Asianet Suvarna News Asianet Suvarna News

ಮುಂಬೈನಲ್ಲಿ ಒಂದೇ ಒಂದು ಸೆಮಿಫೈನಲ್ ಗೆದ್ದಿಲ್ಲ ಭಾರತ..! ಹೋಂಗ್ರೌಂಡ್‌ನಲ್ಲಿ ತ್ರಿಮೂರ್ತಿಗಳಿಗೆ ಬಿಗ್ ಚಾಲೆಂಜ್..!

ವಾಂಖೇಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಒಂದೇ ಒಂದು ಸೆಮಿ ಫೈನಲ್ ಗೆದ್ದಿಲ್ಲ. ಆದ್ರೆ, ಈ  ಇತಿಹಾಸವನ್ನ ಅಳಸಿ ಹಾಕೋಕೆ ಟೀಮ್ ಇಂಡಿಯಾದ ಈ ಮುಂಬೈಕರ್ಸ್ ರೆಡಿಯಾಗಿದ್ದಾರೆ. ತವರಿನ ಅಂಗಳದಲ್ಲಿ ಅಬ್ಬರಿಸೋಕೆ ಕಾಯ್ತಿದ್ದಾರೆ. 

ICC World Cup 2023 Team India never win Single Semifinals kvn
Author
First Published Nov 15, 2023, 12:58 PM IST

ಮುಂಬೈ(ನ.15): ಇಂದಿನ ವಿಶ್ವಕಪ್ ಸೆಮಿಫೈನಲ್ ಟೀಂ ಇಂಡಿಯಾದ ಈ ಆಟಗಾರರಿರ ಸಖತ್ ಸ್ಪೆಷಲ್ ಆಗಿದೆ. ಈ ಮೂವರು ಹೋಂಗ್ರೌಂಡ್ನಲ್ಲಿ ತಮ್ಮ ಮೊದಲ ವಿಶ್ವಕಪ್ ಸೆಮಿಫೈನಲ್ ಪಂದ್ಯವಾಡ್ತಿದ್ದಾರೆ. ಆಡಿ ಬೆಳೆದ ಅಂಗಳದಲ್ಲಿ ದೇಶಕ್ಕಾಗಿ ಹೋರಾಡಲು ಸಜ್ಜಾಗಿದ್ದಾರೆ. ಯಾರು ಆ ಆಟಗಾರರು ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಏಕದಿನ ವಿಶ್ವಕಪ್ ಮಹಾಸಂಗ್ರಾಮ ಮೊದಲ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ - ನ್ಯೂಜಿಲೆಂಡ್ ಸೆಣಸಾಡಲಿವೆ. ಈ ಹೈವೋಲ್ಟೇಜ್ ಮ್ಯಾಚ್‌ಗೆ ಮುಂಬೈನ ವಾಂಖೇಡೆ ಸ್ಟೇಡಿಯಂ ಸಾಕ್ಷಿಯಾಗ್ತಿದೆ. ಇದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಟೆನ್ಷನ್ ಹೆಚ್ಚಿಸಿದೆ. 

ವಾಂಖೇಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಒಂದೇ ಒಂದು ಸೆಮಿ ಫೈನಲ್ ಗೆದ್ದಿಲ್ಲ. ಆದ್ರೆ, ಈ  ಇತಿಹಾಸವನ್ನ ಅಳಸಿ ಹಾಕೋಕೆ ಟೀಮ್ ಇಂಡಿಯಾದ ಈ ಮುಂಬೈಕರ್ಸ್ ರೆಡಿಯಾಗಿದ್ದಾರೆ. ತವರಿನ ಅಂಗಳದಲ್ಲಿ ಅಬ್ಬರಿಸೋಕೆ ಕಾಯ್ತಿದ್ದಾರೆ. 

ಕ್ರಿಕೆಟ್ ದೇವರ ನಾಡಿನಲ್ಲಿ ಕ್ರಿಕೆಟ್ ದೇವರ ದಾಖಲೆ ಬ್ರೇಕ್..? ಕೊಹ್ಲಿ ಮೇಲೆ ಎಲ್ಲರ ಕಣ್ಣು

ಯೆಸ್, ಇಂದಿನ ಸೆಮಿಫೈನಲ್ ಪಂದ್ಯ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್‌ಗೆ ಸಖತ್ ಸ್ಪೆಷಲ್ ಆಗಿದೆ. ಯಾಕಂದ್ರೆ ಈ ಮೂವರು ಹೋಂಗ್ರೌಂಡ್ನಲ್ಲಿ ತಮ್ಮ ಮೊದಲ ವಿಶ್ವಕಪ್ ಸೆಮಿಫೈನಲ್ ಪಂದ್ಯವಾಡ್ತಿದ್ದಾರೆ. ಆಡಿ ಬೆಳೆದ ಅಂಗಳದಲ್ಲಿ ದೇಶಕ್ಕಾಗಿ ಹೋರಾಡಲು ಸಜ್ಜಾಗಿದ್ದಾರೆ.

