ಐಪಿಎಲ್ ರಣರಂಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸೋಲಿನ ಸುಳಿಯಿಂದ ಹೊರಬಂದಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್ ಆಗಿದೆ. ತಂಡದ ಈ ಗೆಲುವಿನಲ್ಲಿ ಬೌಲರ್‌ಗಳು ಮಿಂಚುತ್ತಿದ್ದಾರೆ. ಅದರಲ್ಲೂ ಮಿಯಾ ಭಾಯ್ ಸಿರಾಜ್ ತಮ್ಮ ಹಳೆಯ ಖದರ್‌ಗೆ ಮರಳಿದ್ದಾರೆ.
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ಶುಭ ಸೂಚನೆ ಸಿಕ್ಕಿದೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರೋ ಈ ಆಟಗಾರ ಕಳಪೆ ಫಾರ್ಮ್ ಸುಳಿಗೆ ಸಿಲುಕಿದ್ದ. ಆದ್ರೀಗ, ಅದರಿಂದ ಹೊರಬಂದಿದ್ದಾನೆ. ಅದ್ಭುತ ಪ್ರದರ್ಶನ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾನೆ.
ಹಳೆಯ ಖದರ್‌ಗೆ ಮರಳಿದ ಹೈದ್ರಾಬಾದ್ ಎಕ್ಸ್‌ಪ್ರೆಸ್..!
ಐಪಿಎಲ್ ರಣರಂಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸೋಲಿನ ಸುಳಿಯಿಂದ ಹೊರಬಂದಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್ ಆಗಿದೆ. ತಂಡದ ಈ ಗೆಲುವಿನಲ್ಲಿ ಬೌಲರ್‌ಗಳು ಮಿಂಚುತ್ತಿದ್ದಾರೆ. ಅದರಲ್ಲೂ ಮಿಯಾ ಭಾಯ್ ಸಿರಾಜ್ ತಮ್ಮ ಹಳೆಯ ಖದರ್‌ಗೆ ಮರಳಿದ್ದಾರೆ.
ಯೆಸ್, ಆರ್‌ಸಿಬಿಯ ಫಸ್ಟ್ ಹಾಫ್ನಲ್ಲಿ ಮೊಹಮ್ಮದ್ ಸಿರಾಜ್ ತಂಡದ ಮೇನ್ ವಿಲನ್ ಆಗಿದ್ರು. ಪಾರ್ಟ್‌ಟೈಮ್ ಬೌಲರ್‌ಗಿಂತ ಕಡೆಯಾಗಿ ಬೌಲಿಂಗ್ ಮಾಡಿದ್ರು. ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯಲಾಗದೇ ಪರದಾಡಿದ್ರು. ಇದ್ರಿಂದ ಟಿ20 ವಿಶ್ವಕಪ್ ತಂಡಕ್ಕೆ ಸಿರಾಜ್ ಬೇಕಿತ್ತಾ ಅನ್ನೋ ಮಾತುಗಳು ಕೇಳಿಬಂದಿದ್ವು. ಆದ್ರೀಗ ಅದಕ್ಕೆಲ್ಲಾ ಸಿರಾಜ್ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ.! ಅಂದು ಟೀಕಿಸಿದ್ದವರೇ ಇಂದು ಜೈಕಾರ ಹಾಕ್ತಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸಿರಾಜ್, ಅದ್ಭುತ ಬೌಲಿಂಗ್ ಮೂಲಕ ಧೂಳೆಬ್ಬಿಸಿದ್ರು. ಟೈಟನ್ಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ರು. ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಹೈದ್ರಾಬಾದ್ ಎಕ್ಸ್‌ಪ್ರೆಸ್, ಕೇವಲ 29 ರನ್ ನೀಡಿ 2 ವಿಕೆಟ್ ಬೇಟೆಯಾಡಿದ್ರು. ಆ ಮೂಲಕ ಟೈಟನ್ಸ್ ಅಲ್ಪ ಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಹ್ಯಾಟ್ರಿಕ್ ಗೆಲುವು ಸಾಧಿಸಿದ ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಕೊನೆ ಕ್ಷಣದಲ್ಲಿ ಕಣಕ್ಕಿಳಿದು ಮ್ಯಾಚ್ ವಿನ್ನಿಂಗ್ ಪ್ರದರ್ಶನ..!
