ಕನ್ನಡಿಗ ಕೆ ಎಲ್ ರಾಹುಲ್ ನಿವೃತ್ತಿ ವಿಚಾರ ಸಂಚಲವನ್ನೇ ಸೃಷ್ಟಿಸಿದೆ. ಇದರ ಅಸಲಿಯತ್ತೇನೂ ಎನ್ನುವುದನ್ನು ನೋಡೋಣ ಬನ್ನಿ

ಬೆಂಗಳೂರು: ಟೀಂ ಇಂಡಿಯಾ ಪರ ಆಡುತ್ತಿರುವುದು ಏಕೈಕ ಕನ್ನಡಿಗ ಮಾತ್ರ. ಅದು ಎರಡು ಫಾರ್ಮ್ಯಾಟ್‌ನಲ್ಲಿ. ಆತನ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಆದ್ರೆ ಆಗ್ಲೇ ಆತ ರಿಟೈರ್ಡ್ ಆಗೋಕೆ ರೆಡಿಯಾಗಿದ್ದಾನೆ. ಆತನೇ ಕೆಎಲ್ ರಾಹುಲ್. ಏನಿದು ಕನ್ನಡಿಗನ ನಿವೃತ್ತಿ ಸುದ್ದಿ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಪೋಸ್ಟ್..!

ಕೆ ಎಲ್ ರಾಹುಲ್, ಕರ್ನಾಟಕದ ವಿಕೆಟ್ ಕೀಪರ್ ಕಮ್ ಬ್ಯಾಟರ್‌ಗೆ ಇನ್ನೂ 32 ವರ್ಷ. ದಶಕಗಳಿಂದ ಟೀಂ ಇಂಡಿಯಾ ಪರ ಆಡುತ್ತಿದ್ದರೂ ಯಾವ್ದೇ ಫಾಮ್ಯಾಟ್ನಲ್ಲೂ ನೂರು ಮ್ಯಾಚ್ ಆಡಿಲ್ಲ. 50 ಟೆಸ್ಟ್. 77 ಒನ್ಡೇ. 72 ಟಿ20 ಪಂದ್ಯಗಳನ್ನಾಡಿದ್ದಾರೆ.. ಆರಂಭದಲ್ಲಿ ಅವಕಾಶ ವಂಚಿತ. ಬಳಿಕ ಇಂಜುರಿ. ಈ ಎರಡು ಕನ್ನಡಿಗನ ಕೆರಿಯರ್‌ಗೆ ಮುಳುವಾಯ್ತು. ಈಗ ಟಿ20 ಟೀಮ್‌ನಿಂದ ಡ್ರಾಪ್ ಆಗಿದ್ದು, ಒನ್ಡೇ-ಟೆಸ್ಟ್ ಟೀಮ್ನಲ್ಲಿ ಮಾತ್ರ ಸ್ಥಾನ ಪಡೆಯುತ್ತಿದ್ದಾರೆ. ಆದ್ರೆ ಅಲ್ಲೂ ಪ್ಲೇಯಿಂಗ್-11ನಲ್ಲಿ ಖಾಯಂ ಸ್ಥಾನಕ್ಕೆ ಗ್ಯಾರಂಟಿ ಇಲ್ಲ.

Scroll to load tweet…

ಪ್ಯಾರಿಸ್‌ಗೆ ಪಯಣ ಬೆಳೆಸಿದ ಭಾರತೀಯ ಪ್ಯಾರಾ ಅಥ್ಲೀಟ್‌ಗಳು: ಸಾರ್ವಕಾಲಿಕ ಗರಿಷ್ಠ 84 ಮಂದಿ ಕಣಕ್ಕೆ

ಟೀಂ ಇಂಡಿಯಾದಲ್ಲಿ ಆ ಸ್ಥಿತಿ ಆದ್ರೆ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನ ತೊರೆಯುವ ಹಾದಿಯಲ್ಲಿದ್ದಾರೆ ರಾಹುಲ್. ಮಾಲೀಕರಿಂದ ಮೈದಾನದಲ್ಲೇ ವಾಗ್ದಾಳಿ ನಡೆಸಿಕೊಂಡಿದ್ದ ರಾಹುಲ್, ಲಖನೌ ಬಿಟ್ಟು ಬೇರೆ ತಂಡ ಸೇರೋದು ಪಕ್ಕಾ. ಇದರ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ರಾಹುಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಹಾದಿಯಲ್ಲಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಇದನ್ನ ಬಹಿರಂಗಪಡಿಸಿದೆ.