ಯೆಸ್, ಕ್ಯಾಪ್ಟನ್ ರೋಹಿತ್ ಶರ್ಮಾ ಹುಟ್ಟಿದ್ದು ಬೆಳೆದಿದ್ದು ಎಲ್ಲಾ,  ಮುಂಬೈನಲ್ಲೇ. ವಾಂಖೇಡೆ ಹಿಟ್‌ಮ್ಯಾನ್‌ ಕರ್ಮಭೂಮಿ. ಬ್ಯಾಟಿಂಗ್ ಪಟ್ಟು ಗಳನ್ನ ಕಲಿತದ್ದು ಇದೇ ಮೈದಾನದಲ್ಲಿ. IPLನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರೋ ರೋಹಿತ್ಗೆ, ಈ ಮೈದಾನದ ಇಂಚಿಂಚೂ ಮಾಹಿತಿಯಿದೆ. ಈವರೆಗು ಮುಂಬೈನಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ರೋಹಿತ್ ಹೇಳಿ ಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಆದ್ರೆ, ಸದ್ಯ ರೋಹಿತ್ ಅದ್ಭುತ ಫಾರ್ಮ್ನಲ್ಲಿದ್ದು, ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡೋಕೆ ಕಾಯ್ತಿದ್ದಾರೆ. 

ಭಾರತದ ಸೆಮಿಫೈನಲ್‌ ಹಾದಿ; ಇಲ್ಲಿದೆ ಟೀಂ ಇಂಡಿಯಾ ವಿಶ್ವಕಪ್ ಹೆಜ್ಜೆಗುರುತು

ಇಂದಿನ ಪಂದ್ಯ ಮುಂಬೈನಲ್ಲಿ ರೋಹಿತ್ ಪಾಲಿಗೆ ಆಲ್ಮೋಸ್ಟ್ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಅಂದ್ರು ತಪ್ಪಿಲ್ಲ. ಯಾಕಂದ್ರೆ, ರೋಹಿತ್ಗೀಗ 36 ವರ್ಷ. ವಿಶ್ವಕಪ್ ನಂತರ ರೋಹಿತ್ ಇಂಟರ್ನ್ಯಾಷನಲ್ ಕ್ರಿಕೆಟ್ ಆಡೋದು ಅನುಮಾನ. ಇದ್ರಿಂದ ಇಂದು ಬಿಗ್ ಇನ್ನಿಂಗ್ಸ್ ಆಡೋ ಯೋಚನೆಯಲ್ಲಿದ್ದಾರೆ. 

ಶ್ರೇಯಸ್-ಸೂರ್ಯರಿಂದ ಬರುತ್ತಾ ಜಬರ್ದಸ್ತ್ ಆಟ..? 

ರೋಹಿತ್‌ಗೆ  ಜೊತೆಗೆ ಶ್ರೇಯಸ್ ಮತ್ತು ಸೂರ್ಯಕುಮಾರ್ ತವರಿನ ಅಂಗಳದಲ್ಲಿ ಮಿಂಚುಲು ಸಜ್ಜಾಗಿದ್ದಾರೆ. ಲೀಗ್ ಹಂತದಲ್ಲಿ ಅಯ್ಯರ್  ಇದೇ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಸ್ಪೋಟಕ 82 ರನ್ ಬಾರಿಸಿದ್ರು. ಈಗ ಸೆಮಿಫೈನಲ್ನಲ್ಲೂ ಅದೇ ಆಟ ರಿಪೀಟ್ ಮಾಡೋ ಜೋಶ್ನಲ್ಲಿದ್ದಾರೆ. ಇನ್ನು  ಸೂರ್ಯಕುಮಾರ್ ಯಾದವ್ ಕೂಡ ತಮ್ಮ ತಾಕತ್ತು ತೋರಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Follow Us:
Download App:
  • android
  • ios