ಇದು ಆರ್‌ಸಿಬಿ ಹೊಸ ಅಧ್ಯಾಯ..! ವಿರಾಟ್ ಕೊಹ್ಲಿ ಹೀಗೆ ಹೇಳಿದ್ದೇಕೆ..?

ಮೊನ್ನೆ ರಾತ್ರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB UNBOX ಇವೆಂಟ್ ಅದ್ದೂರಿಯಾಗಿ ನಡೆಯಿತು. UNBOX ಇವೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನ ಗೆದ್ದಿರುವ ವಿರಾಟ್ ಕೊಹ್ಲಿ ಅವರ ಆ ಒಂದು ಕನ್ನಡ ಲೈನ್‌ ಮಿಂಚಿನ ಸಂಚಲನ ಮೂಡಿಸಿದೆ

Idu RCB Hosa Adhyaya Why Virat Kohli use this sentence kvn

ಬೆಂಗಳೂರು(ಮಾ.21): ವಿರಾಟ್ ಕೊಹ್ಲಿ ಕನ್ನಡದಲ್ಲಿ ಮಾತನಾಡಿದ್ರು ಅಂತ ಕನ್ನಡಿಗರು ಫುಲ್ ಖುಷಿಯಲ್ಲಿದ್ದಾರೆ. ಆದ್ರೆ ಅವರು ಕನ್ನಡದಲ್ಲಿ ಹೇಳಿದ ಒಂದು ಲೈನ್‌ಗೆ ಆರ್‌ಸಿಬಿ ಫ್ಯಾನ್ಸ್, ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಕಿಂಗ್ ಕೊಹ್ಲಿ ಹಾಗೆ ಹೇಳಿದ್ದೇಕೆ..? ಯಾವ ಉದ್ದೇಶದಿಂದ ಅವರು ಹೀಗೆ ಹೇಳಿದ್ರು ಅಂತ ಪ್ರಶ್ನೆ ಮಾಡೋಕೆ ಶುರು ಮಾಡಿದ್ದಾರೆ. ಕೊಹ್ಲಿ ಕನ್ನಡದ ಹಿಂದಿನ ಗುಟ್ಟು ಇಲ್ಲಿದೆ ನೋಡಿ.

ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕೊಹ್ಲಿ ಸಂದೇಶ

ಮೊನ್ನೆ ರಾತ್ರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB UNBOX ಇವೆಂಟ್ ಅದ್ದೂರಿಯಾಗಿ ನಡೆಯಿತು. UNBOX ಇವೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನ ಗೆದ್ದಿರುವ ವಿರಾಟ್ ಕೊಹ್ಲಿ ಅವರ ಆ ಒಂದು ಕನ್ನಡ ಲೈನ್‌ ಮಿಂಚಿನ ಸಂಚಲನ ಮೂಡಿಸಿದೆ. ದೊಡ್ಡ ಕಾರ್ಯಕ್ರಮದಲ್ಲಿ ಚೇಸಿಂಗ್ ಸ್ಟಾರ್, ಇದು RCBಯ ಹೊಸ ಅಧ್ಯಾಯ ಎಂದು ಹೇಳಿದರು. ಹೀಗೆ ಹೇಳಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಯಾವೆಲ್ಲಾ ದೃಷ್ಟಿಯಿಂದ ವಿರಾಟ್‌ ಹೀಗೆ ಹೇಳಿರಬಹುದು ಎಂಬ ಸಂಶಯ ಅಭಿಮಾನಿಗಳಿಗೆ ಕಾಡುತ್ತಿದೆ.

RCB ಪರ ಆಡ್ತಾರಾ ಡೆಡ್ಲಿ ವೇಗಿ ಜೋಫ್ರಾ ಆರ್ಚರ್..? ದೊಡ್ಡ ಸಂದೇಶ ಕೊಟ್ಟ ಇಂಗ್ಲೆಂಡ್ ವೇಗಿ

ಹೆಣ್ಮಕ್ಕಳು WPL ಟ್ರೋಫಿ ಗೆದ್ದಿದ್ದಕ್ಕೆ ಕೊಹ್ಲಿ ಹೀಗೆ ಹೇಳಿದ್ರಾ..?

ಮೊನ್ನೆ ಭಾನುವಾರ RCB ಗರ್ಲ್ಸ್, WPL ಟ್ರೋಫಿ ಗೆದ್ದರು. ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿದ RCB ಹುಡುಗಿಯರು ಫಸ್ಟ್ ಟೈಮ್ ಟ್ರೋಫಿ ಗೆದ್ದು ಸಂಭ್ರಮಿಸಿದ್ರು. ಈ ಮೂಲಕ 16 ವರ್ಷಗಳ ಟ್ರೋಫಿ ಬರವನ್ನ ಮಹಿಳಾ ತಂಡ ನೀಗಿಸ್ತು. ಇದಕ್ಕಾಗಿ ಕೊಹ್ಲಿ, ಇದು RCBಯ ಹೊಸ ಅಧ್ಯಾಯ ಎಂದರಾ ಎಂಬ ಸಂಶಯ ಉದ್ಭವಿಸಿದೆ.

RCB ಜೆರ್ಸಿ ಕಲರ್ ಚೇಂಜ್ ಆಗಿದ್ದಕ್ಕಾ..?

