ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 350 ರನ್ ಸಿಡಿಸ್ತಾರಾ ಕೊಹ್ಲಿ? ವಿರಾಟ್ ಹಳೆ ಖದರ್‌ಗೆ ಮರಳಲು ಇದೆ ಬೆಸ್ಟ್ ಚಾನ್ಸ್..!
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಹಳೆ ಖದರ್ ಕಳೆದುಕೊಂಡಿದ್ದಾರೆ. ಬ್ಯಾಟಿಂಗ್ ಸರಾಸರಿ ಕುಸಿಯುತ್ತಿದೆ. ಆದ್ರೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಕಳೆದುಕೊಂಡದ್ದನ್ನ ಮತ್ತೆ ಪಡೆದುಕೊಳ್ಳಲು ಕೊಹ್ಲಿಗೆ ಒಳ್ಳೆ ಅವಕಾಶ ಸಿಕ್ಕಿದೆ. ಅಷ್ಟಕ್ಕೂ ಕೊಹ್ಲಿ ಏನು ಕಳೆದುಕೊಂಡಿದ್ರು? ಪಡೆದುಕೊಳ್ಳಲು ಏನ್ ಮಾಡ್ಬೇಕು ಅಂತೀರಾ? ಹಾಗಾದ್ರೆ, ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಕಳೆದುಕೊಂಡದ್ದನ್ನ ಪಡೆದುಕೊಳ್ಳಲು ಕೊಹ್ಲಿಗೆ ಬೆಸ್ಟ್ ಚಾನ್ಸ್..!
ವಿರಾಟ್ ಕೊಹ್ಲಿ ಕೆಲ ವರ್ಷಗಳ ಹಿಂದೆ 3 ಫಾಮ್ಯಾಟ್ನಲ್ಲೂ 50 ಪ್ಲಸ್ ಆವರೇಜ್ ಮೆಂಟೇನ್ ಮಾಡಿದ್ರು. ಈವರೆಗು ಕೊಹ್ಲಿನ ಬಿಟ್ರೆ, ಬೇರೆ ಯಾವ ಬ್ಯಾಟರ್ ಈ ಸಾಧನೆ ಮಾಡಿಲ್ಲ. ಆದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ ತಮ್ಮ ಖದರ್ ಕಳೆದುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಅವ್ರ ಬ್ಯಾಟಿಂಗ್ ಸರಾಸರಿ ಕುಸಿಯುತ್ತಿದೆ. ಈಗಾಗ್ಲೇ ಕೊಹ್ಲಿ 50ರ ಸರಾಸರಿ ಹೊಂದಿರೋ ಬ್ಯಾಟರ್‍ಗಳ ಕ್ಲಬ್ನಿಂದ ಹೊರಬಿದ್ದಿದ್ದಾರೆ. ಆದ್ರೀಗ, ಮತ್ತೆ 50 ಪ್ಲಸ್ ಆವರೇಜ್ ಕ್ಲಬ್‌ಗೆ ಎಂಟ್ರಿ ಕೊಡಲು ಬೆಸ್ಟ್ ಚಾನ್ಸ್ ಸಿಕ್ಕಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಹುಲ್ ವಿದಾಯ..? ಚಿಕ್ಕ ವಯಸ್ಸಿಗೆ ರಾಹುಲ್ ರಿಟೈರ್ಡ್ ಆಗ್ತಿರೋದ್ಯಾಕೆ..?
ಟೀಂ ಇಂಡಿಯಾ ಸೆಪ್ಟೆಂಬರ್ 19ರಿಂದ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಸರಣಿಯಲ್ಲಿ ಅಬ್ಬರಿಸಿದ್ರೆ, ಕೊಹ್ಲಿ ಕಳೆದುಕೊಂಡಿದ್ದನ್ನ ಮತ್ತೆ ಪಡೆದುಕೊಳ್ಳಲಿದ್ದಾರೆ. ಸರಣಿಯ 4 ಇನ್ನಿಂಗ್ಸ್‌ಗಳಿಂದ 152 ರನ್ ಗಳಿಸಿದ್ರೆ, ಅವ್ರ ಬ್ಯಾಟಿಂಗ್ ಸರಾಸರಿ ಮತ್ತೆ 50ಕ್ಕೇರಲಿದೆ. ಆದ್ರೆ, 4 ಇನ್ನಿಂಗ್ಸ್ಗಳಲ್ಲೂ ಕೊಹ್ಲಿ ನಾಟ್ಔಟ್ ಆಗಿ ಉಳಿಯಬೇಕು. ಇನ್ನು ಎಲ್ಲಾ ಇನ್ನಿಂಗ್ಸ್ಗಳಲ್ಲಿ ಔಟಾದ್ರೂ, 50 ಪ್ಲಸ್ ಸರಾಸರಿ ಲಿಸ್ಟ್‌ಗೆ ಸೇರಬೇಕಂದ್ರೆ, ಕೊಹ್ಲಿ ಕನಿಷ್ಠ 350 ರನ್ ಗಳಿಸಬೇಕು.
ಬಾಂಗ್ಲಾ ಹುಲಿಗಳ ವಿರುದ್ಧ ವಿರಾಟ್ ವಿರಾಟರೂಪ ಫಿಕ್ಸ್..!
