ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಂತರ ಕೆಎಲ್ ರಾಹುಲ್ ಮೈದಾನದ ಹೊರಗೆ ಮಾಡಿದ ಕೆಲಸವೊಂದು ಕ್ರೀಡಾಭಿಮಾನಿಗಳ ಮನಗೆದ್ದಿದೆ. ಬಹುಮಾನವಾಗಿ ಪಡೆದಿದ್ದ ಮೊಬೈಲ್ ಫೋನ್‌ ಅನ್ನು ಅವರು ಮಹಿಳಾ ಸಿಬ್ಬಂದಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಹುಲ್ ಅವರ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕ್ರೀಡಾ ಜಗತ್ತಿನಲ್ಲಿ ಪ್ರತಿದಿನವೂ ವಿಚಿತ್ರ ಘಟನೆಗಳೂ, ಗಾಸಿಪ್‌ಗಳು, ವಿವಾದಗಳು ನಡೆಯುತ್ತಲೇ ಇರುತ್ತವೆ. ಅಂತಹ ಅಚ್ಚರಿ ಘಟನೆ ಇತ್ತೀಚೆಗ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ನಡೆದಿದೆ.

ಹೌದು ಪಂದ್ಯ ಮುಗಿದ ಬಳಿಕ ಭಾರತದ ಕ್ರಿಕೆಟಿಗೆ ಕೆಎಲ್ ರಾಹುಲ್(KL Rahul) ಮೈದಾನದ ಹೊರಗೆ ಮಾಡಿರುವ ಒಳ್ಳೆಯ ಕೆಲಸವೊಂದು ಈಗ ಕ್ರೀಡಾಭಿಮಾನಿ ಮನಗೆದ್ದಿದೆ. ಪಂದ್ಯದಲ್ಲಿ ಬಹುಮಾನವಾಗಿ ಪಡೆದಿದ್ದ ಒಂದು ಬೆಲೆಬಾಳುವ ಮೊಬೈಲ್ ಫೋನ್‌ ಅನ್ನು ಕೆಎಲ್ ರಾಹುಲ್ ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರಿಗೆ ಉಡುಗೊರೆಯಾಗಿ ನೀಡಿದ್ರು. ರಾಹುಲ್ ನೀಡಿದ ಅನಿರೀಕ್ಷಿತ ಗಿಫ್ಟ್‌ನಿಂದಾಗಿ ಮಹಿಳಾ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.

ಕೆಎಲ್ ರಾಹುಲ್ ರಿಂದ ಮೊಬೈಲ್ ಗಿಫ್ಟ್ ಸ್ವೀಕರಿಸಿದ ಆ ಮಹಿಳಾ ಸಿಬ್ಬಂದಿ, 'ನನಗೆ ಸ್ವಲ್ಪ ಆಶ್ಚರ್ಯವಾಗ್ತಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಈ ವಿಡಿಯೋ ಇದೀಗ ಗಮನ ಸೆಳೆಯುತ್ತಿದೆ. ಎಲೆಮರೆಕಾಯಿಯಂತೆ ದುಡಿಯುವ ಸಿಬ್ಬಂದಿ ಬಗ್ಗೆ ರಾಹುಲ್‌ಗೆ ಇರುವ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಮಹಿಳಾ ಸಿಬ್ಬಂದಿಗೆ ಕೆಎಲ್ ರಾಹುಲ್ ಮೊಬೈಲ್ ಗಿಫ್ಟ್

ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ್ದರಿಂದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಡಕ್‌ವರ್ತ್ ಲೂಯಿಸ್ ಸ್ಟರ್ನ್(DLS) ನಿಯಮದಂತೆ ರೋಚಕ ನಾಲ್ಕು ರನ್‌ಗಳ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಆಟದ ಮಳೆ ಬಂದು ಪಂದ್ಯ ಸ್ಥಗಿತಗೊಂಡಾಗ ಭಾರತ 26 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ಇದರಲ್ಲಿ ರಾಹುಲ್ 33 ಎಸೆತಗಳಲ್ಲಿ ಅಜೇಯರಾಗಿ 26 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು.

ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು ಪಂದ್ಯದ ಗೆಲವು, ಆಟಗಾರರ ಪ್ರದರ್ಶನ ನಡುವೆ ರಾಹುಲ್ ಅವರು ಮಾನವೀಯತೆ, ಪ್ರೀತಿಯಿಂದ ಮಹಿಳಾ ಸಿಬ್ಬಂದಿಗೆ ನೀಡಿದ ಈ ಉಡುಗೊರೆಯೇ ಹೆಚ್ಚು ಗಮನ ಸೆಳೆದಿದೆ. ಪಂದ್ಯದಲ್ಲಿ ಸಿಕ್ಕ ಮೊಬೈಲ್ ಫೋನ್ ಬಹುಮಾನ ತನ್ನಲ್ಲಿ ಇಟ್ಟುಕೊಳ್ಳದೆ ಪಂದ್ಯಗಳಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ಉಡುಗೊರೆಯಾಗಿ ನೀಡಿದ್ದಾರೆ.

Scroll to load tweet…

ಸಾಮಾನ್ಯವಾಗಿ ಆಟಗಾರರ ಸಾಧನೆ, ಮೈದಾನದಲ್ಲಿನ ಪ್ರದರ್ಶನಗಳೇ ಹೆಚ್ಚು ಸುದ್ದಿಯಾಗುತ್ತವೆ. ಆದರೆ ಆಟಗಾರರ ಯಶಸ್ಸಿನ ಹಿಂದೆ ಎಲೆಮರೆಕಾಯಿಯಂತೆ ದುಡಿಯುವ ಅದೆಷ್ಟು ಸಿಬ್ಬಂದಿಯ ಕೊಡುಗೆ ಇರುತ್ತದೆ. ಅಂಥ ಸಿಬ್ಬಂದಿಯನ್ನು ಗೌವರವಿಸುವ ಮೂಲಕ ಕೆಎಲ್ ರಾಹುಲ್ ಹೃದಯವಂತಿಕೆ ಮೆರೆದಿದ್ದಾರೆ. ಕ್ರೀಡೆಯಲ್ಲಿ ನೆನಪಿನಲ್ಲಿ ಉಳಿಯುವ ಕ್ಷಣಗಳು ಮೈದಾನದ ಒಳಗೆ ಮಾತ್ರವಲ್ಲ, ಮೈದಾನದ ಹೊರಗೂ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.