Asianet Suvarna News Asianet Suvarna News

INDvNED ಕೊಹ್ಲಿ ಬೌಲಿಂಗ್‌ನಲ್ಲಿ ಬಿತ್ತು ವಿಕೆಟ್, ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ವೈರಲ್!

ನೆದರ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿ 1 ವಿಕೆಟ್ ಕಬಳಿಸಿದ್ದಾರೆ. ಕೊಹ್ಲಿ ವಿಕೆಟ್ ಕಬಳಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.

ICC World cup 2023 Anushka Sharma reaction goes viral after virat kohli takes wicket vs Netherland ckm
Author
First Published Nov 12, 2023, 11:05 PM IST

ಬೆಂಗಳೂರು(ನ.11) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಡಬಲ್ ಆಗಿತ್ತು. ಕಾರಣ ನದೆರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು ಮಾತ್ರವಲ್ಲ, ವಿಕೆಟ್ ಕಬಳಿಸಿ ಮಿಂಚಿದ್ದರು. ಕೊಹ್ಲಿ ಬೌಲಿಂಗ್‌ನಲ್ಲಿ ವಿಕೆಟ್ ಪತನವಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಸಂಭ್ರಮ ಹೇಳತೀರದು. ಇಷ್ಟೇ ಅಲ್ಲ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ಅನುಷ್ಕಾ ಶರ್ಮಾ ಕೂಡ ಕೊಹ್ಲಿ ವಿಕೆಟ್‌ನ್ನು ಸಂಭ್ರಮಿಸಿದ್ದಾರೆ. ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ಇದೀಗ ವೈರಲ್ ಆಗಿದೆ.

ಐಸಿಸಿ ವಿಶ್ವಕಪ್ 2023 ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ನಡೆಸಿತ್ತು. ನೆದರ್ಲೆಂಡ್ ವಿರುದ್ಧ ಭಾರತ 9 ಮಂದಿಗೆ ಬೌಲಿಂಗ್ ನೀಡಿತ್ತು. ಈ ಪೈಕಿ ವಿರಾಟ್ ಕೊಹ್ಲಿ 3 ಓವರ್ ಬೌಲಿಂಗ್ ಮಾಡಿದ್ದಾರೆ. ನೆದರ್ಲೆಂಡ್ ನಾಯಕ ಹಾಗೂ ವಿಕೆಟ್ ಕೀಪರ್ ಸ್ಕಾಟ್ ಎಡವರ್ಡ್ಸ್ ವಿಕೆಟ್ ಕಬಳಿಸಿದ ಕೊಹ್ಲಿ ಸಂಭ್ರಮ ಆಚರಿಸಿದ್ದಾರೆ.

ಕೀಪರ್, ಅಯ್ಯರ್ ಹೊರತುಪಡಿಸಿ 9 ಮಂದಿ ಬೌಲಿಂಗ್ ದಾಖಲೆ, ರೋಹಿತ್-ಕೊಹ್ಲಿಗೆ ವಿಕೆಟ್!

ಸ್ಕಾಟ್ ಎಡ್ವರ್ಡ್ಸ್ 17 ರನ್ ಸಿಡಿಸಿ ಜೊತೆಯಾಟದ ಸೂಚನೆ ನೀಡಿದ್ದರು. ಆದರೆ ಕೊಹ್ಲಿ ಬೌಲಿಂಗ್‌ನಲ್ಲಿ ವಿಕೆಟ್ ಕೈಚೆಲ್ಲಿದ್ದಾರೆ. ಕೆಎಲ್ ರಾಹುಲ್ ಅದ್ಬುತ ಕ್ಯಾಚ್‌ನಿಂದ ಕೊಹ್ಲಿ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಇತ್ತ ಪತ್ನಿ ಅನುಷ್ಕಾ ಶರ್ಮಾ ಕೂಡ ಕೊಹ್ಲಿ ವಿಕೆಟ್ ಸಂಭ್ರಮಿಸಿದ್ದಾರೆ. ಗ್ಯಾಲರಿ ಕುಳಿತು ಚಪ್ಪಾಳೆ ಹೊಡೆಯುತ್ತಾ, ಸೆಲೆಬ್ರೆಷನ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by ICC (@icc)

 

ವಿರಾಟ್ ಕೊಹ್ಲಿ 3 ಓವರ್ ಬೌಲಿಂಗ್ ಮಾಡಿದ್ದಾರೆ. 4.30ರ ಎಕಾನಮಿಯಂತೆ 13 ರನ್ ನೀಡಿದ್ದಾರೆ. ಜೊತೆಗೆ 1 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ ಬೌಲಿಂಗ್ ಮಾಡಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ವಿಕೆಟ್ ಕಬಳಿಸಿ ಸಂಭ್ರಮಿಸಿದ್ದಾರೆ. ಏಕದಿನದಲ್ಲಿ ವಿರಾಟ್ ಕೊಹ್ಲಿ ಒಟ್ಟು 5 ವಿಕೆಟ್ ಕಬಳಿಸಿದ್ದಾರೆ. ಇನ್ನು ಟಿ20ಯಲ್ಲಿ 4 ವಿಕೆಟ್ ಕಬಳಿಸಿದ್ದಾರೆ. ಇನ್ನೂ ಐಪಿಎಲ್ ಟೂರ್ನಿಯಲ್ಲೂ ಬೌಲಿಂಗ್ ಮಾಡಿ 4 ವಿಕೆಟ್ ಕಬಳಿಸಿದ್ದಾರೆ.

ICC ವಿಶ್ವಕಪ್ ಟೂರ್ನಿಯ ಲೀಗ್‌ನ ಎಲ್ಲಾ ಪಂದ್ಯ ಗೆದ್ದು ಹೊಸ ದಾಖಲೆ ಬರೆದ ಭಾರತ!

ನೆದರ್ಲೆಂಡ್ ವಿರುದ್ದ ಕೊಹ್ಲಿ ಮಾತ್ರವಲ್ಲ, ನಾಯಕ ರೋಹಿತ್ ಶರ್ಮಾ ಕೂಡ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಿದ್ದಾರೆ. ರೋಹಿತ್ 5 ಎಸೆತ ಬೌಲಿಂಗ್ ಮಾಡಿ 1 ವಿಕೆಟ್ ಕಬಳಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಸೇರಿದಂತೆ ನೆದರ್ಲೆಂಡ್ ವಿರುದ್ಧ ಭಾರತದ 9 ಮಂದಿ ಬೌಲಿಂಗ್ ಮಾಡಿದ್ದಾರೆ. ಕೀಪರ್ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಮಾತ್ರ ಬೌಲಿಂಗ್ ಮಾಡಿಲ್ಲ. 
 

Follow Us:
Download App:
  • android
  • ios