ಭಾರತ ಹಾಗೂ ನೆದರ್‌ಲೆಂಡ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ.ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ನೆದರ್‌ಲೆಂಡ್ಸ್ ತಂಡದಲ್ಲಿ ಕೂಡಾ ಯಾವುದೇ ಬದಲಾವಣೆ ಮಾಡಿಲ್ಲ.

ಬೆಂಗಳೂರು(ನ.12): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿಂದು ಭಾರತ ಹಾಗೂ ನೆದರ್‌ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ಕಡೆ ಆತಿಥೇಯ ಭಾರತ ಈಗಾಗಲೇ ಸೆಮೀಸ್‌ಗೆ ಲಗ್ಗೆಯಿಟ್ಟರೆ, ಮತ್ತೊಂದೆಡೆ ನೆದರ್‌ಲೆಂಡ್ಸ್‌ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದ್ದು, ಈ ಪಂದ್ಯವು ಉಭಯ ತಂಡಗಳ ಪಾಲಿಗೆ ಔಪಚಾರಿಕ ಪಂದ್ಯ ಎನಿಸಿಕೊಂಡಿದೆ.

ಭಾರತ ಹಾಗೂ ನೆದರ್‌ಲೆಂಡ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ.ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ನೆದರ್‌ಲೆಂಡ್ಸ್ ತಂಡದಲ್ಲಿ ಕೂಡಾ ಯಾವುದೇ ಬದಲಾವಣೆ ಮಾಡಿಲ್ಲ.

2019ರ ಸೋಲನ್ನು ಮರೆತಿಲ್ಲ ಭಾರತೀಯರು..! 4 ವರ್ಷಗಳ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸಿಕ್ಕದೆ ಗೋಲ್ಡನ್ ಚಾನ್ಸ್

ಒಂದು ಕಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಪ್ರದರ್ಶನ ತೋರಿದ್ದು, ಆಡಿದ 8 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ಸೋಲೇ ಕಾಣದ ಏಕೈಕ ತಂಡ ಎನಿಸಿಕೊಂಡಿದ್ದು, ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಹಾತೊರೆಯುತ್ತಿದೆ.

ಇನ್ನೊಂದೆಡೆ ಆಡಿದ 8 ಪಂದ್ಯಗಳ ಪೈಕಿ ಕೇವಲ 2 ಗೆಲುವು ಹಾಗೂ 6 ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಬಲಾಢ್ಯ ಹರಿಣಗಳ ಪಡೆಗೆ ಸೋಲುಣಿಸಿದ್ದ ನೆದರ್‌ಲೆಂಡ್ಸ್ ತಂಡವು ಇದೀಗ ಮತ್ತೊಂದು ಅಚ್ಚರಿ ಫಲಿತಾಂಶದ ನಿರೀಕ್ಷೆಯಲ್ಲಿದೆ. 

2ನೇ ತವರಲ್ಲಿ ವಿರಾಟ್‌ ಸಿಡಿಸ್ತಾರಾ 50ನೇ ಶತಕ?

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ವಿರಾಟ್ ಕೊಹ್ಲಿಗೆ ಚಿನ್ನಸ್ವಾಮಿ ಕ್ರೀಡಾಂಗಣ 2ನೇ ತವರಿದ್ದಂತೆ. ಈಗಾಗಲೇ ಏಕದಿನಲ್ಲಿ 49 ಶತಕ ಬಾರಿಸಿರುವ ಕೊಹ್ಲಿ, ದಾಖಲೆಯ 50ನೇ ಶತಕದ ಮೈಲಿಗಲ್ಲನ್ನು ಇದೇ ಕ್ರೀಡಾಂಗಣದಲ್ಲಿ ಸಾಧಿಸಲು ಎದುರು ನೋಡುತ್ತಿದ್ದಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿಯ ಏಕದಿನ ದಾಖಲೆ ಹೇಳಿಕೊಳ್ಳುವಂತದ್ದೇನಲ್ಲ. ಇಲ್ಲಿ 2010ರಿಂದ 2020ರ ವರೆಗೂ ಒಟ್ಟು 6 ಏಕದಿನ ಪಂದ್ಯಗಳನ್ನಾಡಿದ್ದು ಕೇವಲ 1 ಅರ್ಧಶತಕದೊಂದಿಗೆ 152 ರನ್‌ ಗಳಿಸಿದ್ದಾರೆ.

ಈ ವಿಶ್ವಕಪ್‌ನಲ್ಲಿ ಪಾಕ್‌ಗಿಂತ ಅಫ್ಘನ್‌ ಆಟ ಚೆನ್ನಾಗಿತ್ತು: ವಾಸೀಂ ಅಕ್ರಂ

ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ:

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಸೂರ್ಯಕುಮಾರ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ನೆದರ್‌ಲೆಂಡ್ಸ್: ಬ್ಯಾರೆಸಿ, ಒಡೌಡ್‌, ಆ್ಯಕರ್‌ಮನ್‌, ಸೈಬ್ರಂಡ್‌, ಎಡ್ವರ್ಡ್ಸ್‌(ನಾಯಕ), ಲೀಡೆ, ತೇಜ, ಬೀಕ್‌, ಮೆರ್ವೆ, ಆರ್ಯನ್‌, ಮೀಕೆರನ್‌.