ದುಬೈ[ಡಿ.24]: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಸೋಮವಾರ ನೂತನವಾಗಿ ಬಿಡುಗಡೆಯಾದ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ 2 ಸ್ಥಾನ ಕಾಯ್ದುಕೊಂಡಿದ್ದಾರೆ.

ದಶಕದ ಏಕದಿನ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಧೋನಿಗೆ ನಾಯಕ ಪಟ್ಟ ! 

2019ರ ಅಂತ್ಯಕ್ಕೆ ಕೊಹ್ಲಿ ನಂ.1 ಹಾಗೂ ರೋಹಿತ್ ನಂ.2ನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಬೌಲರ್‌ಗಳ ಪಟ್ಟಿಯಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ನಂ.1 ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 63 ರನ್‌ಗಳಿಸುವ ಮೂಲಕ ರೋಹಿತ್, 22 ವರ್ಷಗಳ ಹಿಂದೆ ಶ್ರೀಲಂಕಾದ ಸನತ್ ಜಯಸೂರ್ಯ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಕ್ಯಾಲೆಂಡರ್ ವರ್ಷದಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ರೋಹಿತ್, ಸನತ್‌ರನ್ನು ಹಿಂದಿಕ್ಕಿದರು. ರೋಹಿತ್ 2442 ರನ್‌ಗಳಿಸಿದ್ದಾರೆ.  2019ರಲ್ಲಿ ಎಲ್ಲಾ ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನ ಪಡೆದರು.

22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!

ಈ ವರ್ಷ ಕೊಹ್ಲಿ, ಮೂರು ಮಾದರಿಯ ಕ್ರಿಕೆಟ್‌ನಲ್ಲಿ 2455 ರನ್‌ಗಳಿಸಿದ್ದಾರೆ. ಕೆ.ಎಲ್. ರಾಹುಲ್, ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 17 ಸ್ಥಾನ ಜಿಗಿತ ಕಂಡಿದ್ದು, 71ನೇ ಸ್ಥಾನಕ್ಕೇರಿದ್ದರೆ, ಶ್ರೇಯಸ್ ಅಯ್ಯರ್ 81ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ 785 ರೇಟಿಂಗ್‌ನೊಂದಿಗೆ ನಂ.1 ಸ್ಥಾನದಲ್ಲಿ ಉಳಿದಿದ್ದಾರೆ. ಇನ್ನುಳಿದಂತೆ ಅಗ್ರ 10ರಲ್ಲಿ ಯಾವೊಬ್ಬ ಆಟಗಾರನು ಸ್ಥಾನ ಉಳಿಸಿಕೊಂಡಿಲ್ಲ.