ಅಂದು ಸ್ಲಂ ಬಾಡಿಗೆ ಮನೆಯಲ್ಲಿ ವಾಸ..! ಇಂದು ಕೋಟಿ ಬೆಲೆ ಬಾಳೋ ಮನೆಗೆ ಮಾಲೀಕ..! ಸಿರಾಜ್ ಸ್ಪೂರ್ತಿಯ ಕಥೆ
ವೇಗಿ ಮೊಹಮ್ಮದ್ ಸಿರಾಜ್ ಜೀವನ ಹಲವರಿಗೆ ಸ್ಪೂರ್ತಿ
ಸಿರಾಜ್ನಷ್ಟು ಟ್ರೋಲ್ಗೊಳಾಗಾದ, ಟೀಕೆಗಳನ್ನ ಎದುರಿಸಿದ ಭಾರತದ ಬೌಲರ್ ಮತ್ತೊಬ್ಬರಿಲ್ಲ
ಆಗ ಆಟೋ ರಿಕ್ಷಾ, ಈಗ BMW ಕಾರಿನಲ್ಲಿ ಓಡಾಟ
ಹೈದಾರಾಬಾದ್(ಜೂ.24): ಮೊಹಮ್ಮದ್ ಸಿರಾಜ್..! ಸದ್ಯ ಕ್ರಿಕೆಟ್ ಜಗತ್ತಿನ ಒನ್ ಆಫ್ ದಿ ಬೆಸ್ಟ್ ಬೌಲರ್. ICC ಏಕದಿನ ಫಾರ್ಮೆಟ್ನ ನಂಬರ್ 2 ರ್ಯಾಂಕ್ ಪೇಸರ್. ಆದ್ರೆ, ಕೆಲ ವರ್ಷಗಳ ಹಿಂದೆ ಸಿರಾಜ್ನಷ್ಟು ಟ್ರೋಲ್ಗೊಳಾಗಾದ, ಟೀಕೆಗಳನ್ನ ಎದುರಿಸಿದ ಭಾರತದ ಬೌಲರ್ ಮತ್ತೊಬ್ಬರಿಲ್ಲ. ಆದ್ರೆ, ಈ ಹೈದ್ರಾಬಾದ್ ಎಕ್ಸ್ಪ್ರೆಸ್ ಯಾವ ಟೀಕೆ, ಟ್ರೋಲ್ಗಳಿಗೂ ಕುಗ್ಗಲಿಲ್ಲ.
ಸಿರಾಜ್ರ ಈ ಅದ್ಭುತ ಸಕ್ಸಸ್ಗೆ ಆತನ ಹಾರ್ಡ್ವರ್ಕ್ ಆ್ಯಂಡ್ ಡೆಡಿಕೇಷನ್ನೇ ಕಾರಣ. ಇನ್ನು ಸಿರಾಜ್ ಆಟದ ಜೊತೆಗೆ ಲಕ್, ಲೈಫ್ ಸ್ಟೈಲ್, ಆದಾಯ ಎಲ್ಲವೂ ಫುಲ್ ಚೇಂಜ್ ಆಗಿದೆ. ಸ್ಲಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಿರಾಜ್ ಈಗ, ಕೋಟಿ..ಕೋಟಿ ಬೆಲೆ ಬಾಳೋ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಲಕ್ಷುರಿ ಕಾರ್ಗಳಲ್ಲಿ ಓಡಾಡ್ತಿದ್ದಾರೆ.
ಯೆಸ್, ಹೈದ್ರಾಬಾದ್ ಪರ ದೇಶಿಯ ಕ್ರಿಕೆಟ್ನಲ್ಲಿ ಮಿಂಚಿದ ಸಿರಾಜ್ 2017ರಲ್ಲಿ IPLಗೆ ಎಂಟ್ರಿ ನೀಡಿದ್ರು. ಆಗ ಸಿರಾಜ್ ಬೇಸ್ ಪ್ರೈಸ್ ಇದ್ದದ್ದು ಜಸ್ಟ್ 20 ಲಕ್ಷ. ಈ 20 ಲಕ್ಷ ಸಿಕ್ರೆ ಸಾಕು ಅಂತ ಸಿರಾಜ್ ಅಂದುಕೊಂಡಿದ್ರು. ಆದ್ರೆ, ಸನ್ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ 2.7 ಕೋಟಿ ನೀಡಿ ಸಿರಾಜ್ರನ್ನ ಖರೀದಿಸ್ತು. ಅಲ್ಲಿಂದ ಸಿರಾಜ್ ಕೋಟ್ಯಾಧಿಪತಿಯಾಗಿ ಬದಲಾದ್ರು.
