ಅದೃಷ್ಟ ಹೆಚ್ಚು ಕಾಲ ಇರಲ್ಲ! ವೈಭವ್ ಸೂರ್ಯವಂಶಿಗೆ ಖಡಕ್ ವಾರ್ನಿಂಗ್ ಕೊಟ್ಟ ಉತ್ತಪ್ಪ
ಐಪಿಎಲ್ 2026ಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ರಾಬಿನ್ ಉತ್ತಪ್ಪ ಮಾತನಾಡಿದ್ದಾರೆ. ವೈಭವ್ ಕೇವಲ ಅದೃಷ್ಟವನ್ನು ನಂಬಿ ಆಡುತ್ತಿದ್ದಾನೆ, ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ವೈಭವ್ ಸೂರ್ಯವಂಶಿಗೆ ಶಾಕ್
ಐಪಿಎಲ್ 2026ರ ಸೀಸನ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಮಾರ್ಚ್ 28 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಎಲ್ಲರ ಕಣ್ಣು ರಾಜಸ್ಥಾನ ರಾಯಲ್ಸ್‌ನ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲಿದೆ. ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಈತನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದಾನೆ. ಐಪಿಎಲ್‌ನಲ್ಲಿ ಹರಾಜಾದ ಅತಿ ಕಿರಿಯ ಆಟಗಾರ, ಭಾರತೀಯನಾಗಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಇವನ ಹೆಸರಲ್ಲಿದೆ. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿಯನ್ನೂ ಗೆದ್ದಿದ್ದಾನೆ.
ಈಗ ಪರಿಸ್ಥಿತಿ ಬದಲಾಗಿದೆ ಎಂದ ಉತ್ತಪ್ಪ
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಬಿನ್ ಉತ್ತಪ್ಪ, 'ವೈಭವ್ ಅದ್ಭುತ ಆಟಗಾರ, ಆದರೆ ಆತನ ಬ್ಯಾಟಿಂಗ್‌ನಲ್ಲಿ ಅದೃಷ್ಟದ ಪಾಲು ಹೆಚ್ಚಿದೆ. ಎದುರಾಳಿ ತಂಡಗಳು ಈಗ ಆತನನ್ನು ಹೊಸಬನಾಗಿ ನೋಡುವುದಿಲ್ಲ, ಪರಿಸ್ಥಿತಿ ಬದಲಾಗಿದೆ' ಎಂದು ಹೇಳಿದ್ದಾರೆ.
ಈ ಐಪಿಎಲ್ ಸೀಸನ್ ವೈಭವ್‌ಗೆ ಸವಾಲಾಗಲಿದೆ
ಎದುರಾಳಿಗಳು ವೈಭವ್ ಆಟವನ್ನು ವಿಶ್ಲೇಷಿಸಿ, ಎಲ್ಲಿ ಬೌಲಿಂಗ್ ಮಾಡಬೇಕು, ಹೇಗೆ ಕಟ್ಟಿಹಾಕಬೇಕು ಎಂದು ಯೋಜನೆ ರೂಪಿಸಿದ್ದಾರೆ. ಹೀಗಾಗಿ ಈ ಸೀಸನ್ ಆತನಿಗೆ ದೊಡ್ಡ ಸವಾಲಾಗಲಿದೆ' ಎಂದು ಉತ್ತಪ್ಪ ವಿವರಿಸಿದ್ದಾರೆ.
ಜೈಸ್ವಾಲ್ ಜತೆ ಸೂರ್ಯವಂಶಿ ಇನ್ನಿಂಗ್ಸ್ ಆರಂಭ
ವೈಭವ್‌ಗೆ ಅಗ್ನಿಪರೀಕ್ಷೆ
ಭಾರತದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಈ ಬಾರಿಯ ಐಪಿಎಲ್ ಟೂರ್ನಿ ವೈಭವ್‌ಗೆ ಅಗ್ನಿಪರೀಕ್ಷೆ ಎನಿಸುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

