ಮಹಿಳಾ ಟಿ20 ವಿಶ್ವಕಪ್‌: ಕಿವೀಸ್ ಮಣಿಸಿ ಆಸೀಸ್‌ ಸೆಮಿಫೈನಲ್‌ಗೆ

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ICC Women's T20 World cup Australia qualify for semi finals after beat New Zealand

ಮೆಲ್ಬರ್ನ್‌(ಮಾ.03): ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ 2ನೇ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ಸೋಮವಾರ ನಡೆದ ಲೀಗ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೇರಿದೆ. ಸೋತ ನ್ಯೂಜಿಲೆಂಡ್‌ ಟೂರ್ನಿಯಿಂದ ಹೊರಬಿದ್ದಿದೆ.

ಅಪ್ಪ ತರಕಾರಿ ವ್ಯಾಪಾರಿ, ಮಗಳು ಭಾರತ ಕ್ರಿಕೆಟ್ ತಂಡದ ವೀರ ನಾರಿ!

ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ

ಆಸ್ಪ್ರೇಲಿಯಾ ನೀಡಿದ 156 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಮಾರ್ಟಿನ್‌ (37), ಸೋಫಿ ಡಿವೈನ್‌ (31) ಹೋರಾಟದ ಹೊರತಾಗಿಯೂ 20 ಓವರಲ್ಲಿ 7 ವಿಕೆಟ್‌ಗೆ 151 ರನ್‌ಗಳಿಸಿ ಸೋಲೊಪ್ಪಿತು. ಆಸೀಸ್‌ ಪರ ಜಾರ್ಜಿಯಾ ವಾರ್ಹೆಮ್‌ (3-17) ಹಾಗೂ ಮೆಗಾನ್‌ ಸ್ಚಟ್‌ (3-28) ಮಾರಕ ಬೌಲಿಂಗ್‌ ದಾಳಿಯಿಂದ ಗಮನಸೆಳೆದರು. ಆಸ್ಪ್ರೇಲಿಯಾ ಬೆಥ್‌ ಮೂನಿ (60) ನೆರವಿನಿಂದ 5 ವಿಕೆಟ್‌ಗೆ 155 ರನ್‌ಗಳಿಸಿತ್ತು.

ಸ್ಕೋರ್‌: ಆಸ್ಪ್ರೇಲಿಯಾ 155/5, ನ್ಯೂಜಿಲೆಂಡ್‌ 151/7

ಸೆಮೀಸ್‌ ಇಂದು ನಿರ್ಧಾರ:

ಮಾ.5ರಂದು ಸೆಮಿಫೈನಲ್‌ ಹಂತದ ಪಂದ್ಯಗಳು ನಡೆಯಲಿವೆ. ‘ಎ’ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ಈಗಾಗಲೇ ಸೆಮೀಸ್‌ ಪ್ರವೇಶಿಸಿವೆ. ‘ಬಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ತಂಡಗಳು ಅಗ್ರ 2 ಸ್ಥಾನದಲ್ಲಿವೆ. ಇವೆರಡೂ ತಂಡಗಳು ಸೆಮೀಸ್‌ಗೇರುವುದು ಖಚಿತ. ಮಂಗಳವಾರ ನಡೆಯಲಿರುವ ದ.ಆಫ್ರಿಕಾ-ವಿಂಡೀಸ್‌ ಪಂದ್ಯದ ಫಲಿತಾಂಶ ಸೆಮೀಸ್‌ ಹಣಾಹಣಿಯನ್ನು ನಿರ್ಧರಿಸಲಿದೆ.

Latest Videos
Follow Us:
Download App:
  • android
  • ios