ವಿಶ್ವಕಪ್ ಬಳಿಕ ಪಾಕಿಸ್ತಾನ ನಾಯಕ ಬಾಬರ್ ತಲೆದಂಡ?
ಈಗಾಗಲೇ ಐಸಿಸಿ ಟೂರ್ನಿಗಳಲ್ಲಿ ಕಳಪೆ ಸಾಧನೆ ಹೊಂದಿದ್ದಕ್ಕೆ ಬಾಬರ್ ವಿರುದ್ಧ ಪಾಕ್‌ನ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದು, ಆಜಂ ನಾಯಕತ್ವ ತೊರೆದು ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು ಎಂದಿದ್ದಾರೆ. ಸದ್ಯ ಪಾಕ್ ತಂಡ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು, 4ರಲ್ಲಿ ಸೋತಿದೆ.
ಲಾಹೋರ್(ಅ.8): ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ತಂಡದ ನಾಯಕ ಬಾಬರ್ ಆಜಂರನ್ನು ಹುದ್ದೆಯಿಂದ ಕೆಳಗಿಳಿಸುವ ಬಗ್ಗೆ ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸುಳಿವು ನೀಡಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲೇ ಪಿಸಿಬಿ ಮಾಹಿತಿ ನೀಡಿದ್ದು, ತಂಡದ ಪ್ರದರ್ಶನದ ಬಗ್ಗೆ ವಿಶ್ವಕಪ್ ಮುಗಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದೆ.
ಈಗಾಗಲೇ ಐಸಿಸಿ ಟೂರ್ನಿಗಳಲ್ಲಿ ಕಳಪೆ ಸಾಧನೆ ಹೊಂದಿದ್ದಕ್ಕೆ ಬಾಬರ್ ವಿರುದ್ಧ ಪಾಕ್‌ನ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದು, ಆಜಂ ನಾಯಕತ್ವ ತೊರೆದು ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು ಎಂದಿದ್ದಾರೆ. ಸದ್ಯ ಪಾಕ್ ತಂಡ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು, 4ರಲ್ಲಿ ಸೋತಿದೆ.
ICC World Cup 2023: ಗೆಲುವಿನ ಹುಡುಕಾಟದಲ್ಲಿ ಬಾಂಗ್ಲಾದೇಶ, ನೆದರ್‌ಲೆಂಡ್ಸ್..!
ಪಾಕ್ ಜಯದಾಸೆಗೆ ಕೊಳ್ಳಿಯಿಟ್ಟ ಮಹಾರಾಜ!
ಚೆನ್ನೈ: ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಪಾಕಿಸ್ತಾನದ ಕನಸು ಬಹುತೇಕ ಭಗ್ನಗೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ 1 ವಿಕೆಟ್ ಸೋಲು ಕಂಡ ಪಾಕಿಸ್ತಾನ, 6 ಪಂದ್ಯಗಳಲ್ಲಿ 4ನೇ ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದಿದೆ. ದಕ್ಷಿಣ ಆಫ್ರಿಕಾ 5ನೇ ಜಯದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಸೆಮೀಸ್ ಪ್ರವೇಶಕ್ಕೆ ಹತ್ತಿರವಾಗಿದೆ.
ಟೂರ್ನಿಯ ಬಹುತೇಕ ಪಂದ್ಯಗಳು ಏಕಪಕ್ಷೀಯವಾಗಿ ಮುಗಿಯುತ್ತಿದೆ ಎಂದು ಅಭಿಮಾನಿಗಳು ಅಪಾದಿಸುತ್ತಿದ್ದರು. ಆದರೆ ಈ ಪಂದ್ಯ ಎಲ್ಲರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೊನೆ ವಿಕೆಟ್ ವರೆಗೂ ಕೊಂಡೊಯ್ದ ದ.ಆಫ್ರಿಕಾ, ಕೊನೆಗೂ ಜಯ ತನ್ನ ಕೈಜಾರದಂತೆ ನೋಡಿಕೊಂಡಿತು.
