ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಸ್ಟ್ರಾಂಗ್ ಆಗಬೇಕಾ..? ಮೊದಲು ಸಂಬಳ ಹೆಚ್ಚಿಸಿ..!

* ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರೇ ಇಲ್ಲದೇ ತಂಡ ಆಯ್ಕೆ
* ನಾಲ್ವರು ಸೆಲೆಕ್ಟರ್ಸ್‌ ಡಮ್ಮಿ ಪ್ಲೇಯರ್ಸ್​, ಬರುವವನೂ ಡಮ್ಮಿ ಪ್ಲೇಯರ್
* ಸೆಲೆಕ್ಷನ್ ಕಮಿಟಿಯ ಐವರು ಸದಸ್ಯರಿಗೆ ವರ್ಷಕ್ಕೆ ತಲಾ ಒಂದು ಕೋಟಿ ಸಂಬಳ

National selector job Will increase in salary attract the likes of Virender Sehwag kvn

ಬೆಂಗಳೂರು(ಜೂ.24): ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಮೇಲೋ..? ರವಿಶಾಸ್ತ್ರಿ ಕೋಚ್ ಸ್ಥಾನ ತ್ಯಜಿಸಿದ್ಮೇಲೋ..? ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಆದ್ಮೇಲೋ..? ಗೊತ್ತಿಲ್ಲ.  ಕಳೆದ ಮೂರು ವರ್ಷದಿದಿಂದ ಬಿಸಿಸಿಐನಲ್ಲಿ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇವೆ. ಈ ಎಲ್ಲ ಭಾರತೀಯ ಕ್ರಿಕೆಟ್​ ಅನ್ನು ಅಧಃಪತನದತ್ತ ಕೊಂಡೊಯ್ಯುತ್ತಿವೆ.

ಕಳೆದ 10 ವರ್ಷದ್ದು ಬೇಡ.. ಕಳೆದ ಮೂರು ವರ್ಷದ ಕಥೆ ಕೇಳಿ. ಉತ್ತಮ ಕೋಚ್ ಎನಿಸಿಕೊಂಡಿದ್ದ ರವಿಶಾಸ್ತ್ರಿ ತಮ್ಮ ಸ್ಥಾನ ಬಿಟ್ಟುಕೊಟ್ಟರು. ಉತ್ತಮವಾಗಿ ತಂಡ ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿಯನ್ನ ನಾಯಕತ್ವದಿಂದ ಕಿತ್ತಾಕಲಾಯ್ತು. ಭಾರತದ ಲೆಜೆಂಡ್ ಕ್ರಿಕೆಟರ್​ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕಿಕೌಟ್ ಆದ್ರು.  ಟೀಂ ಇಂಡಿಯಾ, 2021ರಲ್ಲಿ ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಗೆಲ್ಲಲಿಲ್ಲ. 2022ರಲ್ಲಿ ಏಷ್ಯಾಕಪ್​-ಟಿ20 ವರ್ಲ್ಡ್​ಕಪ್​ ಸಹ ಗೆದ್ದಿಲ್ಲ. ಈ ವರ್ಷ ಟೆಸ್ಟ್ ವಿಶ್ವಕಪ್​ ಕೈ ಚಲ್ಲಿಯಾಗಿದೆ. ಇದೇ ವರ್ಷ ನಡೆಯುವ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಗೆಲ್ತೀವಿ ಅನ್ನೋ ಭರವಸೆಯಿಲ್ಲ. ಯಾಕಂದ್ರೆ ಟೀಂ ಇಂಡಿಯಾವನ್ನ ಆಯ್ಕೆ ಮಾಡೋರೇ ಇಲ್ಲದಂತಾಗಿದೆ.

ನಾಲ್ವರು ಡಮ್ಮಿ ಪ್ಲೇಯರ್ಸ್​, ಬರುವವನೂ ಡಮ್ಮಿ ಪ್ಲೇಯರ್​..!

ಸದ್ಯ ಟೀಂ ಇಂಡಿಯಾವನ್ನ ಆಯ್ಕೆ ಮಾಡೋರು  ಶಿವಸುಂದರ್ ದಾಸ್, ಸುಬ್ರೊತೊ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಶರತ್. ಈ ನಾಲ್ವರಲ್ಲಿ ಶರತ್ ಭಾರತದ ಪರ ಆಡಿಲ್ಲ. ಈ ಮೂವರು 25 ಟೆಸ್ಟ್, 30 ಒನ್​ಡೇ ಮ್ಯಾಚ್​ಗಳನ್ನಾಡಿದ್ದಾರೆ. ಇನ್ನು ಟಿ20 ಗಂಧಗಾಳಿಯೂ ಈ ನಾಲ್ವರಿಗೆ ಗೊತ್ತಿಲ್ಲ. ಇನ್ನು ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ, ಖಾಸಗಿ ಚಾನೆಲ್​ವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖಾಲಿ ಇರುವ ಆಯ್ಕೆ ಸಮಿತಿಯ ಏಕೈಕ ಸದಸ್ಯನ ಸ್ಥಾನಕ್ಕೆ ಈಗ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ನಿವೃತ್ತಿಯಾಗಿ ಕನಿಷ್ಟ 5 ವರ್ಷ ಆಗಿರುವ ಆಟಗಾರ, 7 ಟೆಸ್ಟ್​ ಅಥವಾ 30 ಫಸ್ಟ್​ ಕ್ಲಾಸ್, 10 ಒನ್​ಡೇ ಮತ್ತು 20 ಟಿ20 ಮ್ಯಾಚ್ ಆಡಿರಬೇಕು. ಅಂತವರು ಅರ್ಜಿ ಸಲ್ಲಿಸಬಹುದು.