ಬಾಂಗ್ಲಾದೇಶ ಅಷ್ಟೇನೂ ಬಲಿಷ್ಠವಾಗಿಲ್ಲ. ತಂಡದಲ್ಲಿ ಹೇಳಿಕೊಳ್ಳುವಂತ ಬೌಲರ್‍ಗಳಿಲ್ಲ. ಹೀಗಾಗಿ ಕೊಹ್ಲಿಗೆ ರನ್ ಗಳಿಸೋದು ಅಷ್ಟೊಂದು ಕಷ್ಟವಾಗಲ್ಲ. ಒಂದು ವೇಳೆ ಈ ಸರಣಿಯಲ್ಲೂ ವಿಫಲರಾದ್ರೆ, ಕೊಹ್ಲಿಯ ಆವರೇಜ್ ಮತ್ತಷ್ಟು ಕುಸಿಯಲಿದೆ. ಮತ್ತೊಂದೆಡೆ ಈ ಅಂಕಿ-ಅಂಶಗಳನ್ನ ನೋಡಿದ್ರೆ, ಕೊಹ್ಲಿ ಬಾಂಗ್ಲಾ ಮೇಲೆ ಅಬ್ಬರಿಸೋದು ಪಕ್ಕಾ..!
ಮುಂಬೈ ಬಿಟ್ ಬನ್ನಿ, ನಿಮ್ಮನ್ನೇ ಕ್ಯಾಪ್ಟನ್ ಮಾಡ್ತೀವಿ: ಹಳೆ ಆಟಗಾರನಿಗೆ ಹಾಲಿ ಚಾಂಪಿಯನ್ ಕೆಕೆಆರ್ ಬಿಗ್ ಆಫರ್..!
ಕೊಹ್ಲಿ ಈವರೆಗು ಬಾಂಗ್ಲಾದೇಶ ವಿರುದ್ಧ 9 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 54.62ರ ಸರಾಸರಿಯಲ್ಲಿ 497 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 2 ಶತಕ ಸೇರಿವೆ. 204 ಹೈಯೆಸ್ಟ್ ಸ್ಕೋರ್ ಅಗಿದೆ.
2019ರ ನಂತರ ಕೊಹ್ಲಿ ಟೆಸ್ಟ್ ಫಾರ್ಮ್ ಕುಸಿತ..!
ಯೆಸ್, 2019ರಲ್ಲಿ ವಿರಾಟ್ ಟೆಸ್ಟ್ ಫಾರ್ಮ್ ಪೀಕ್ನಲ್ಲಿತ್ತು. ಆ ವರ್ಷ ಕೊಹ್ಲಿ 11 ಇನ್ನಿಂಗ್ಸ್ಗಳಿಂದ 68.00ರ ಸರಾಸರಿಯಲ್ಲಿ 612 ರನ್ಗಳಿಸಿದ್ರು. ಆದ್ರೆ, 2020ರಲ್ಲಿ ಕೊಹ್ಲಿಯ ಫಾರ್ಮ್ ಪಾತಾಳಕ್ಕೆ ಕುಸಿದು ಬಿಡ್ತು. ಟ್ವೆಂಟಿ-ಟ್ವೆಂಟಿ ಇಯರ್ನಲ್ಲಿ ಕೊಹ್ಲಿ 6 ಇನ್ನಿಂಗ್ಸ್ಗಳಿಂದ ಕೇವಲ 19.33ರ ಸರಾಸರಿಯಲ್ಲಿ 116 ರನ್ ಗಳಿಸಿದ್ರು.
2021ರಲ್ಲೂ ಕೊಹ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿದ್ರು. 19 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ರು. ಇದ್ರಲ್ಲಿ 28.21ರ ಸರಾಸರಿಯಲ್ಲಿ 4 ಅರ್ಧಶತಕಗಳ ಸಹಿತ 536 ರನ್ಗಳಿಸಿದ್ರು. ಇನ್ನು ಕಳೆದ ವರ್ಷವೂ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಬರ ಎದುರಿಸಿದ್ರು. 2022ರಲ್ಲಿ ಕೊಹ್ಲಿ ಒಟ್ಟು 11 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ರು. 26.50ರ ಸರಾಸರಿಯಲ್ಲಿ 265 ಮಾತ್ರ ಸಿಡಿಸಿದ್ರು. ಆದ್ರೆ, 2023ರಲ್ಲಿ ಕೊಹ್ಲಿ ಫಾರ್ಮ್ ಕಂಡುಕೊಂಡ್ರು. 12 ಇನ್ನಿಂಗ್ಸ್ಗಳಿಂದ 55.91ರ ಸರಾಸರಿಯಲ್ಲಿ 2 ಶತಕ ಮತ್ತು 2 ಅರ್ಧಶತಕ ಸಹಿತ 671 ರನ್ ಕಲೆಹಾಕಿದ್ರು.
ಅದೇನೆ ಇರಲಿ, ಬಾಂಗ್ಲಾ ಹುಲಿಗಳ ವಿರುದ್ಧದ ಟೆಸ್ಟ್ ಕಾದಾಟದಲ್ಲಿ ವಿರಾಟ್ ವಿರಾಟ ರೂಪ ತೋರಿಸಲಿ. ಆ ಮೂಲಕ ತಮ್ಮ ಗತವೈಭವಕ್ಕೆ ಮರಳಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್..!