2008ರಿಂದಲೂ RCB ತಂಡ, ರೆಡ್ ಮತ್ತು ಬ್ಲಾಕ್ ಮಿಶ್ರಣದ ಜೆರ್ಸಿ ಹಾಕಿಕೊಂಡು ಆಡುತ್ತಿತ್ತು. ಆದ್ರೆ ಮೊನ್ನೆ ಹೊಸ ಜೆರ್ಸಿ ಅನಾವರಣಗೊಂಡಿದ್ದು, ಈ ಸಲ ಕಪ್ಪು ಬಣ್ಣದ ಬದಲು ನೀಲಿ ಬಣ್ಣದಲ್ಲಿ RCB ಕಂಗೊಳಿಸಲಿದೆ. ಈ ದೃಷ್ಟಿಯಿಂದ ಕೊಹ್ಲಿ ಹೀಗೆ ಹೇಳಿರಬಹುದು ಎಂಬ ಸಂಶಯ ಮನೆ ಮಾಡಿದೆ.

ಶುಭ ಶುಕ್ರವಾರದಿಂದ ಐಪಿಎಲ್ ಕಲರವ ಶುರು: ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ ಈ ಚುಟುಕು ಕ್ರಿಕೆಟ್ ಹಬ್ಬ..!

ಹೆಸರು ಬದಲಾವಣೆ ಮಾಡಿದಕ್ಕಾ..?  

ಕಳೆದ 16 ವರ್ಷಗಳಿಂದ RCB ಟ್ರೋಫಿ ಗೆಲ್ಲಲು ವಿಫಲವಾಗಿದೆ. ಇದಕ್ಕೆ ಬೇಸತ್ತು, ಈ ಸಲ ಹೆಸರು ಚೇಂಜ್ ಮಾಡಿದೆ. ಈ ಮೊದಲು, ರಾಯಲ್ ಚಾಲೆಂಜರ್ಸ್‌ Bangalore ಅಂತ ಇತ್ತು. ಈಗ ರಾಯಲ್ ಚಾಲೆಂಜರ್ಸ್‌ Bengaluru ಎಂದಾಗಿದೆ. ಇದಕ್ಕಾಗಿ ಕೊಹ್ಲಿ ಹಾಗೆ ಹೇಳಿದ್ರಾ..?

ಯಂಗ್‌ಸ್ಟರ್ಸ್‌ಗೆ ಚಾನ್ಸ್ ಕೊಡುವ ದೃಷ್ಟಿಯಿಂದ ಹೀಗೆ ಹೇಳಿದ್ರಾ..?

17 ಸೀಸನ್ ಐಪಿಎಲ್‌ನಲ್ಲಿ RCB ತಂಡ ಯಂಗ್‌ಸ್ಟರ್ಸ್‌ಗೆ ಹೆಚ್ಚೆಚ್ಚು ಚಾನ್ಸ್ ಕೊಡಲಿದೆ. ಈ ದೃಷ್ಟಿಯಿಂದ ವೇದಿಕೆಯಲ್ಲಿ ಇದು RCBಯ ಹೊಸ ಅಧ್ಯಾಯ ಅಂತ ಹೇಳಿದ್ರಾ ಎಂಬ  ಸಂಶಯ ಕಾಡುತ್ತಿದೆ. ಇನ್ನು RCB ಮೊದಲಿನಿಂದಲೂ ವಿದೇಶಿ ಆಟಗಾರರ ಮೇಲೆ ಹೆಚ್ಚಿನ ಮೋಹವನ್ನು ಹೊಂದಿತ್ತು. ಈಗಲೂ ಇದೆ. ಈ ಮೋಹ ಕ್ರಮೇಣ ಕಡಿಮೆ ಆಗಿ ಭಾರತೀಯ ಆಟಗಾರರಿಗೆ ಮಣೆ ಹಾಕುವ ಉದ್ದೇಶದಿಂದ ವಿರಾಟ್‌, ಇದು RCB ಹೊಸ ಅಧ್ಯಾಯ ಎಂದು ಹೇಳಿದರಾ ಎಂದು ಅಭಿಮಾನಿಗಳಿಗೆ ಕಾಡುತ್ತಿದೆ. 

ಈ ಸಲ ಕಪ್ ನಮ್ದು ಅಂತ ಮುನ್ಸೂಚನೆ ಕೊಟ್ರಾ..?

ಹೆಣ್ಮಕ್ಕಳು WPL ಟ್ರೋಫಿ ಗೆದ್ದಿದ್ದಾರೆ. ಈ ಸಲ ನಾವ್ ಗೆಲ್ತೀವಿ ನೋಡ್ತಾಯಿರಿ. ಈ ಸಲ RCB ಸ್ಟ್ರಾಂಗ್ ಆಗಿದೆ. ಹುಡುಗಿಯರಂತೆ ಹುಡುಗರು ಕಪ್ ಗೆಲ್ಲುವ ಸಾಧ್ಯತೆಯೂ ಇದೆ. ಇನ್ಮುಂದೆ RCBಗೆ ಕಪ್ಗಳು ಹೆಚ್ಚು ಬರುತ್ತವೆ ಅನ್ನೋದನ್ನ ಹೇಳುವ ಬದಲು, ಇದು RCBಯ ಹೊಸ ಅಧ್ಯಾಯ ಶುರು ಅಂದರಾ ಅಂತ ಅನುಮಾನ ಶುರುವಾಗಿದೆ. ಒಟ್ನಲ್ಲಿ ವಿರಾಟ್ ಕೊಹ್ಲಿಯ ಒಂದು ಕನ್ನಡ ಲೈನ್, ಮಿಂಚಿನ ಸಂಚಲವನ್ನುಂಟು ಮಾಡಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Latest Videos
Follow Us:
Download App:
  • android
  • ios