ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟ್ಸ್‌ಮನ್ ಟೈಮ್ ಔಟ್ ಆಗಿ ಪೆವಿಲಿಯನ್ ಸೇರಿದ ಘಟನೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ನಡೆದಿದೆ. 2 ನಿಮಿಷ ತಡವಾಗಿ ಬಂದ ಮ್ಯಾಥ್ಯೂಸ್‌ನನ್ನು ಅಂಪೈರ್ ಔಟ್ ಎಂದು ತೀರ್ಪು ನೀಡಿ ಪೆವಿಲಿಯನ್‌ಗೆ ಕಳುಹಿಸಿದ ಘಟನೆ ನಡೆದಿದೆ. 

ದೆಹಲಿ(ನ.06) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಎಂಜಲೋ ಮ್ಯಾಥ್ಯೂಸ್ ಟೈಮ್ ಔಟ್ ಆಗಿ ಪೆವಿಲಿಯನ್ ಸೇರಿದ ಘಟನೆ ನಡೆದಿದೆ. ಎಂಜಲೋ ಮ್ಯಾಥ್ಯೂಸ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ 2 ನಿಮಿಷಕ್ಕಿಂತ ತಡವಾಗಿ ಆಗಮಿಸಿದ್ದಾರೆ. ಬಾಂಗ್ಲಾದೇಶ ತಂಡದ ಅಪೀಲ್ ಸ್ವೀಕರಿಸಿದ ಅಂಪೈರ್, ಮ್ಯಾಥ್ಯೂಸ್‌ ವಿರುದ್ಧ ಟೈಮ್ ಔಟ್ ತೀರ್ಪು ನೀಡಿದ್ದಾರೆ. ಕ್ರೀಸ್‌ಗೆ ಬಂದು ಬ್ಯಾಟಿಂಗ್ ಮಾಡಿದ ಟೈಮ್ ಔಟ್ ಆಗಿ ಪೆವಿಲಿಯನ್ ಸೇರಿದ ಮೊದಲ ಬ್ಯಾಟ್ಸ್‌ಮನ್ ಅನ್ನೋ ಅಪಕೀರ್ತಿಗೆ ಮ್ಯಾಥ್ಯೂಸ್ ಗುರಿಯಾಗಿದ್ದಾರೆ.

ಶ್ರೀಲಂಕಾ ದಿಟ್ಟ ಹೋರಾಟದ ವೇಳೆ ಸದೀರಾ ಸಮರವಿಕ್ರಮ ವಿಕೆಟ್ ಪತನಗೊಂಡಿತು. ಸದೀರಾ 41 ರನ್ ಕಾಣಿಕೆ ನೀಡಿದ್ದರು. ಸದೀರಾ ಪೆವಿಲಿಯನ್ ಸೇರಿದರೆ ಇತ್ತ ಎಂಜಲೋ ಮ್ಯಾಥ್ಯೂಸ್ ಕ್ರೀಸ್‌ಗೆ ಆಗಮಿಸಿದರು. ಆದರೆ ಹೆಲ್ಮೆಟ್ ಸಮಸ್ಯೆಯಿಂದಾಗಿ ಮುಂದಿನ ಬಾಲ್ ಎದುರಿಸಲು ಮ್ಯಾಥ್ಯೂಸ್ 2ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಇದನ್ನು ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಪ್ರಶ್ನಿಸಿದ್ದಾರೆ. ಶಕೀಬ್ ಅಪೀಲ್ ಸ್ವೀಕರಿಸಿದ ಅಂಪೈರ್, ಆ್ಯಂಜಲೋ ಮ್ಯಾಥ್ಯೂಸ್ ಟೌಮ್ ಔಟ್ ಎಂದು ತೀರ್ಪು ನೀಡಿದ್ದಾರೆ.

ನಾನು ಧೋನಿ ಕ್ಲೋಸ್ ಫ್ರೆಂಡ್ಸ್ ಅಲ್ಲವೇ ಅಲ್ಲ : ಹೊಸ ಬಾಂಬ್ ಸಿಡಿಸಿದ ಯುವಿ..!

ಇತ್ತ ಏಂಜಲೋ ಮ್ಯಾಥ್ಯೂಸ್ ಪರಿ ಪರಿಯಾಗಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಬಳಿ ಮನವಿ ಮಾಡಿದ್ದಾರೆ. ಹೆಲ್ಮೆಟ್ ಕಾರಣದಿಂದ ತಡವಾಗಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಶಕೀಬ್ ಹಾಗೂ ಬಾಂಗ್ಲಾದೇಶ ತಂಡ ಮ್ಯಾಥ್ಯೂಸ್ ಮನವಿಗೆ ಸೊಪ್ಪು ಹಾಕಲಿಲ್ಲ. ಹೀಗಾಗಿ ಮ್ಯಾಥ್ಯೂಸ್ ಪೆವಿಲಿಯನ್‌ಗೆ ಹಿಂತಿರುಗಿದರು.

