ದುಬೈ(ಜು.19): ಕೊರೋನಾ ವೈರಸ್ ಕಾರಣ 2 ಪ್ರಮುಖ ಟೂರ್ನಿಗಳ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ವಿಶ್ವಕಪ್ ಟೂರ್ನಿ ಕುರಿತು ಐಸಿಸಿ ಸ್ಪಷ್ಟ ನಿರ್ಧಾರ ಹೊರ ಹಾಕದ ಕಾರಣ ಬಿಸಿಸಿಐ ಗರಂ ಆಗಿದೆ. ಬಿಸಿಸಿಐ ಒತ್ತಡದ ಬೆನ್ನಲ್ಲೇ ಐಸಿಸಿ ನಾಳೆ(ಜು.20)ಕ್ಕೆ ಸಭೆ ಸೇರುತ್ತಿದೆ. ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಐಸಿಸಿ ಅಧೀಕೃತ ಪ್ರಕಟಣೆ ಹೊರಡಿಸಲಿದೆ.

ದುಬೈನಲ್ಲೇ ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!

ಆಕ್ಟೋಬರ್ 18 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯಾಗಿದೆ. ಆದರೆ ಕೊರೋನಾ ವೈರಸ್ ಕಾರಣ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಆಯೋಜನೆ ಕಷ್ಟ ಎಂದು ಆತಿಥ್ಯ ವಹಿಸಿದ ಆಸ್ಟ್ರೇಲಿಯಾ ಹೇಳಿತ್ತು. ಕೊರೋನಾ ವೈರಸ್ ಗಂಭೀರವಾಗುತ್ತಿರುವ ಕಾರಣ ಇದೀಗ ಐಸಿಸಿ ವಿಡಿಯೋ ಕಾನ್ಫೆರನ್ಸ್ ಮೂಲಕ ಸಬೆ ಸೇರುತ್ತಿದೆ. ನಾಳಿನ ಸಭೆಯಲ್ಲಿ ಟಿ20 ವಿಶ್ವಕಪ್ ಟೂರ್ನಿ ಭವಿಷ್ಯ ನಿರ್ಧಾರವಾಗಲಿದೆ.

ಭಾರತ-ಇಂಗ್ಲೆಂಡ್ ಸರಣಿ ಮುಂದೂ​ಡಿಕೆ..! IPL ನಡೆಯೋದು ಪಕ್ಕಾ..?.

ಕೊರೋನಾ ಕಾರಣ ಟಿ20 ವಿಶ್ವಕಪ್ ಟೂರ್ನಿ ರದ್ದಾಗುವ ಸಾಧ್ಯತೆ ಹೆಚ್ಚು ಎಂದು ಬಿಸಿಸಿಐ ಹೇಳುತ್ತಿದೆ. ಟಿ20 ವಿಶ್ವಕಪ್ ಭವಿಷ್ಯ ರದ್ದಾದರೆ, ಐಪಿಎಲ್ ಟೂರ್ನಿ ಆಯೋಜನೆ ಖಚಿತವಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ರೆಡಿಯಾಗಿದೆ. ದುಬೈನಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿದೆ. 

ಬಿಸಿಸಿಐಗೆ ಟಿ20 ವಿಶ್ವಕಪ್ ಟೂರ್ನಿ ಅಡ್ಡಿಯಾಗಿತ್ತು. 2020ರ ಟಿ20 ವಿಶ್ವಕಪ್ ಟೂರ್ನಿ ಮುಂದೂಡುವ ಸಾಧ್ಯತೆ ಕಡಿಮೆ ಇದೆ. ಕಾರಣ ಇತರ ಟೂರ್ನಿಗಳಿಗೆ ಅಡ್ಡಿಯಾಗಲಿದೆ. ಮೊದಲೇ ಸಂಕಷ್ಟದಲ್ಲಿರುವ ಪ್ರತಿ ದೇಶದ ಕ್ರಿಕೆಟ್ ಮಂಡಳಿಗಳು ಯಾವ ದ್ವಿಪಕ್ಷೀಯ ಟೂರ್ನಿ ರದ್ದು ಮಾಡಲು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ರದ್ದಾಗುವ ಸಾಧ್ಯತೆ ಹೆಚ್ಚು. ಹೀಗಾದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಚಟುವಟಿಕೆ ಗರಿಗೆದರಲಿದೆ.