MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Sports
  • Cricket
  • ಧೋನಿ, ಹಾರ್ದಿಕ್‌ಗೆ ಶಾಕ್ ಕೊಟ್ಟ ಸಂಜು ಸ್ಯಾಮ್ಸನ್! ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಮೈಲಿಗಲ್ಲು

ಧೋನಿ, ಹಾರ್ದಿಕ್‌ಗೆ ಶಾಕ್ ಕೊಟ್ಟ ಸಂಜು ಸ್ಯಾಮ್ಸನ್! ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಮೈಲಿಗಲ್ಲು

ಸಂಜು ಸ್ಯಾಮ್ಸನ್ 2026ರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಆಟದಿಂದ ಧೂಳೆಬ್ಬಿಸಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇನ್‌ಸ್ಟಾಗ್ರಾಮ್ ಲೈಕ್ಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ನಂತರದ ಸ್ಥಾನಕ್ಕೇರುವ ಮೂಲಕ ಸಂಜು ಎಲ್ಲರ ಗಮನ ಸೆಳೆದಿದ್ದಾರೆ.  

2 Min read
Author : Naveen Kodase
Published : Mar 15 2026, 10:05 AM IST
Share this Photo Gallery
  • FB
  • TW
  • Linkdin
  • Whatsapp
16
ವಿರಾಟ್ ಕೊಹ್ಲಿ ನಂತರದ ಸ್ಥಾನ ಸಂಜುಗೆ?
Image Credit : Getty

ವಿರಾಟ್ ಕೊಹ್ಲಿ ನಂತರದ ಸ್ಥಾನ ಸಂಜುಗೆ?

ಭಾರತೀಯ ಕ್ರಿಕೆಟ್‌ನಲ್ಲಿ ದಾಖಲೆಗಳು ಕೇವಲ ಮೈದಾನಕ್ಕೆ ಸೀಮಿತವಾಗಿಲ್ಲ. ನಮ್ಮ ಕ್ರಿಕೆಟಿಗರು ಸೋಶಿಯಲ್ ಮೀಡಿಯಾದಲ್ಲೂ ತಮ್ಮ ಹವಾ ಮುಂದುವರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಭಾರತೀಯ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಆದರೆ, ಕೇರಳ ಮೂಲದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಅನಿರೀಕ್ಷಿತವಾಗಿ ಟಾಪ್ 10 ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿಹೆಚ್ಚು ಲೈಕ್ ಪಡೆದ ಕ್ರಿಕೆಟಿಗರ ಆಟಗಾರರ ಪಟ್ಟಿಯಲ್ಲಿ ಟಾಪ್ 7 ಪೋಸ್ಟ್‌ಗಳು ಕೊಹ್ಲಿಯದ್ದಾಗಿದ್ದರೆ, 8ನೇ ಸ್ಥಾನದಲ್ಲಿ ಸಂಜು ನಿಂತಿರುವುದು ವಿಶೇಷ. ಈ ಮೂಲಕ ಅವರು ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯರಂತಹ ದಿಗ್ಗಜರನ್ನು ಹಿಂದಿಕ್ಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕೊಹ್ಲಿಯ ದಾಖಲೆಗಳ ಸರಮಾಲೆ
Image Credit : Getty

ಕೊಹ್ಲಿಯ ದಾಖಲೆಗಳ ಸರಮಾಲೆ

ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಭಾರತೀಯ ಸೆಲೆಬ್ರಿಟಿ ಆಗಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಅವರು ಹಂಚಿಕೊಂಡ ಪೋಸ್ಟ್ 23.1 ಮಿಲಿಯನ್ ಲೈಕ್ಸ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಆ ಸಮಯದಲ್ಲಿ ಇದು ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಎಂಬ ದಾಖಲೆ ಸೃಷ್ಟಿಸಿತ್ತು. ಇದರ ನಂತರ, 2025ರ ಐಪಿಎಲ್ ಗೆಲುವಿನ ಬಗ್ಗೆ ಕೊಹ್ಲಿ ಹಾಕಿದ್ದ ಪೋಸ್ಟ್ 21.2 ಮಿಲಿಯನ್ ಲೈಕ್ಸ್ ಗಳಿಸಿತ್ತು. ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿ ಪೋಸ್ಟ್ (20.6 ಮಿಲಿಯನ್) ಮೂರನೇ ಸ್ಥಾನದಲ್ಲಿದ್ದರೆ, ಪತ್ನಿ ಅನುಷ್ಕಾ ಶರ್ಮಾ ಜೊತೆಗಿನ ಫೋಟೋ (20.5 ಮಿಲಿಯನ್) ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಏಳು ಸ್ಥಾನಗಳು ಕೊಹ್ಲಿ ಖಾತೆಯಲ್ಲಿರುವುದು ಅವರ ಗ್ಲೋಬಲ್ ಕ್ರೇಜ್‌ಗೆ ಸಾಕ್ಷಿ.