ಟಿ20 ವಿಶ್ವಕಪ್ ತಂಡದಿಂದ ಡ್ರಾಪ್ ಆಗಿದ್ದ ರಾಹುಲ್, ಟಿ20 ಕೆರಿಯರ್ ಕ್ಲೋಸ್ ಆಗಿದೆ. ಲಂಕಾ ಒನ್ಡೇ ಸಿರೀಸ್ಗೆ ಆಯ್ಕೆಯಾದ್ರೂ ಮೊದಲೆರಡು ಪಂದ್ಯದಲ್ಲಿ ಫೇಲ್.. ಮೂರನೇ ಮ್ಯಾಚ್ನಿಂದ ಡ್ರಾಪ್.. ಮುಂದೆ ರಾಹುಲ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನ ಅನ್ನಲಾಗ್ತಿದೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗನ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಆ ಪೋಸ್ಟ್‌ನಲ್ಲಿ ರಾಹುಲ್, ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ಗುಡ್ ಹೈ ಹೇಳ್ತಾರೆ ಅನ್ನೋ ಮಾಹಿತಿ ಇದೆ.

ರಾಹುಲ್ ಹಾಕಿದ್ದೇ ಬೇರೆ, ವೈರಲ್ ಆಗ್ತಿರೋದು ಬೇರೆ ಪೋಸ್ಟ್..!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೀಗೆ ಇದೆ. ಸಾಕಷ್ಟು ಯೋಚಿಸಿದ ಬಳಿಕ ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಅನೇಕ ವರ್ಷಗಳಿಂದ ಕ್ರಿಕೆಟ್ ನನ್ನ ಜೀವನದ ಪ್ರಮುಖ ಭಾಗವಾಗಿದೆ. 

ನನ್ನ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾನು ಪಡೆದ ಅನುಭವಗಳು ಮತ್ತು ನೆನಪುಗಳು ನಿಜವಾಗಿಯೂ ಬೆಲೆಕಟ್ಟಲಾಗದವು. ನನ್ನ ದೇಶವನ್ನು ಪ್ರತಿನಿಧಿಸಲು ಮತ್ತು ಅನೇಕ ಪ್ರತಿಭಾವಂತ ಕ್ರಿಕೆಟಿಗರೊಂದಿಗೆ ಆಡಿದ್ದು ನನಗೆ ಹೆಮ್ಮೆ ತಂದಿದೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದೆ.

ಈ ಕಾರಣಕ್ಕೆ ಹಾರ್ದಿಕ್ ಪಾಂಡ್ಯ, ನತಾಶಾ ಬೇರೆಯಾದ್ರಂತೆ, ಬಯಲಾಯ್ತು ಸಂಸಾರದ ಗುಟ್ಟು!

ರಾಹುಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವುದು ನಿಜ. ಆದರೆ ಆ ಪೋಸ್ಟ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯಕ್ಕೆ ಸಂಬಂಧಿಸಿದಲ್ಲ. ಬದಲಿಗೆ ರಾಹುಲ್ ಅವರ ಪೋಸ್ಟ್ನಲ್ಲಿರುವುದೇನೆಂದರೆ, I Have An Announcement To Make, Stay Tuned ಅಂದರೆ ನಾನು ನಿಮ್ಮ ಬಳಿ ಏನ್ನನ್ನೋ ಹೇಳಬೇಕಿದೆ. ಕಾಯುತ್ತಿರಿ. ಎಂದು ಬರೆದುಕೊಂಡಿದ್ದಾರೆ. ಆದರೆ ರಾಹುಲ್ ಹಾಕಿರುವ ಈ ಪೋಸ್ಟ್ ಅನ್ನು ತಿರುಚಿರುವ ಕಿಡಿಗೇಡಿಗಳು, ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಎಂಬ ವದಂತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿದ್ದಾರೆ. 

2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಕೆಎಲ್ ರಾಹುಲ್, ದಶಕದಿಂದ ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿದ್ದಾರೆ. ಐಪಿಎಲ್ನಲ್ಲೂ ಆರ್‌ಸಿಬಿ, ಪಂಜಾಬ್, ಲಖನೌ ಪರ ದೂಳೆಬ್ಬಿಸಿದ್ದಾರೆ. ಮುಂದಿನ ಸೀಸನ್ ಐಪಿಎಲ್ನಲ್ಲಿ ಅವರು ಯಾವ ತಂಡ ಸೇರಿಕೊಳ್ತಾರೆ ಅನ್ನೋ ಕುತೂಹಲವಿದೆ. ಇದರ ನಡ್ವೆ ಟೆಸ್ಟ್ ಮತ್ತು ಒನ್ಡೇಯಲ್ಲಿ ರಾಹುಲ್ ಯಾವ ಕ್ರಮಾಂಕದಲ್ಲಿ ಆಡ್ತಾರೆ. ಯಾವ ರೋಲ್ ರಿವೀಲ್ ಮಾಡ್ತಾರೆ ಅನ್ನೋ ಕುತೂಹಲ ಇದ್ದೇ ಇದೆ.

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್