Asianet Suvarna News Asianet Suvarna News

ಮುಂಬೈ ಬಿಟ್ ಬನ್ನಿ, ನಿಮ್ಮನ್ನೇ ಕ್ಯಾಪ್ಟನ್ ಮಾಡ್ತೀವಿ: ಹಳೆ ಆಟಗಾರನಿಗೆ ಹಾಲಿ ಚಾಂಪಿಯನ್ ಕೆಕೆಆರ್ ಬಿಗ್ ಆಫರ್..!

ಮುಂಬರುವ 2025ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈನ ಸ್ಪೋಟಕ ಬ್ಯಾಟರ್ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕೆಕೆಆರ್ ಫ್ರಾಂಚೈಸಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ

IPL 2025 KKR Have Approached Suryakumar Yadav To Become Their Captain Says report kvn
Author
First Published Aug 25, 2024, 11:05 AM IST | Last Updated Aug 25, 2024, 11:05 AM IST

ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 18ನೇ ಆವೃತ್ತಿಯಲ್ಲೂ ಟ್ರೋಫಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರೌವೃತ್ತವಾದಂತಿದೆ. ಶಾರುಕ್ ಖಾನ್ ಮಾಲಿಕತ್ವದ ಕೆಕೆಆರ್ ಫ್ರಾಂಚೈಸಿಯು ಇದೀಗ ತಮ್ಮ ತಂಡದಲ್ಲಿದ್ದ, ಈಗ ಮುಂಬೈ ಇಂಡಿಯನ್ಸ್‌ ತಂಡದ ನಂಬಿಗಸ್ಥ ಬ್ಯಾಟರ್ ಎನಿಸಿಕೊಂಡಿರುವ ಆಟಗಾರನಿಗೆ ಗಾಳಹಾಕಲು ಮುಂದಾಗಿದೆ ಎನ್ನುವ ಬಿಸಿಬಿಸಿ ಚರ್ಚೆ ಜೋರಾಗಿದೆ.

ಹೌದು ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ತಾರಾ ಆಟಗಾರ ಸೂರ್ಯಕುಮಾರ್‌ ಯಾದವ್‌ಗೆ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಅನಧಿಕೃತವಾಗಿ ನಾಯಕತ್ವದ ಆಫರ್‌ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತ ಟಿ20 ನಾಯಕನಾಗಿ ನೇಮಕಗೊಂಡಿರುವ ಸೂರ್ಯ, ಕಳೆದ ಕೆಲ ವರ್ಷಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿದ್ದಾರೆ. 

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ ಸವಾಲು ಗೆದ್ದ ಗುಲ್ಬರ್ಗಾ

ವರದಿಗಳ ಪ್ರಕಾರ, ಕೆಕೆಆರ್‌ ಮಾಲಿಕರು ಸೂರ್ಯಕುಮಾರ್‌ರನ್ನು ಔಪಚಾರಿಕವಾಗಿ ಭೇಟಿಯಾಗಿ, ಮುಂದಿನ ಆವೃತ್ತಿಯಲ್ಲಿ ತಂಡಕ್ಕೆ ಸೇರ್ಪಡೆಗೊಂಡರೆ ನಾಯಕತ್ವ ನೀಡುವುದಾಗಿ ಆಫರ್ ನೀಡಿದೆ ಎಂದು ತಿಳಿದುಬಂದಿದೆ. ಸದ್ಯ ಕೆಕೆಆರ್‌ ನಾಯಕರಾಗಿರುವ ಶ್ರೇಯಸ್‌ ಅಯ್ಯರ್‌ರನ್ನು ಮುಂಬೈ ಇಂಡಿಯನ್ಸ್‌ಗೆ ಮಾರಾಟ ಮಾಡಲು ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಕೆಆರ್‌ ಆಫರ್‌ ಸೂರ್ಯಕುಮಾರ್‌ ಸ್ವೀಕರಿಸಿದ್ದಾರೊ ಇಲ್ಲವೊ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.

ಸೂರ್ಯ ಕೆಕೆಆರ್‌ನ ಮಾಜಿ ಆಟಗಾರ:  ಸೂರ್ಯಕುಮಾರ್ ಯಾದವ 2012ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಮುಂಬೈ ಪರ ಏಕೈಕ ಪಂದ್ಯವನ್ನಾಡಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು. ಇದಾದ ಬಳಿಕ 2014ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 70 ಲಕ್ಷ ರುಪಾಯಿ ನೀಡಿ ಸೂರ್ಯಕುಮಾರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕೆಕೆಆರ್ ಪರ ಆಡಿದ ಮೊದಲ ಸೀಸನ್‌ನಲ್ಲಿ ಸೂರ್ಯ 32ರ ಸರಾಸರಿಯಲ್ಲಿ 164 ರನ್ ಬಾರಿಸಿದ್ದರು. ಇದಾದ ಬಳಿಕ ಸತತ 4 ಐಪಿಎಲ್ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಕೆಕೆಆರ್ ಪರ 54 ಪಂದ್ಯಗಳನ್ನಾಡಿ 608 ರನ್ ಬಾರಿಸಿದ್ದರು. 

ಅಂತಾರಾಷ್ಟ್ರೀಯ, ದೇಶಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಶಿಖರ್ ಧವನ್..! ಐಪಿಎಲ್ ಆಡ್ತಾರಾ ಗಬ್ಬರ್ ಸಿಂಗ್?

ಇನ್ನು ಇದಾದ ಬಳಿಕ 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಸೂರ್ಯಕುಮಾರ್ ಯಾದವ್ ಅವರನ್ನು 3.20 ಕೋಟಿ ರುಪಾಯಿಗೆ ಖರೀದಿಸಿತು. ಇದಾದ ಬಳಿಕ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಖದರ್ ಚೇಂಜ್ ಆಯಿತು. ಮುಂಬೈ ಸೇರಿದ ಬಳಿ ಸೂರ್ಯ ಸದ್ಯ ಭಾರತ ಟಿ20 ಕ್ರಿಕೆಟ್ ತಂಡದ ನಂ.1 ಬ್ಯಾಟರ್ ಆಗಿ ಬೆಳೆದು ನಿಂತಿದ್ದಾರೆ

ಸದ್ಯ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಇಬ್ಬರೂ ಬುಚ್ಚಿ ಬಾಬು ಆಹ್ವಾನಿತ ತಂಡಗಳ ನಡುವಿನ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೆಲ ವರದಿಗಳ ಪ್ರಕಾರ ತಮಗೆ ಐಪಿಎಲ್ ಗೆದ್ದುಕೊಟ್ಟ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಮುಂಬೈಗೆ ನೀಡಿ ಆಕ್ರಮಣಕಾರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಕರೆ ತರಲು ಕೆಕೆಆರ್ ಫ್ರಾಂಚೈಸಿ ಮಾಸ್ಟರ್ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

Latest Videos
Follow Us:
Download App:
  • android
  • ios