Related Articles

Related image1
ಸಂಜು ಸ್ಯಾಮ್ಸನ್ ಅಲ್ಲ, ಈತನಿಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು: ಎಬಿ ಡಿವಿಲಿಯರ್ಸ್ ಹೀಗಂದಿದ್ದೇಕೆ?
Related image2
ಬೇಕಂತಲೇ ಸಂಜು ಸ್ಯಾಮ್ಸನ್ ಫೋಟೋ ಬಿಟ್ಟು ಫೋಸ್ಟ್ ಮಾಡಿದ್ರಾ ಶುಭ್‌ಮನ್ ಗಿಲ್? ಆಕ್ರೋಶ ಹೊರಹಾಕಿದ ಫ್ಯಾನ್ಸ್‌
36
ಸಂಜು ಸ್ಯಾಮ್ಸನ್ ಮಾಸ್ ಎಂಟ್ರಿ
Image Credit : Asianet News

ಸಂಜು ಸ್ಯಾಮ್ಸನ್ ಮಾಸ್ ಎಂಟ್ರಿ

ಈ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಎಂಟನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 97 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಸಂಜು ಹಂಚಿಕೊಂಡ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಪೋಸ್ಟ್‌ಗೆ ಈವರೆಗೆ 18.0 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್ ಬಂದಿವೆ. ಪೋಸ್ಟ್ ಮಾಡುವಾಗ ಕೇವಲ 11.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಸಂಜು, ಕೇವಲ 9 ದಿನಗಳಲ್ಲಿ 17.7 ಮಿಲಿಯನ್ ಲೈಕ್ಸ್ ಗಳಿಸಿದ್ದು ಒಂದು ದಾಖಲೆ. ಸದ್ಯ ಈ ಪೋಸ್ಟ್ ದಿನಕ್ಕೆ ಸರಾಸರಿ 5 ಲಕ್ಷ ಲೈಕ್ಸ್ ಪಡೆಯುತ್ತಿದ್ದು, 20 ಮಿಲಿಯನ್ ಮೈಲಿಗಲ್ಲಿನತ್ತ ದಾಪುಗಾಲಿಡುತ್ತಿದ್ದಾರೆ.

46
ಮೌನದಿಂದ ವಿಶ್ವಕಪ್ ಸ್ಟಾರ್‌ಡಮ್‌ವರೆಗೆ
Image Credit : Getty

ಮೌನದಿಂದ ವಿಶ್ವಕಪ್ ಸ್ಟಾರ್‌ಡಮ್‌ವರೆಗೆ

ಸಂಜು ಸ್ಯಾಮ್ಸನ್ ಅವರ ಪಯಣ ಅಷ್ಟು ಸುಲಭವಾಗಿರಲಿಲ್ಲ. ಕೇರಳದ ಒಂದು ಸಾಮಾನ್ಯ ಕುಟುಂಬದಿಂದ ಬಂದ ಅವರು, ತಮ್ಮ ಹತ್ತು ವರ್ಷಗಳ ವೃತ್ತಿಜೀವನದಲ್ಲಿ ಹೆಚ್ಚಿನ ಸಮಯವನ್ನು ರಿಸರ್ವ್ ಬೆಂಚ್‌ನಲ್ಲೇ ಕಳೆದರು. ಟೀಕೆಗಳು ಎದುರಾದಾಗ, ಅವರು ಸೋಶಿಯಲ್ ಮೀಡಿಯಾದಿಂದ ದೂರ ಉಳಿದು ತಮ್ಮ ಆಟದ ಮೇಲೆ ಗಮನ ಹರಿಸಿದರು. 

