ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು, ಫೊಟೋ ತೆಗೆಯಬೇಡಿ, ಕೊಹ್ಲಿ ಮನವಿ ವಿಡಿಯೋ ವೈರಲ್!

ಬೆಂಗಳೂರಿನಲ್ಲಿ ಅಂತಿಮ ಲೀಗ್ ಪಂದ್ಯ ಮುಗಿಸಿ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಮುಂಬೈಗೆ ಬಂದಿಳಿದ ವೇಳೆ ಅಭಿಮಾನಿಗಳು ಫೋಟೋಗೆ ಮುಗಿಬಿದ್ದಿದ್ದಾರೆ. ಮಗಳ ಫೋಟೋ ತೆಗೆಯಬೇಡಿ, ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಪ್ಲೀಸ್ ಎಂದು ಕೊಹ್ಲಿ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.
 

Virat kohli request fans to not take photo near daughter in Mumbai Airport vide goes viral ckm

ಮುಂಬೈ(ನ.13) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಬೆಂಗಳೂರಿನಲ್ಲಿ ನೆದರ್ಲೆಂಡ್ ವಿರುದ್ದ ಅಂತಿಮ ಲೀಗ್ ಪಂದ್ಯದ ಬಳಿಕ ಟೀಂ ಇಂಡಿಯಾ ಮುಂಬೈಗೆ ಬಂದಿಳಿದಿದೆ. ಇತ್ತ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಜೊತೆ ಮುಂಬೈಗೆ ಬಂದಿಳಿದಿದ್ದಾರೆ. ಈ ವೇಳೆ ಕೊಹ್ಲಿ ಜೊತೆ ಫೋಟೋಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇತ್ತ ಕೊಹ್ಲಿ ಅಭಿಮಾನಿಗಳಲ್ಲಿ ಮಾಡಿದ ಮನವಿ ವೈರಲ್ ಆಗಿದೆ. ಮಗಳಿದ್ದಾಳೆ. ಫೋಟೋ ತೆಗೆಯಬೇಡಿ. ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಪ್ಲೀಸ್ ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನಿಂದ ಕೊಹ್ಲಿ ಕುಟುಂಬ ಸಮೇತ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ. ಬಳಿಕ ನೇರವಾಗಿ ಕಾರು ಪಾರ್ಕಿಂಗ್‌ನನತ್ತ ತೆರಳುತ್ತಿದ್ದ ವೇಳೆ ಅಭಿಮಾನಿಗಳು ಫೋಟೋಗೆ ಮುಗಿಬಿದ್ದಿದ್ದಾರೆ. ಈ ವೇಳೆ ಕೊಹ್ಲಿ, ಇಲ್ಲೆ ಫೋಟೋ ತೆಗೆಯಿರಿ, ಕಾರಿನ ಹತ್ತಿರ ಬೇಡ. ಅಲ್ಲಿ ಮಗಳಿದ್ದಾಳೆ. ಆಕೆಯನ್ನು ಮನೆಗೆ ಕರೆದುಕೊಂಡು ಹೋಗಬೇಕು ಪ್ಲೀಸ್ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

INDvNED ಕೊಹ್ಲಿ ಬೌಲಿಂಗ್‌ನಲ್ಲಿ ಬಿತ್ತು ವಿಕೆಟ್, ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ವೈರಲ್!

ಬೆಳಗ್ಗೆ ಎದ್ದು ಬಂದಿದ್ದೇವೆ. ಮಗಳು ನಿದ್ದೆಯಿಲ್ಲದೆ ಪ್ರಯಾಣ ಮಾಡಿ ಸುಸ್ತಾಗಿದ್ದಾಳೆ. ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು. ದಯವಿಟ್ಟು ಕಾರಿನ ಹತ್ತಿರ ಫೋಟೋ ತೆಗೆಯಬೇಡಿ, ಇಲ್ಲೇ ಫೋಟೋ ತೆಗೆಯಿರಿ ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಕೆಲ ಅಭಿಮಾನಿಗಳು, ಇತರರಲ್ಲಿ ಯಾರೂ ಫೋಟೋ ತೆಗೆಯಬೇಡಿ, ಕೊಹ್ಲಿ ಕುಟುಂಬವನ್ನು ತೆರಳಲು ಅನುವು ಮಾಡಿಕೊಡಿ  ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

 

 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ನೆದರ್ಲೆಂಡ್ ನಡುವಿನ ಅಂತಿಮ ಲೀಗ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ 160 ರನ್ ಭರ್ಜರಿ ಗೆಲುವು ದಾಖಲಿಸಿತ್ತು. ನೆದರ್ಲೆಂಡ್ ವಿರುದ್ದದ ಪಂದ್ಯಕ್ಕೂ ಮೊದಲು ಕೊಹ್ಲಿ, ಅನುಷ್ಕಾ ಹಾಗೂ ಪುತ್ರಿ ವಮಿಕಾ ಬೆಂಗಳೂರಿನಲ್ಲಿ ಅಲ್ಪ ವಿಶ್ರಾಂತಿ ಸಮಯವನ್ನು ಕಳೆದಿದ್ದರು. 

ದೀಪಾವಳಿ ಸಡಗರದಲ್ಲಿ ವಿರುಷ್ಕಾ ದಂಪತಿ, ಬೇಬಿ ಬಂಪ್‌ಗೆ ದುಪ್ಪಟ್ಟಾ ಅಡ್ಡ ಹಿಡಿದು ನಸುನಕ್ಕ ಅನುಷ್ಕಾ!

ಲೀಗ್ ಹಂತದ ಎಲ್ಲಾ ಪಂದ್ಯ ಮುಗಿದಿದೆ. ನವೆಂಬರ್ 15 ರಿಂದ ಸೆಮಿಫೈನಲ್ ಪಂದ್ಯಗಳು ಆರಂಭಗೊಳ್ಳುತ್ತಿದೆ. ಭಾರತ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ನವೆಂಬರ್ 16ರಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡ ಹೋರಾಟ ನಡೆಸಲಿದೆ.
 

Latest Videos
Follow Us:
Download App:
  • android
  • ios