Asianet Suvarna News Asianet Suvarna News

ಮುಂಬೈಗೆ ಬಂದಿಳಿದ ಟೀಂ ಇಂಡಿಯಾ, ಅಭಿಮಾನಿಗಳ ಜೈಕಾರಕ್ಕೆ ಕಿವಿ ಮುಚ್ಚಿದ ರೋಹಿತ್ ಪುತ್ರಿ!

ಐಸಿಸಿ ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಮುಂಬೈಗೆ ಆಗಮಿಸಿದೆ. ಅಭಿಮಾನಿಗಳು ಭಾರತ ತಂಡಕ್ಕೆ ಜೈಕಾರ ಹಾಕಿದ್ದಾರೆ. ಘೋಷಣೆ ಶಬ್ದಕ್ಕೆ ರೋಹಿತ್ ಶರ್ಮಾ ಪುತ್ರಿ ಕಿವಿ ಮುಚ್ಚಿಕೊಂಡೇ ಸಾಗಿದ ವಿಡಿಯೋ ವೈರಲ್ ಆಗಿದೆ.
 

ICC World cup 2023 Team India reach Mumbai for Semi final match against New Zealand ckm
Author
First Published Nov 13, 2023, 9:11 PM IST

ನವದೆಹಲಿ(ನ.13) ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ನವೆಂಬರ್ 15 ರಿಂದ ಸೆಮಿಫೈನಲ್ ಪಂದ್ಯ ಆರಂಭಗೊಳ್ಳುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಿಮ ಲೀಗ್ ಪಂದ್ಯ ಆಡಿದ ಟೀಂ ಇಂಡಿಯಾ ಇದೀಗ ಸೆಮಿಫೈನಲ್ ಪಂದ್ಯಕ್ಕಾಗಿ ಮುಂಬೈಗೆ ಆಗಮಿಸಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಟೀಂ ಇಂಡಿಯಾ ಪರ ಘೋಷಣೆ, ಜೈಕಾರ ಕೂಗಿದ್ದಾರೆ. ಅಭಿಮಾನಿಗಳ ಜೋಶ್‌ಗೆ ನಾಯಕ ರೋಹಿತ್ ಶರ್ಮಾ ಪುತ್ರಿ ಕಿವಿ ಮುಚ್ಚಿ ಸಾಗಿದ್ದಾರೆ.

ನೆದರ್ಲೆಂಡ್ ವಿರುದ್ಧ ಅಂತಿಮ ಲೀಗ್ ಪಂದ್ಯದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಬೆಂಗಳೂರಿನಿಂದ ಮುಂಬೈಗೆ ಬಂದಿಳಿದಿದ್ದಾರೆ.  ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಆಗಮಿಸುತ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿದ್ದಾರೆ. ಇದೇ ವೇಳೆ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ಕ್ರಿಕೆಟಿಗರ ಹೆಸರು ಕೂಗಿದ್ದಾರೆ. ಅಭಿಮಾನಿಗಳ ಜೋಶ್ ಹಾಗೂ ಜೈಕಾರ ಮುಂಬೈ ವಿಮಾನ ನಿಲ್ದಾಣದಲ್ಲೇ ಸಂಚಲನ ಸೃಷ್ಟಿಸಿತ್ತು.

ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು, ಫೊಟೋ ತೆಗೆಯಬೇಡಿ, ಕೊಹ್ಲಿ ಮನವಿ ವಿಡಿಯೋ ವೈರಲ್!

ಅಭಿಮಾನಿಗಳ ಜೈಕಾರ ಶಬ್ದದಿಂದ ಬೆಚ್ಚಿ ಬಿದ್ದ ರೋಹಿತ್ ಶರ್ಮಾ ಪುತ್ರಿ ಸಮೈರಾ ಕಿವಿಗಳನ್ನು ಕೈಯಿಂದ ಮುಚ್ಚಿದ್ದಾರೆ. ರೋಹಿತ್ ಶರ್ಮಾ ತೋಳಲ್ಲಿ ಕುಳಿತು ಸಮೈರಾ ಸಾಗುತ್ತಿದ್ದ ವೇಳೆ ಕಿವಿಗಳನ್ನು ಮುಚ್ಚಿದ್ದಾರೆ. ಇತ್ತ ಅಭಿಮಾನಿಗಳು ಸೆಮಿಫೈನಲ್ ಪಂದ್ಯಕ್ಕೆ ಶುಭಾಶಯ ಕೋರಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಹೊಟೆಲ್‌ನತ್ತ ತೆರಳುವ ವೇಳೆ ಕೂಡ ಅಭಿಮಾನಿಗಳು ಜಮಾಯಿಸಿದ್ದರು.  

 

 

ಭಾರತ ತಂಡಕ್ಕೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡುತ್ತಿದ್ದಾರೆ. ಭಾರತದ ಪ್ರದರ್ಶನಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನವೆಂಬರ್ 15 ರಂದು ಭಾರತ ಮೊದಲ ಸೆಮಿಫೈನಲ್ ಪಂದ್ಯ ಆಡಲಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಸಮಿಫೈನಲ್ ಹೋರಾಟ ನಡೆಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ನವೆಂಬರ್ 16ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ನವೆಂಬರ್ 19ಕ್ಕೆ ಅಹಮ್ಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. 

INDvNED ಕೊಹ್ಲಿ ಬೌಲಿಂಗ್‌ನಲ್ಲಿ ಬಿತ್ತು ವಿಕೆಟ್, ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ವೈರಲ್!

ಭಾರತ ತನ್ನ ಲೀಗ್ ಪಂದ್ಯದಲ್ಲಿ ಆಡಿದ 9 ಪಂದ್ಯಗಳನ್ನು ಗೆದ್ದ ಒಟ್ಟು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಭದ್ರಪಡಿಸಿಕೊಂಡಿತ್ತು. ವಿಶ್ವಕಪ್ ಟೂರ್ನಿಯ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್‌ನ ಎಲ್ಲಾ ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಭಾರತ ಅನ್ನೋ ದಾಖಲೆಯನ್ನೂ ಬರೆದಿದೆ.  

Follow Us:
Download App:
  • android
  • ios