ಪಾಕ್ ಕ್ರಿಕೆಟಿಗರಿಗೆ ಸಿಕ್ಕಿಲ್ಲ 5 ತಿಂಗಳ ಸ್ಯಾಲರಿ, 4 ಸೋಲಿನ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ!
ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ವಿರದ್ಧ ಟೀಕೆ ಹೆಚ್ಚಾಗಿದೆ. ಈ ಸೋಲಿಗೆ ಕಾರಣಗಳ ಕುರಿತು ಚರ್ಚಿಸಲಾಗುತ್ತಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಪಾಕ್ ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ.
ಚೆನ್ನೈ(ಅ.28) ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸತತ 4 ಸೋಲಿಗೆ ಗುರಿಯಾಗುವ ಮೂಲಕ ತೀವ್ರ ಟೀಕೆ ಎದುರಿಸುತ್ತಿದೆ. ಪಾಕಿಸ್ತಾನದ ಸೆಮಿಫೈನಲ್ ಪ್ರವೇಶ ಕೂಡ ಕಗ್ಗಂಟಾಗಿದೆ. ಇತ್ತ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಬಾಬರ್ ಅಜಮ್ ನಾಯಕತ್ವ, ಪಾಕಿಸ್ತಾನದ ತಂಡದ ಫಿಟ್ನೆಸ್, ಲಾಬಿ ಸೇರಿದಂತೆ ಹಲವು ವಿಚಾರಗಳನ್ನು ಕೆದಕಿ ಟೀಕಿಸಿದ್ದಾರೆ. ಇಷ್ಟಾದರೂ ಆರಂಭದಲ್ಲಿ 2 ಪಂದ್ಯ ಗೆದ್ದಿದ್ದ ಪಾಕಿಸ್ತಾನ ಬಳಿಕ 4 ಸೋಲು ಕಂಡಿದ್ದು ಹೇಗೆ ಅನ್ನೋ ಚರ್ಚೆಗಳು ನಡೆಯುತ್ತಿದೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ತಂಡದ ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ. ಕಳೆದ 5 ತಿಂಗಳಿನಿಂದ ಪಾಕಿಸ್ತಾನ ಕ್ರಿಕೆಟಿರಿಗೆ ಸ್ಯಾಲರಿ ಸಿಕ್ಕಿಲ್ಲ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಬಾಬರ್ ಅಜಮ್ ಕೆಲ ದಿನಗಳಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚೇರ್ಮೆನ್, ಸಿಒಒ ಸೇರಿದಂತೆ ಪ್ರಮುಖರಿಗೆ ಸತತ ಸಂದೇಶ ಕಳುಹಿಸುತ್ತಿದ್ದಾರೆ. ಆದರೆ ಯಾರೂ ಕೂಡ ಬಾಬರ್ ಮೆಸೇಜ್‌ಗೆ ಸ್ಪಂದಿಸುತ್ತಿಲ್ಲ. ವಿಶ್ವಕಪ್ ಆಡುತ್ತಿರುವ ಪಾಕಿಸ್ತಾನ ಕ್ರಿಕೆಟಿಗರಿಗೆ ಕಳೆದ 5 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಹೀಗಿರುವಾಗ ಪಾಕ್ ಕ್ರಿಕೆಟಿಗರು ನಿಮ್ಮ ಮಾತು ಕೇಳಲು ಸಿದ್ಧವಿರುವ ಸಾಧ್ಯತೆ ಇಲ್ಲ ಎಂದು ರಶೀದ್ ಲತೀಫ್ ಹೇಳಿದ್ದಾರೆ.
ವಿಶ್ವಕಪ್ ಬಳಿಕ ಪಾಕಿಸ್ತಾನ ನಾಯಕ ಬಾಬರ್ ತಲೆದಂಡ?
ಪಾಕಿಸ್ತಾನ ಕ್ರಿಕೆಟಿಗರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಯಾವುದೇ ನೆರವು ಸಿಗುತ್ತಿಲ್ಲ. ವೇತನವಿಲ್ಲದೆ ಆಡುತ್ತಿದ್ದಾರೆ. ಭತ್ಯೆ ಸೇರಿದಂತೆ ಯಾವುದೇ ಸೌಲಭ್ಯಗಳು ಕಳೆದ 5 ತಿಂಗಳಿನಿಂದ ಸಿಕಿಲ್ಲ. ಹೀಗಾಗಿ ಪಾಕಿಸ್ತಾನ ತಂಡದ ಪ್ರದರ್ಶನದ ಮೇಲೆ ಟೀಕೆ ವ್ಯಕ್ತಪಡಿಸುವ ಅಧಿಕಾರವೂ ಇಲ್ಲ ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಪಾಕಿಸ್ತಾನ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ಕುರಿತು ಮಾತನಾಡಿದ್ದ ರಶೀದ್ ಲತೀಫ್ ಪಿಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಆಡುತ್ತಿರುವ ಪಾಕಿಸ್ತಾನ ಆಟಗಾರರಿಗೆ ಸರಿಯಾದ ಸ್ಯಾಲರಿ ನೀಡಿಲ್ಲ. ಹೀಗಿರುವಾಗ ತಂಡ ಉತ್ತಮ ಪ್ರದರ್ಶನ ನೀಡಬೇಕು ಎಂದು ನಿರೀಕ್ಷೆ ಇಟ್ಟುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
World Cup 2023: ಪಾಕಿಸ್ತಾನ ವಿರುದ್ಧ 1 ವಿಕೆಟ್ ರೋಚಕ ಗೆಲವು ಕಂಡ ದಕ್ಷಿಣ ಆಫ್ರಿಕಾ!
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಕಾರಣ ಪಾಕಿಸ್ತಾನ ನಾಯಕ ಬಾಬರ್ ಅಜಮ್ ನಾಯಕತ್ವವೂ ತೂಗುಗತ್ತಿಯಲ್ಲಿದೆ. ಪಿಸಿಬಿ ಏಕದಿನ ಬಳಿಕ ಬಾಬರ್ ನಾಯಕತ್ವ ಬದಲಿಸುವ ಲೆಕ್ಕಾಚಾರದಲ್ಲಿದೆ. ಸೌತ್ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ತೀವ್ರ ಟೀಕೆ ಎದುರಿಸುತ್ತಿದೆ.