ಗುಜರಾತ್ ಎದುರು ಸೂಪರ್ ಪರ್ಫಾಮೆನ್ಸ್ ನೀಡಿದ ಸಿರಾಜ್, ಪವರ್ ಫ್ಲೇನಲ್ಲೇ ಗುಜರಾತ್‌ಗೆ ಶಾಕ್ ಮೇಲೆ ಶಾಕ್ ನೀಡಿ ಪಂದ್ಯದ ಮೇಲೆ RCB ಕಂಟ್ರೋಲ್ ಸಾಧಿಸಲು ನೆರವಾದ್ರು. ಅಷ್ಟೇ ಅಲ್ಲ.! RCB ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ರು. ಆದ್ರೆ, ಸಿರಾಜ್, ಗುಜರಾತ್ ವಿರುದ್ಧ ಆಡೋದೆ ಅನುಮಾನವಾಗಿತ್ತು.
ಪಂದ್ಯದ ಹಿಂದಿನ ರಾತ್ರಿ ನಾನು ಜ್ವರದಿಂದ ಬಳಲುತ್ತಿದ್ದೆ. ಅದ್ರಿಂದ ನಾನು ಆಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಆದ್ರೆ, ದೇವರ ದಯೆಯಿಂದ ಆಡಲು ಸಾಧ್ಯವಾಯ್ತು.
ಟಿ20ಯಲ್ಲಿ ಕಿಂಗ್ಸ್ ಕೊಹ್ಲಿ ಹೊಸ ಮೈಲುಗಲ್ಲು..! ಈ ಸಾಧನೆ ಮಾಡಿದ ಮೊದಲ ಭಾರತೀಯ
ಹೌದು..! ಪಂದ್ಯಕ್ಕೂ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದ ಸಿರಾಜ್, ಸಂಪೂರ್ಣ ನಿಶಕ್ತರಾಗಿದ್ದರು. ಆದ್ರೆ, ಕೊನೆ ಕ್ಷಣದಲ್ಲಿ ಫೀಲ್ಡಿಗಿಳಿಯೋ ನಿರ್ಧಾರ ಮಾಡಿದ್ರು. ಅದಕ್ಕೆ ಕಾರಣ, ಟಿ20 ವಿಶ್ವಕಪ್ ಟೂರ್ನಿ. ಮಹತ್ವದ ಟೂರ್ನಿಗೆ ಪ್ರಿಪೇರ್ ಆಗಲು, ಲಾಸ್ಟ್ ಮಿನಿಟ್ನಲ್ಲಿ ಸಿರಾಜ್ ಮನಸ್ಸು ಬದಲಿಸಿದ್ರು. ಇದು ನಿಜಕ್ಕೂ ಮೊಹಮ್ಮದ್ ಸಿರಾಜ್‌ರ ಕಮಿಟ್ಮೆಂಟ್ ಎಂತಹದ್ದು ಅನ್ನೋದಕ್ಕೆ ಸಾಕ್ಷಿಯಾಗಿದೆ.
ಅದೇನೆ ಇರಲಿ, ಸಿರಾಜ್ ಅವರ ಈ ಕಮ್‌ಬ್ಯಾಕ್ RCBಗೆ ಮಾತ್ರ ಅಲ್ಲ. ಟೀಂ ಇಂಡಿಯಾಗೂ ಶುಭ ಸೂಚನೆಯಾಗಿದೆ. IPLನ ಇನ್ನುಳಿದ ಪಂದ್ಯಗಳಲ್ಲೂ ಸಿರಾಜ್ ಅಬ್ಬರಿಸಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
