ಐಪಿಎಲ್ ಟೂರ್ನಿ ಹಾಗೂ ಹರಾಜಿಗೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಎಂಎಸ್ ಧೋನಿ ವಿಡಿಯೋ ಭಾರಿ ವೈರಲ್ ಆಗಿದೆ. ನನ್ನಿಂದ ಸಾಧ್ಯವೇ ಇಲ್ಲ ಎಂದಿರುವ ಈ ಸ್ಪಷ್ಟನೆ ವಿಡಿಯೋ ಕುರಿತು ಮಾಹಿತಿ ಇಲ್ಲಿದೆ. 

ರಾಂಚಿ(ಡಿ.06) ಐಪಿಎಲ್ ಹರಾಜಿಗೆ ತಯಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ತಂಡಗಳು ತಂಡದಲ್ಲಿ ಉಳಿಸಿದ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂದು ಉಲ್ಲೇಖಿಸಲಾಗಿತ್ತು. ಇದು ಕೋಟ್ಯಾಂತರ ಅಭಿಮಾನಿಗಳಿಗೆ ನೆಮ್ಮದಿ ತಂದಿತ್ತು. ಇದೀಗ ಯಾವ ಕ್ರಿಕೆಟಿಗನ ಖರೀದಿಸಬೇಕು ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಇದರ ನಡುವೆ ಧೋನಿಯ ವಿಡಿಯೋ ವೈರಲ್ ಆಗಿದೆ. ನನ್ನಿಂದ ಸಾಧ್ಯವಿಲ್ಲ ಎಂದಿರುವ ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ನೀವು ಯೂಟ್ಯೂಬ್ ವಿಡಿಯೋ ಮಾಡಬಹುದಲ್ವಾ ಎಂಬ ಪ್ರಶ್ನೆಗೆ ಉತ್ತರಿಸುವ ವೇಳೆ ಧೋನಿ ನನ್ನಿಂದ ಸಾಧ್ಯವೇ ಇಲ್ಲ ಎಂದಿದ್ದಾರೆ. ಇದಕ್ಕೆ ಅಷ್ಟೇ ಕುತೂಹಲಕರ ವಿವರಣೆಯನ್ನೂ ನೀಡಿದ್ದಾರೆ.

ನೀವು ಯೂಟ್ಯೂಬ್ ವಿಡಿಯೋ ಮಾಡಬುಹುದಲ್ವಾ ಎಂದು ಧೋನಿಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಧೋನಿ, ಅವರು ಹೇಳ್ತಾರೆ ಆದರೆ ನನ್ನಿಂದ ಸಾಧ್ಯವೇ ಇಲ್ಲ. ಇದು ಅತ್ಯಂತ ಕಠಿಣವಾದ ವಿಷಯ. ಹಾಗಂತ ನನಗೆ ಕ್ಯಾಮೆರಾ ಎದುರಿಸುವುದು ಅಥವಾ ಇನ್ಯಾವುದೇ ಸವಾಲು ಇಲ್ಲ. ನಾನು ಮುಖತಃ ಸಂವಾದ ಇಷ್ಟಪಡುತ್ತೇನೆ. ನೇರಾ ನೇರ ಮಾತುಕತೆ ಇಷ್ಟವಾಗುತ್ತದೆ. ಆದರೆ ಯೂಟ್ಯೂಬ್ ನನ್ನಿಂದ ಆಗಲ್ಲ. ನಾನೂ ಕೊಂಚ ಮೂಡಿ. ಇನ್ನು ಕಷ್ಟಪಟ್ಟು ಒಂದೆರೆಡು ವಿಡಿಯೋ ಮಾಡಿದರೆ ಮತ್ತೆ ಒಂದು ವರ್ಷ ಬಳಿಕ ಪೋಸ್ಟ್ ಮಾಡುತ್ತೇನೆ. ಹೇಗಂದರೆ ನನ್ನ ಇಸ್ಟಾಗ್ರಾಂ ರೀತಿ ಎಂದು ಧೋನಿ ವಿವರಣೆ ನೀಡಿದ್ದಾರೆ.

ಹಳೇ ಯಮಹಾ RD350 ಬೈಕ್ ಖರೀದಿಸಿ ರಿಸ್ಟೋರ್ ಮಾಡಿದ ಧೋನಿ,ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ!

ಈ ಬಾರಿ ಧೋನಿ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆ. ಆದರೆ ಪೂರ್ಣಪ್ರಮಾಣದಲ್ಲಿ ಆಡುತ್ತಾರಾ? ನಾಯಕತ್ವ ಜವ್ದಾರಿ ಜೊತೆಗೆ ಆಡುತ್ತಾರಾ ಅನ್ನೋ ಕುತೂಹಲ ಹಾಗೇ ಇದೆ. 

Scroll to load tweet…

 2024ರ ಐಪಿಎಲ್‌ನ ಆಟಗಾರರ ಹರಾಜಿಗೆ ಮಿಚೆಲ್‌ ಸ್ಟಾರ್ಕ್‌, ಟ್ರ್ಯಾವಿಸ್‌ ಹೆಡ್‌, ಕಮಿನ್ಸ್‌, ರಚಿನ್‌, ಡ್ಯಾರಿಲ್‌ ಮಿಚೆಲ್‌, ಮನೀಶ್‌ ಪಾಂಡೆ, ಕರುಣ್‌ ನಾಯರ್‌ ಸೇರಿ ಒಟ್ಟು 1166 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 830 ಭಾರತೀಯರು, 336 ವಿದೇಶಿಗರು ಸೇರಿದ್ದಾರೆ. ಫ್ರಾಂಚೈಸಿಗಳು ಖರೀದಿಸಲು ಇಚ್ಛಿಸುವ ಆಟಗಾರರ ಪಟ್ಟಿಗಳನ್ನು ಸಲ್ಲಿಸಿದ ಬಳಿಕ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಲಿದೆ.

ಧೋನಿ ಕೆಣಕಿ ಕಂಗೆಟ್ಟ ಟ್ವಿಟರ್ ಬಳಕೆದಾರ, ಕೂಲ್ ಕ್ಯಾಪ್ಟನ್ ಉತ್ತರಕ್ಕೆ ಸೈಲೆಂಟ್!