಕ ಸಂಘಟನೆಯಿಂದ ವಾರ್ನಿಂಗ್

ಉಗ್ರಸಂಘಟನೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲೇ ಟೂರ್ನಿ ನಡೆಯುವ ದ್ವೀಪಗಳಲ್ಲಿ ಭದ್ರತಾ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜತೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿಯು ಯಾವುದೇ ಅಡಚಣೆಯಿಲ್ಲದೇ ಟೂರ್ನಿ ಆಯೋಜಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.  

ICC T20 World Cup co host West Indies gets threat from Pak based terror group Says report kvn
Author
First Published May 6, 2024, 5:35 PM IST

ಇಸ್ಲಾಮಾಬಾದ್(ಮೇ.06): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಜೂನ್ 01ರಿಂದ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಸಹಭಾಗಿತ್ವದಲ್ಲಿ ನಡೆಯಲಿದೆ. ಇದೀಗ ಈ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮದ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು, ಉತ್ತರ ಪಾಕಿಸ್ತಾನ ಮೂಲದ ಉಗ್ರಸಂಘಟನೆಯೊಂದು ಈ ಟಿ20 ವಿಶ್ವಕಪ್ ಟೂರ್ನಿ ನಡೆಯುವ ವೇಳೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದೆ.

ಉಗ್ರಸಂಘಟನೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲೇ ಟೂರ್ನಿ ನಡೆಯುವ ದ್ವೀಪಗಳಲ್ಲಿ ಭದ್ರತಾ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜತೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿಯು ಯಾವುದೇ ಅಡಚಣೆಯಿಲ್ಲದೇ ಟೂರ್ನಿ ಆಯೋಜಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.  

ಹ್ಯಾಟ್ರಿಕ್ ಗೆಲುವು ಸಾಧಿಸಿದ ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್‌ನ ಆಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್, ದಿ ಗ್ರೀನಡೀನ್ಸ್ ಹಾಗೂ ಟ್ರಿನಿಡ್ಯಾಡ್ & ಟೊಬ್ಯಾಗೋದಲ್ಲಿ ಪಂದ್ಯಗಳು ನಡೆಯಲಿವೆ. ಇನ್ನೊಂದೆಡೆ ಅಮೆರಿಕದ ಮೂರು ನಗರಗಳಾದ ನ್ಯೂಯಾರ್ಕ್, ಪ್ಲೋರಿಡಾ ಹಾಗೂ ಟೆಕ್ಸಾಸ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಅಮೆರಿಕದಲ್ಲಿ ನಡೆಯಲಿರುವ ಪಂದ್ಯಗಳಿಗೆ ಯಾವುದೇ ಬೆದರಿಕೆವೊಡ್ಡಿಲ್ಲ. 

"ನಾವು ಈಗಾಗಲೇ ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದೇವೆ ಹಾಗೂ ಸಂಬಂಧಿತ ಸಿಬ್ಬಂದಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಟೂರ್ನಿಗೆ ಯಾವುದೇ ಅಡಚಣೆಯಾಗದಂತೆ ಯಶಸ್ವಿಯಾಗಿ ಟೂರ್ನಿ ಆಯೋಜಿಸಲು ನಾವು ಸಜ್ಜಾಗಿದ್ದೇವೆ" ಎಂದು ಆಯೋಜಕರು ತಿಳಿಸಿದ್ದಾರೆ

ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಪಡೆಗೆ ಗುಡ್ ನ್ಯೂಸ್..!

ಐಎಸ್‌ ಕೊರೊಸಾನ್ ಎನ್ನುವ ಹೆಸರಿನ ಉತ್ತರ ಪಾಕಿಸ್ತಾನ ಮೂಲದ ಸಂಘಟನೆ ಈ ಆಯೋಜನೆಯ ಕುರಿತಂತೆ ಬೆದರಿಕೆಯೊಡ್ಡಿದೆ. ಉಗ್ರಸಂಘಟನೆ ಬೆದರಿಕೆಯೊಡ್ಡಿದ ಬೆನ್ನಲ್ಲೇ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಯುವ ಟ್ರಿನಿಡ್ಯಾಡ್ ಹಾಗೂ ಗಯಾನದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಪಡಿಸಲಾಗಿದೆ.

Latest Videos
Follow Us:
Download App:
  • android
  • ios