ಆಗ ಆಟೋ ರಿಕ್ಷಾ, ಈಗ BMW ಕಾರಿನಲ್ಲಿ ಓಡಾಟ..!
2018ರಿಂದ RCB ಪರ ಆಡ್ತಿರೋ ಸಿರಾಜ್, ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ಬೆಂಗಳೂರು ಫ್ರಾಂಚೈಸಿ, ಸಿರಾಜ್ಗೆ ವರ್ಷಕ್ಕೆ 7 ಕೋಟಿ ಸಂಬಳ ನೀಡ್ತಿದೆ. ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನ B ಗ್ರೇಡ್ ಪ್ಲೇಯರ್ ಆಗಿರೋ ಸಿರಾಜ್, ವರ್ಷಕ್ಕೆ 3 ಕೋಟಿ ಸಂಪಾದಿಸ್ತಿದ್ದಾರೆ. ಇನ್ನು ಮ್ಯಾಚ್ ಫೀಸ್ ರೂಪದಲ್ಲಿ ಸಿರಾಜ್, ಒಂದು ಟೆಸ್ಟ್ ಮ್ಯಾಚ್ಗೆ 15 ಲಕ್ಷ, ಏಕದಿನ ಪಂದ್ಯವೊಂದಕ್ಕೆ 6 ಲಕ್ಷ, ಟಿ20 ಮ್ಯಾಚ್ವೊಂದಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಈ ಎಲ್ಲಾ ಆದಾಯ ಲೆಕ್ಕಹಾಕಿದ್ರೆ ಸಿರಾಜ್ ಮಿಯಾ ನೆಟ್ವರ್ತ್ 48 ಕೋಟಿ ರೂಪಾಯಿ ಎನ್ನಲಾಗಿದೆ.
ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಸ್ಟ್ರಾಂಗ್ ಆಗಬೇಕಾ..? ಮೊದಲು ಸಂಬಳ ಹೆಚ್ಚಿಸಿ..!
ಒಂದು ಕಾಲಕ್ಕೆ ಸಿರಾಜ್ ಹೈದ್ರಾಬಾದ್ ಸ್ಲಂ ಏರಿಯಾದಲ್ಲಿ ವಾಸವಾಗಿದ್ರು. ಸಿರಾಜ್ ಅವ್ರ ತಂದೆ ಆಟೋ ಚಾಲಕರಾಗಿದ್ರು. ತಿಂಗಳ ಮನೆ ಬಾಡಿಗೆ ಕಟ್ಟಲು ಆಗದ ಪರಿಸ್ಥಿತಿ ಇತ್ತು. ಆದ್ರೀಗ, ಸಿರಾಜ್ ಹೈದ್ರಾಬಾದ್ನ ಪ್ರತಿಷ್ಠಿತ, ಜೂಬ್ಲಿಹಿಲ್ಸ್ನ ಫಿಲ್ಮ್ನಗರ ಪ್ರದೇಶದಲ್ಲಿ ದೊಡ್ಡ ಬಂಗಲೆಯೊಂದನ್ನ ಖರೀದಿಸಿದ್ದಾರೆ. ಈ ಬಾರಿಯ IPL ವೇಳೆ ಸಿರಾಜ್ರ RCB ಆಟಗಾರರನ್ನ ಮನೆಗೆ ಆಹ್ವಾನಿಸಿ ಭರ್ಜರಿ ಬಿರಿಯಾನಿ ಪಾರ್ಟಿ ನೀಡಿದ್ರು.
ಇನ್ನು BMW ಸೆಡಾನ್, ಮಹೀಂದ್ರಾ ಥಾರ್, ಟಯೋಟ ಕೊರಲಾ, ಸೇರಿದಂತೆ ಹಲವು ಐಷಾರಾಮಿ ಕಾರ್ಗಳಿಗೆ ಸಿರಾಜ್ ಮಾಲೀಕರಾಗಿದ್ದಾರೆ. 6 ವರ್ಷಗಳ ಹಿಂದೆ ಆಟೋ, ರಿಕ್ಷಾದಲ್ಲಿ ಓಡಾಡ್ತಿದ್ದ ಸಿರಾಜ್, ಈಗ ಲಕ್ಷುರಿ ಕಾರುಗಳಲ್ಲಿ ಓಡಾಡ್ತಿದ್ದಾರೆ. ಟ್ಯಾಲೆಂಟ್, ಕಠಿಣ ಪರಿಶ್ರಮ ಅನ್ನೋದು ಇದ್ದರೆ ಅದೃಷ್ಟ ತಾನಾಗೆ ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ಸಿರಾಜ್ ಜೀವನೇ ಬೆಸ್ಟ್ ಎಕ್ಸಾಂಪಲ್.