Scroll to load tweet…

ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರೂ ಕೂಡ ಟೈಮ್ ಔಟ್ ಆಗಿಲ್ಲ. ಹಲವು ಬಾರಿ ಬ್ಯಾಟ್ಸ್‌ಮನ್ 2ನಿಮಿಷಕ್ಕಿಂತ ತಡವಾಗಿ ಬಂದ ಉದಾಹರಣೆಗಳಿವೆ. ಆದರೆ ಔಟ್‌ಗಾಗಿ ಎದುರಾಳಿ ತಂಡ ಮನವಿ ಮಾಡಿಲ್ಲ. ಈ ಬಾರಿ ಬಾಂಗ್ಲಾದೇಶ ತಂಡ ಔಟ್‌ಗೆ ಮನವಿ ಮಾಡಿದ ಕಾರಣ ಅಂಪೈರ್ ತೀರ್ಪು ನೀಡಿದ್ದಾರೆ. 

ನಿಯಮದ ಪ್ರಕಾರ, ಕ್ರೀಸ್‌ನಲ್ಲಿದ್ದ ಬ್ಯಾಟ್ಸ್‌ಮನ್ ಔಟ್ ಅಥವಾ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿದರೆ, ಔಟಾದ ಮುಂದಿನ 2 ನಿಮಿಷದೊಳಗೆ ಮಂದಿನ ಬ್ಯಾಟ್ಸ್‌ಮನ್ ಎಸೆತ ಎದುರಿಸಲು ಕ್ರೀಸ್‌ನಲ್ಲಿರಬೇಕು. ಇಲ್ಲಿ ಮ್ಯಾಥ್ಯೂಸ್ ಕ್ರೀಸ್‌ಗೆ ಆಗಮಿಸಿದರೂ ಹೆಲ್ಮೆಟ್ ಸಮಸ್ಯೆಯಿಂದ ಎಸೆತ ಎದುರಿಸಲು 2ಕ್ಕಿಂತ ಹೆಚ್ಚಿನ ನಿಮಿಷ ತೆಗೆದುಕೊಂಡಿದ್ದಾರೆ. ಹೀಗಾಗಿ ಬಾಂಗ್ಲಾದೇಶ ಟೈಮ್ ಔಟ್‌ಗೆ ಮನವಿ ಮಾಡಿತ್ತು.

ನನ್ನ ದಾಖಲೆ ಕೊಹ್ಲಿ-ರೋಹಿತ್ ಮುರಿಯುತ್ತಾರೆ; 2012ರಲ್ಲೇ ಸಲ್ಮಾನ್ ಖಾನ್‌ಗೆ ಭವಿಷ್ಯ ನುಡಿದಿದ್ದ ಸಚಿನ್!

ಇದೀಗ ಈ ಟೈಮ್ ಔಟ್ ಭಾರಿ ಚರ್ಚೆಯಾಗುತ್ತಿದೆ. ಶಕೀಬ್ ಅಲ್ ಹಸನ್ ಕ್ರೀಡಾ ಸ್ಪೂರ್ತಿ ಮೆರೆಯಬೇಕಿತ್ತು. ಮ್ಯಾಥ್ಯೂಸ್‌ಗೆ ವಾರ್ನಿಂಗ್ ನೀಡಿ ಆಡಿಸಬೇಕಿತ್ತು. ತಂಡದ ಕಠಿಣ ಪರಿಶ್ರಮ ಪಡೆದೆ ಗೆಲುವಿಗಾಗಿ ಹಾತೊರೆದರೆ ಹೀಗೆ ಆಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇತ್ತ ಮ್ಯಾಥ್ಯೂಸ್ ಹಿರಿಯ ಕ್ರಿಕೆಟಿಗ. ಈ ರೀತಿ ನಿಯಮಗಳ ಬಗ್ಗೆ ತಿಳಿದಿರಬೇಕಿತ್ತು. ಹೆಲ್ಮೆಟ್ ಸರಿಇಲ್ಲ, ಪ್ಯಾಡ್ ಕಟ್ಟಿಲ್ಲ, ಗ್ಲೌಸ್ ಬದಲಾಗಿದೆ ಅನ್ನೋ ವಾದಗಳನ್ನು ಹಿರಿಯ ಕ್ರಿಕೆಟಿಗನಿಂದ ಒಪ್ಪಲು ಸಾಧ್ಯವಿಲ್ಲ. ಇವೆಲ್ಲವನ್ನೂ ಧರಿಸಿ ಬ್ಯಾಟಿಂಗ್‌ಗೆ ಸದಾ ಸನ್ನದ್ಧವಾಗಿರಬೇಕಿತ್ತು ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿದೆ.


Scroll to load tweet…