'ಬಾಬರ್ ಅಜಂರನ್ನು ನಾಯಕತ್ವದಿಂದ ಕೆಳಗಿಳಿಸಿ ಈತನಿಗೆ ಪಟ್ಟ ಕಟ್ಟಿ': ಪಾಕ್ ತಂಡದಲ್ಲಿ ಹೊಸ ಕಂಪನ
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 46.4 ಓವರಲ್ಲಿ 270 ರನ್‌ಗೆ ಆಲೌಟ್ ಆಯಿತು. ಬಾಬರ್, ಶಕೀಲ್ ಅರ್ಧಶತಕ ಬಾರಿಸಿದರೂ, ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಶದಾಬ್, ನವಾಜ್‌ರ ಹೋರಾಟ ತಂಡವನ್ನು ಸ್ಪರ್ಧಾತ್ಮಕ ಮೊತ್ತ ತಲುಪಿಸಿತು. ಬಾಬರ್, ಇಫ್ತಿಕಾರ್, ಶಕೀಲ್‌ರ ವಿಕೆಟ್‌ಗಳನ್ನು ಸೇರಿ ಸ್ಪಿನ್ನರ್ ತಬ್ರೇಜ್ ಶಮ್ಸಿ ಒಟ್ಟು 4 ವಿಕೆಟ್ ಕಬಳಿಸಿ, ದ.ಆಫ್ರಿಕಾಕ್ಕೆ ನೆರವಾದರು.
ತನ್ನ ಬ್ಯಾಟಿಂಗ್ ಪಡೆ ಇರುವ ಲಯಕ್ಕೆ 271 ರನ್ ಗುರಿ ದ.ಆಫ್ರಿಕಾಕ್ಕೆ ದೊಡ್ಡದಾಗಿ ಕಾಣಲಿಲ್ಲ. ಆದರೂ ಅಗ್ರ ಕ್ರಮಾಂಕದಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. 3ನೇ ವಿಕೆಟ್‌ಗೆ ಮಾರ್ಕ್‌ರಮ್ ಜೊತೆ ಸೇರಿ ಡುಸ್ಸೆನ್ 54 ರನ್ ಸೇರಿಸಿ ಔಟಾದ ಬಳಿಕ ಕ್ಲಾಸೆನ್(12) ಸಹ ಪೆವಿಲಿಯನ್ ಸೇರಿದರು. ಮಿಲ್ಲರ್ ಹಾಗೂ ಮಾರ್ಕ್‌ರಮ್ ಕ್ರೀಸ್ ಹಂಚಿಕೊಂಡು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸುಳಿವು ನೀಡಿದರೂ ಅದು ಸಾಧ್ಯವಾಗಲಿಲ್ಲ. ಯಾನ್ಸನ್ ಹಾಗೂ ಮಾರ್ಕ್‌ರಮ್(91) ಅನಗತ್ಯವಾಗಿ ದೊಡ್ಡ ಹೊಡೆತಗಳಿಗೆ ಕೈಹಾಕಿ ವಿಕೆಟ್ ಚೆಲ್ಲಿದರು. ಇಲ್ಲಿಂದ ಪಂದ್ಯ ರೋಚಕ ತಿರುವು ಪಡೆದುಕೊಂಡಿತು.
ಮಾರ್ಕ್‌ರಮ್ ಔಟಾದಾಗ ದ.ಆಫ್ರಿಕಾಕ್ಕೆ ಗೆಲ್ಲಲು ಇನ್ನೂ 21 ರನ್ ಬೇಕಿತ್ತು. ಎನ್‌ಗಿಡಿ(04) ಹಾಗೂ ಶಮ್ಸಿ(ಔಟಾಗದೆ 04)ಯನ್ನು ಜೊತೆಯಿಟ್ಟುಕೊಂಡು ಕೇಶವ್ ಮಹಾರಾಜ್(ಔಟಾಗದೆ 07) ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕ್‌ನ ಮೂವರು ಎಕ್ಸ್‌ಪ್ರೆಸ್ ವೇಗಿಗಳ ಸ್ಪೆಲ್ ಅನ್ನು ಎಚ್ಚರಿಕೆಯಿಂದ ಎದುರಿಸಿ ವಿಕೆಟ್ ಉಳಿಸಿಕೊಂಡ ಮಹಾರಾಜ್ ಹಾಗೂ ಶಮ್ಸಿ, 48ನೇ ಓವರಲ್ಲಿ ಸ್ಪಿನ್ನರ್ ನವಾಜ್ ದಾಳಿಗಿಳಿಯುತ್ತಿದ್ದಂತೆ ಅದರ ಲಾಭವೆತ್ತಿದರು. 4 ರನ್ ಬೇಕಿದ್ದಾಗ ಮಹಾರಾಜ್ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದರು.