ಈ ಕುರಿತಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ರೇಟಿಂಗ್ ಪ್ರಕಟಿಸಿದ್ದು, 'ಎವರೇಜ್'(ಸಾಧಾರಣ) ಪಿಚ್ ಎಂದು ರೇಟಿಂಗ್ ನೀಡಿದೆ. ಐಸಿಸಿ ಮ್ಯಾಚ್ ರೆಫ್ರಿ ಹಾಗೂ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಆಂಡಿ ಪೈಕ್ರಾಫ್ಟ್‌ ಅವರು ಈ ರೇಟಿಂಗ್ ನೀಡಿದ್ದಾರೆ. ಆದರೆ ಪಿಚ್ ಹೊರತುಪಡಿಸಿ ಔಟ್‌ಫೀಲ್ಡ್ ತುಂಬಾ ಚೆನ್ನಾಗಿತ್ತು ಎನ್ನುವ ರೇಟಿಂಗ್ ನೀಡಿದ್ದಾರೆ.

ದುಬೈ(ಡಿ.08): 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಮುಗಿದು ಒಂದು ತಿಂಗಳಾಗುತ್ತಾ ಬಂದರೂ ಆ ಪಂದ್ಯದ ಕುರಿತಾದ ಒಂದಲ್ಲಾ ಒಂದು ವಿಚಾರ ಚರ್ಚೆಯಲ್ಲಿರುತ್ತಲೇ ಇದೆ. ಇದೀಗ ಕಳೆದ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ದ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದ ಪಿಚ್ ರೇಟಿಂಗ್ ಹೊರಬಿದ್ದಿದೆ. 

ಹೌದು, ಈ ಕುರಿತಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ರೇಟಿಂಗ್ ಪ್ರಕಟಿಸಿದ್ದು, 'ಎವರೇಜ್'(ಸಾಧಾರಣ) ಪಿಚ್ ಎಂದು ರೇಟಿಂಗ್ ನೀಡಿದೆ. ಐಸಿಸಿ ಮ್ಯಾಚ್ ರೆಫ್ರಿ ಹಾಗೂ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಆಂಡಿ ಪೈಕ್ರಾಫ್ಟ್‌ ಅವರು ಈ ರೇಟಿಂಗ್ ನೀಡಿದ್ದಾರೆ. ಆದರೆ ಪಿಚ್ ಹೊರತುಪಡಿಸಿ ಔಟ್‌ಫೀಲ್ಡ್ ತುಂಬಾ ಚೆನ್ನಾಗಿತ್ತು ಎನ್ನುವ ರೇಟಿಂಗ್ ನೀಡಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ದ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿತ್ತು.

Women's Premier League ಹರಾಜಿಗೆ ಕ್ಷಣಗಣನೆ: ಇಲ್ಲಿದೆ ಮಹಿಳಾ ಐಪಿಎಲ್ ಹರಾಜಿನ ಸಂಪೂರ್ಣ ಡೀಟೈಲ್ಸ್

ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ ಕೇವಲ 240 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತದ ಹೊರತಾಗಿಯೂ ಟ್ರಾವಿಸ್ ಹೆಡ್ ಬಾರಿಸಿದ ಶತಕದ ನೆರವಿನಿಂದ ಇನ್ನೂ 7 ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು.

ಇನ್ನು ಇದಷ್ಟೇ ಅಲ್ಲದೇ ಭಾರತ ಆಡಿದ ಲೀಗ್ ಹಂತದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ದ ಕ್ರಮವಾಗಿ ಕೋಲ್ಕತಾ, ಲಖನೌ, ಅಹಮದಾಬಾದ್‌ ಮತ್ತು ಚೆನ್ನೈನ ಪಿಚ್‌ಗಳು ಕೂಡಾ ಎವರೇಜ್ ಪಿಚ್‌ಗಳಾಗಿದ್ದವು ಎಂದು ಐಸಿಸಿ ರೇಟಿಂಗ್ ನೀಡಿದೆ.

ವಿಶ್ವಕಪ್ ಸೋಲಿಗೆ ರೋಹಿತ್ ಶರ್ಮಾ- ದ್ರಾವಿಡ್ ವಿಚಾರಣೆ; ಅಸಮಧಾನ ತೋಡಿಕೊಂಡ ಕೋಚ್!

ಕೆಲದಿನಗಳ ಹಿಂದಷ್ಟೇ ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್ ಕೂಡಾ, ಅಹಮದಾಬಾದ್‌ನ ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ವಿಶ್ವಕಪ್ ಫೈನಲ್ ಸೋಲಲು ಪಿಚ್ ಸಿದ್ದಪಡಿಸಿದ ರೀತಿಯೇ ಕಾರಣ ಎಂದು ಸೋಲಿನ ಪರಾಮರ್ಶೆಯ ಸಭೆಯಲ್ಲಿ ತಿಳಿಸಿದ್ದರು. ತವರಿನ ಪಿಚ್ ಭಾರತಕ್ಕೆ ವರವಾಗುವ ಬದಲು ಶಾಪವಾಗಿತ್ತು. ಭಾರತ ಯಾವುದೇ ಪಿಚ್‌ನಲ್ಲಿ ಆಡುವ ಸಾಮರ್ಥ್ಯ ಹೊಂದಿದೆ. ಆದರೆ ಅಹಮ್ಮದಾಬಾದ್ ಪಿಚ್ ಭಾರತಕ್ಕೆ ವರವಾಗಲಿಲ್ಲ. ಆಸ್ಟ್ರೇಲಿಯಾ ಬೌಲರ್‌ಗಳು ತಮ್ಮ ಪ್ಲಾನ್ ಪ್ರಕಾರ ಆಡಿ ಗೆಲುವಿನ ದಡ ಸೇರಿದ್ದಾರೆ. ಇದನ್ನು ಹೊರತುಪಡಿಸಿದರೆ ತಂಡದ ಹೋರಾಟ, ಅಪ್ರೋಚ್ ಯಾವೂದು ಕೂಡ ಬದಲಾಗಿಲ್ಲ. ಲೀಗ್ ಹಂತದಲ್ಲಿ ನೀಡಿದ ಶಕ್ತಿ ಮೀರಿದ ಪ್ರಯತ್ನವನ್ನೇ ಫೈನಲ್ ಪಂದ್ಯದಲ್ಲಿ ತಂಡ ನೀಡಿತ್ತು ಎಂದು ದ್ರಾವಿಡ್ ಹೇಳಿದ್ದರು.