ನವ​ದೆ​ಹ​ಲಿ(ಜು.16): ಸೆಪ್ಟೆಂಬರ್‌ನಲ್ಲಿ ಭಾರ​ತ​ದಲ್ಲಿ ನಡೆ​ಯ​ಬೇ​ಕಿರುವ ಇಂಗ್ಲೆಂಡ್‌ ವಿರು​ದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳು ಮುಂದೂ​ಡಿಕೆಯಾಗುವುದು ಬಹು​ತೇಕ ಖಚಿತಗೊಂಡಿದೆ. 

ಸೆಪ್ಟೆಂಬರ್‌ನಲ್ಲಿ ಐಪಿ​ಎಲ್‌ ಆರಂಭ​ಗೊ​ಳ್ಳ​ಲಿ​ರುವ ಕಾರಣ, 3 ಪಂದ್ಯ​ಗಳ ಏಕ​ದಿನ ಹಾಗೂ 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು 2021ರ ಸೆಪ್ಟೆಂಬರ್‌ನಲ್ಲಿ ನಡೆ​ಸಲು ನಿರ್ಧ​ರಿ​ಸ​ಲಾ​ಗಿದೆ ಎಂದು ಮಾಧ್ಯ​ಮ​ಗಳು ವರದಿ ಮಾಡಿವೆ. 

ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಇಂಗ್ಲೆಂಡ್‌ ತಂಡ ಹಿಂದೇಟು ಹಾಕು​ತ್ತಿ​ರು​ವುದು ಸಹ ಸರಣಿ ಮುಂದೂ​ಡಲು ಕಾರಣ ಎನ್ನ​ಲಾ​ಗಿದೆ. ಶುಕ್ರ​ವಾರ ಬಿಸಿ​ಸಿಐ ಸಭೆ ನಡೆ​ಯ​ಲಿದ್ದು, ಈ ಬಗ್ಗೆ ಅಧಿ​ಕೃತ ಪ್ರಕ​ಟಣೆ ಹೊರ​ಬೀ​ಳುವ ನಿರೀಕ್ಷೆ ಇದೆ.

ಕೊಹ್ಲಿ ಪಡೆಗೆ ದುಬೈನಲ್ಲಿ 6 ವಾರ ಅಭ್ಯಾಸ ಶಿಬಿರ?

ನವ​ದೆ​ಹ​ಲಿ: ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿಎಲ್‌ ನಡೆ​ಸಲು ಯೋಜನೆ ರೂಪಿ​ಸು​ತ್ತಿ​ರುವ ಬಿಸಿ​ಸಿಐ, ಟೂರ್ನಿಗೂ ಮುನ್ನ ಕೇಂದ್ರ ಗುತ್ತಿಗೆ ಹೊಂದಿ​ರುವ ಆಟ​ಗಾ​ರ​ರನ್ನು ವಿಶೇಷ ವಿಮಾ​ನ​ದಲ್ಲಿ ದುಬೈಗೆ ಕಳು​ಹಿಸಿ, 6 ವಾರಗಳ ಅಭ್ಯಾಸ ಶಿಬಿರ ಆಯೋ​ಜಿಸಲು ಚಿಂತನೆ ನಡೆ​ಸಿದೆ. 

ವಿಂಡೀಸ್ ವಿರುದ್ಧ 2ನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ಗೆ ಶಾಕ್..!

ಶುಕ್ರ​ವಾರ ನಡೆ​ಯ​ಲಿ​ರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊ​ಳ್ಳ​ಲಾ​ಗು​ವುದು ಎಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರದಿ ಮಾಡಿದೆ. ಸದ್ಯದ ಸ್ಥಿತಿ​ಯಲ್ಲಿ ಭಾರ​ತ​ದಲ್ಲಿ ಐಪಿ​ಎಲ್‌ ಆಯೋ​ಜಿ​ಸು​ವುದು ಅಸಾಧ್ಯವೆನಿ​ಸಿರುವ ಕಾರಣ, ಯುಎ​ಇ​ನಲ್ಲಿ ಟೂರ್ನಿ ನಡೆ​ಸು​ವುದು ಬಹು​ತೇಕ ಖಚಿತ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.