ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಕೆಎಲ್ ರಾಹುಲ್ ಅವರ ಜೆರ್ಸಿಯನ್ನು ವಿರಾಟ್ ಕೊಹ್ಲಿ ಸರಿಪಡಿಸಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಬ್ಬರ ಬಾಂಧವ್ಯವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದ ಸಂದರ್ಭದಲ್ಲಿ ಒಂದು ಆಸಕ್ತಿಯುತ ಘಟನೆ ನಡೆದಿದೆ. ಕೆಎಲ್ ರಾಹುಲ್ ಜೆರ್ಸಿಯನ್ನು ಸರಿ ಮಾಡುತ್ತಾ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇಬ್ಬರು ದೀಪಾವಳಿಗೆ ಸಿದ್ಧರಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ನೀವು ಈ ವಿಡಿಯೋ ನೋಡಿದರೆ ಒಮ್ಮೆ ನಗುತ್ತೀರಿ.
ಕನ್ನಡಿಗ KL ರಾಹುಲ್‌ಗೆ ಕರ್ನಾಟಕದ ಅಳಿಯ ವಿರಾಟ್ ಕೊಹ್ಲಿಯಿಂದ ಸಹಾಯ
ವೆಲ್ಲಿಂಗ್ಟನ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಈ ಆಸಕ್ತಿಯುತ ಘಟನೆ ನಡೆದಿದೆ. ಇತ್ತೀಚೆಗೆ 38ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ನಡುವಿನ ಬಾಂಧ್ಯವದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಳೆಯ ಕಾರಣದಿಂದ ಪಂದ್ಯ ತಡವಾಗಿ ಆರಂಭವಾಗಿತ್ತು. ಈ ಸಂರ್ಭದಲ್ಲಿ ಕೊಹ್ಲಿ, ರಾಹುಲ್ ನಡುವೆ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ಏನಿದೆ?
ಕೆಎಲ್ ರಾಹುಲ್ ತನ್ನ ಜೆರ್ಸಿ ಶರ್ಟ್ ಧರಿಸಿದ್ದರು. ಆದರೆ ಅದು ಸರಿಯಾಗಿ ಹೊಂದಾಣಿಕೆ ಆಗಿರಲಿಲ್ಲ. ಇದರಿಂದ ರಾಹುಲ್ ಸಮಸ್ಯೆ ಎದುರಿಸಿದ್ದರು. ಇದರೊಂದಿಗೆ ಡ್ರೆಸ್ಸಿಂಗ್ ರೂಮ್ ನಿಂದ ಓಡೋಡಿ ಬಂದ ಸಿಬ್ಬಂದಿಯೊಬ್ಬರು ಒಂದು ಕತ್ತರಿ ತಂದು ಶರ್ಟ್ ಕಲರ್ ಬಳಿ ಕಟ್ ಮಾಡಿದ್ದರು. ಇದರೊಂದಿಗೆ ಮಧ್ಯ ಪ್ರವೇಶಿಸಿದ್ದ ಕೊಹ್ಲಿ, ರಾಹುಲ್ ಅವರ ಸಮಸ್ಯೆಗೆ ಕ್ಷಣಾರ್ಧದಲ್ಲಿ ಸರಿ ಮಾಡಿದ್ದರು.
ಕೊಹ್ಲಿ-ರಾಹುಲ್ ಬಾಂಡಿಂಗ್ ನೋಡಿ, ಬಾವ-ಬಾಮೈದ ಎಂದ ಫ್ಯಾನ್ಸ್
ರಾಹುಲ್ ಧರಿಸಿದ್ದ ಓವರ್ ಶರ್ಟ್ ಅನ್ನು ಒಳಗಿನಿಂದ ಎಳೆದು ಸರಿ ಮಾಡಿದ್ದರು. ಈ ನಡುವೆ ರಾಹುಲ್ ನಡುವೆ ವಿಶೇಷ ಸಂಭಾಷಣೆ ನಡೆಯಿತು. ಇನ್ನು ಪಂದ್ಯ ಆರಂಭವಾಗುತ್ತಿದ್ದಂತೆ ವಿಲ್ ಯಂಗ್ ನೀಡಿದ ಕ್ಯಾಚ್ ಅನ್ನು ರಾಹುಲ್ ಅದ್ಭುತವಾಗಿ ಪಡೆದುಕೊಂಡಿದ್ದರು. ಇದರೊಂದಿಗೆ ನಬಿ ಖಾತಾಗೆ ಎರಡನೇ ವಿಕೆಟ್ ಪಡೆದುಕೊಂಡಿದ್ದರು. ಇದಕ್ಕೂ ಮುನ್ನ ಆರಂಭಿಕ ಟೀಂ ಸಿಫೆರ್ಟ್ ಅನ್ನು ಡಕೌಟ್ ಮಾಡಿ, ನಬಿ ಮೊದಲ ಅಂತರಾಷ್ಟ್ರೀಯ ವಿಕೆಟ್ ಪಡೆದುಕೊಂಡಿದ್ದರು.
ಇನ್ನು, ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದು, ಮೊದಲ ಏಕದಿನ ಪಂದ್ಯದಲ್ಲಿ 51 ಎಸೆತಗಳಲ್ಲಿ 74 ರನ್ ಗಳಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಬೌಲರ್ ಭರ್ಜರಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನ್ಯೂಜಿಲೆಂಡ್ 41 ಓವರ್‌ಗಳಲ್ಲಿ 134 ರನ್ ಗಳಿಗೆ ಆಲೌಟ್ ಆಯ್ತು. ಟೀಂ ಇಂಡಿಯಾ ಪರ ಬೌಲರ್ ಗುರ್ನೂರ್ ಬ್ರಾರ್ ನಾಲ್ಕು ವಿಕೆಟ್ ಪಡೆದುಕೊಂಡರೆ, ಅಕೀಬ್ ನಬಿ, ಅನ್ಶುಲ್ ಕಾಂಬೋಜ್, ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರು.