1 ಕೋಟಿ ಸಂಬಳಕ್ಕೆ ಸಿಗುವುದು ಅನಾನುಭವಿ ಆಟಗಾರರೇ..!

ಹೌದು, ಸೆಲೆಕ್ಷನ್ ಕಮಿಟಿಯ ಐವರು ಸದಸ್ಯರಿಗೆ ವರ್ಷಕ್ಕೆ ತಲಾ ಒಂದು ಕೋಟಿ ಸಂಬಳ. ಒಂದೂ ಕೋಟಿನಾ ಅನ್ನಬೇಡಿ. ಮಾಜಿ ಕ್ರಿಕೆಟರ್ಸ್​ಗೆ ಒಂದು ಕೋಟಿ ಯಾವ ಲೆಕ್ಕಕ್ಕೂ ಇಲ್ಲ. ಅವರು ವರ್ಷಕ್ಕೆ ಅದಕ್ಕಿಂತ 10 ಪಟ್ಟು ಹೆಚ್ಚು ದುಡಿಯುತ್ತಾರೆ. ಆಯ್ಕೆ ಸಮಿತಿ ಸೇರಿಕೊಂಡ್ರೆ, ಬೇರೆ ಎಲ್ಲೂ ಕೆಲಸ ಮಾಡುವಂತಿಲ್ಲ. ಐಪಿಎಲ್​ನಲ್ಲಿ ಕೋಚ್, ಮೆಂಟರ್ ಆಗುವಂತಿಲ್ಲ. ಕಾಮೆಂಟ್ರಿ ಮಾಡುವಂತಿಲ್ಲ.

ಈ ಕ್ರಿಕೆಟಿಗನಿಗೆ ತಿಂಗಳಿಗೆ 5.5 ಕೋಟಿ ರುಪಾಯಿ ಸಂಬಳ..! ಆದ್ರೆ ಅದು ಧೋನಿ, ರೋಹಿತ್, ಸಚಿನ್ ಅಲ್ಲ..!

ವರ್ಷ ಪೂರ್ತಿ ಬರೀ 1 ಕೋಟಿಯನ್ನೇ ನಂಬಿ ಕೂರಬೇಕು. ಹೀಗಾಗಿ 2000ರ ನಂತರ ರಿಟೈರ್ಡ್​ ಆದ ಆಟಗಾರರು ಆಯ್ಕೆ ಸಮಿತಿ ಸದಸ್ಯರಾಗಲು ಅರ್ಜಿಯನ್ನೇ ಹಾಕುವುದಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಸದ್ಯ ಇರುವ ಆಯ್ಕೆ ಸಮಿತಿ ಸದಸ್ಯರೇ. ಅವರೆಲ್ಲಾ 90ರ ದಶಕದಲ್ಲಿ ರಿಟೈರ್ಡ್​ ಆದವರು. ಅವರಿಗೆ IPL​ನಲ್ಲೂ ಕೆಲಸವಿಲ್ಲ. ಕಾಮೆಂಟ್ರಿಗೂ ಕರೆಯುವುದಿಲ್ಲ.

ಸಂಬಳ ಹೆಚ್ಚಿಸಿ.. ಆಯ್ಕೆ ಸಮಿತಿ ಸ್ಟ್ರೆಂಥ್ ಹೆಚ್ಚಿಸಿ..!

ಯೆಸ್, ಚೀಫ್ ಸೆಲೆಕ್ಟರ್ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್​ ಆಸಕ್ತಿ ಹೊಂದಿದ್ದರು. ಆದ್ರೆ ಕಡಿಮೆ ಸ್ಯಾಲರಿ ನೋಡಿ ಸೈಲೆಂಟ್ ಆದ್ರು. ಕೋಚ್​, ಮೆಂಟರ್​, ಕಾಮೆಂಟ್ರಿ ಹೀಗೆ ವಿವಿಧ ಕೆಲಸ ಮಾಡಿಕೊಂಡು ಕೋಟಿ ಗಟ್ಟಲೆ ಹಣ ಗಳಿಸೋರಿಗೆ ಒಂದು ಕೋಟಿ ಕೊಡ್ತಿನಿ ಬನ್ನಿ ಅಂದ್ರೆ ಬರಲ್ಲ. ಆಗ ಸಿಗುವವರೇ ಅನಾನುಭವಿ ಮಾಜಿ ಪ್ಲೇಯರ್ಸ್​. ಆಯ್ಕೆ ಸಮಿತಿ ಸ್ಟ್ರಾಂಗ್ ಆಗಬೇಕಾ..? ಹಾಗಾದ್ರೆ ಮೊದಲು ಸೆಲೆಕ್ಟರ್ಸ್​ ಸಂಬಳ ಹೆಚ್ಚಿಸಿ. ಆಗ ಮಾತ್ರ ಉತ್ತಮ ಆಯ್ಕೆ ಸಮಿತಿ ರಚಿಸಲು ಸಾಧ್ಯ. ಉತ್ತಮ ತಂಡ ಕಟ್ಟಲು ಸಾಧ್ಯ. ವರ್ಷದಲ್ಲಿ 10-15 ದಿನ ಕೆಲಸ ಮಾಡೋರಿಗೆ ಯಾಕಿಷ್ಟು ಸಂಬಳ ಅಂತ ಸುಮ್ಮನಿದ್ರೆ ಬಿಸಿಸಿಐಗೆ ಸಿಗೋದು ಡಮ್ಮಿ ಪ್ಲೇಯರ್ಸ್​. ಆಗ ಭಾರತೀಯ ಕ್ರಿಕೆಟ್​ ಮತ್ತಷ್ಟು ದುರ್ಬಲವಾಗಲಿದೆ.

Latest Videos
Follow Us:
Download App:
  • android
  • ios