56
ಭಾರತ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್
Image Credit : Getty

ಭಾರತ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್

"ಕಳೆದ ಕೆಲವು ವರ್ಷಗಳಿಂದ ದೇಶಕ್ಕಾಗಿ ಇಂತಹ ಪ್ರದರ್ಶನ ನೀಡಲು ಕಾಯುತ್ತಿದ್ದೆ. ತಾಳ್ಮೆಯಿಂದ ಕಷ್ಟಪಟ್ಟಿದ್ದೇನೆ" ಎಂದು ಸಂಜು ಇತ್ತೀಚೆಗೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 97 ರನ್ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 89 ರನ್ ಗಳಿಸಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ವಿಶೇಷವಾಗಿ ಫೈನಲ್‌ನಲ್ಲಿ ಅಭಿಷೇಕ್ ಶರ್ಮಾ ಜೊತೆಗಿನ ಅವರ ಜೊತೆಯಾಟ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

66
ಧೋನಿ, ಹಾರ್ದಿಕ್ ಪಾಂಡ್ಯರ ದಾಖಲೆಗಳು ಬ್ರೇಕ್
Image Credit : Instagram/Sanju Samson

ಧೋನಿ, ಹಾರ್ದಿಕ್ ಪಾಂಡ್ಯರ ದಾಖಲೆಗಳು ಬ್ರೇಕ್

ಸಂಜು ಸಾಧಿಸಿದ ಈ ಸಾಧನೆ ಹಾರ್ದಿಕ್ ಪಾಂಡ್ಯ ಮತ್ತು ಎಂಎಸ್ ಧೋನಿ ಅವರನ್ನೂ ಮೀರಿಸಿದೆ. 2024ರ ಟಿ20 ವಿಶ್ವಕಪ್ ಗೆಲುವಿಗೆ ಸಂಬಂಧಿಸಿದ ಹಾರ್ದಿಕ್ ಪಾಂಡ್ಯ ಅವರ ವಿಡಿಯೋಗೆ 17.5 ಮಿಲಿಯನ್ ಲೈಕ್ಸ್ ಬಂದಿದ್ದರೆ, ಅದೇ ಗೆಲುವಿನ ಬಗ್ಗೆ ಧೋನಿ ಹಾಕಿದ್ದ ಪೋಸ್ಟ್‌ಗೆ 17.4 ಮಿಲಿಯನ್ ಲೈಕ್ಸ್ ಬಂದಿದ್ದವು. ಇವರಿಬ್ಬರನ್ನೂ ಮೀರಿ ಸಂಜು ಎಂಟನೇ ಸ್ಥಾನಕ್ಕೆ ಏರಿರುವುದು ಗಮನಾರ್ಹ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಟೀಮ್ ಇಂಡಿಯಾ
ಸಂಜು ಸ್ಯಾಮ್ಸನ್
ವಿರಾಟ್ ಕೊಹ್ಲಿ

Latest Videos
Recommended Stories
Recommended image1
ಮತ್ತೊಂದು ಮಹತ್ವದ ಟೂರ್ನಿಯಿಂದಲೂ ಗೌತಮ್ ಗಂಭೀರ್ ಔಟ್? ತೆರೆ ಮರೆಗೆ ಸರಿತಾರಾ ಟೀಂ ಇಂಡಿಯಾ ಹೆಡ್‌ ಕೋಚ್‌?
Recommended image2
ರಿಂಕು ಸಿಂಗ್ ವೃತ್ತಿ ಬದುಕಿಗೆ BCCI ಕೊನೆ ಮೊಳೆ; ಚೆನ್ನಾಗಿ ಆಡ್ತಿದ್ದರೂ ಯಾಕೆ ಆಯ್ಕೆ ಮಾಡ್ತಿಲ್ಲ, ಅಸಲಿ ಕತೆ ಇಲ್ಲಿದೆ
Recommended image3
ಒಂದೇ ಒಂದು ಬಾಲ್ ಹಾಕಲು 100 ಕಿ.ಮಿ ಓಡಿದ್ಯಾಕೆ ಈ ವೇಗಿ? ವರ್ಲ್ ರೆಕಾರ್ಡ್ ಹಿಂದಿನ ರೋಚಕ ಕತೆ
Related Stories
Recommended image1
ಸಂಜು ಸ್ಯಾಮ್ಸನ್ ಅಲ್ಲ, ಈತನಿಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು: ಎಬಿ ಡಿವಿಲಿಯರ್ಸ್ ಹೀಗಂದಿದ್ದೇಕೆ?
Recommended image2
ಬೇಕಂತಲೇ ಸಂಜು ಸ್ಯಾಮ್ಸನ್ ಫೋಟೋ ಬಿಟ್ಟು ಫೋಸ್ಟ್ ಮಾಡಿದ್ರಾ ಶುಭ್‌ಮನ್ ಗಿಲ್? ಆಕ್ರೋಶ ಹೊರಹಾಕಿದ ಫ್ಯಾನ್ಸ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved