ಹಳೇ ಯಮಹಾ RD350 ಬೈಕ್ ಖರೀದಿಸಿ ರಿಸ್ಟೋರ್ ಮಾಡಿದ ಧೋನಿ,ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ!
ಎಂಎಸ್ ಧೋನಿಗೆ ಕಾರಿಗಿಂತ ಬೈಕ್ ಕ್ರೇಜ್ ಹೆಚ್ಚು. ಅದರಲ್ಲೂ ಹಳೇ ವಿಂಟೇಜ್ ಬೈಕ್ ಹಾಗೂ ಕಾರುಗಳ ಸಂಖ್ಯೆ ದೊಡ್ಡದಿದಿದೆ. ಇದೀಗ ಧೋನಿಯ ಅತ್ಯಂತ ಫೇವರಿಟ್ ಯಮಹಾ RD350 ಬೈಕ್ ಖರೀದಿಸಿ ರಿಸ್ಟೋರ್ ಮಾಡಿದ್ದಾರೆ. ಹೊಚ್ಚ ಹೊಸ ಲುಕ್‌ನಲ್ಲಿ ಮಿಂಚುತ್ತಿರುವ ಈ ಬೈಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಮ್ಮ ವಾಹನ ಪಾರ್ಕ್ ಮಾಡಲು ಎರಡು ಅಂತಸ್ತಿನ ಕಟ್ಟಡವನ್ನೇ ಕಟ್ಟಿದ್ದಾರೆ. ಧೋನಿ ಬಳಿಕ ಐಷಾರಾಮಿ ದುಬಾರಿ ವಾಹನಗಳಿಂದ ಹಿಡಿದು ವಿಂಟೇಜ್ ವಾಹನಗಳು ಇವೆ.
ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ
ಇತ್ತೀಚೆಗೆ ಧೋನಿ ಮರ್ಸಡಿಸ್ ಬೆಂಜ್ ಸಿಕ್ಲಾಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಧೋನಿ ಹಳೆಯ ಯಮಹಾ ಬೈಕ್ ಖರೀದಿಸಿದ್ದಾರೆ. ಬಳಿಕ ದುಬಾರಿ ವೆಚ್ಚ ಮಾಡಿ ಸಂಪೂರ್ಣವಾಗಿ ಹೊಸ ಬೈಕ್ ರೀತಿ ಮಾಡಿದ್ದಾರೆ
.ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ
ಹಳೇ ಯಮಹಾ RD350 ಬೈಕ್ ಖರೀದಿಸಿದ ಧೋನಿ, ಸಂಪೂರ್ಣ ರಿಸ್ಟೋರ್ ಮಾಡಿದ್ದಾರೆ. ಡಿಸ್ಕ್ ಬ್ರೇಕ್, ಬಣ್ಣ ಸೇರಿದಂತೆ ಎಲ್ಲವೂ ಹೊಸದಾಗಿದೆ. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಹಳೇ ಬೈಕ್ ಭಾರಿ ಸಂಚಲನ ಸೃಷ್ಟಿಸಿದೆ.
ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ
ಬ್ಲೂ ಸ್ಟೋಕ್ಸ್ ಕಸ್ಟಮ್ಸ್ ಇನ್‌ಸ್ಟಾಗ್ರಾಂ ಖಾತೆ ಧೋನಿಯ ಹೊಸ ಬೈಕ್ ಕುರಿತು ಫೋಟೋಗಳನ್ನು ಹಂಚಿಕೊಂಡಿದೆ. ಬ್ರಿಟಿಷ್ ಗ್ರೀನ್ ಫ್ಯೂಯೆಲ್ ಟ್ಯಾಂಕ್, ಅತ್ಯಾಕರ್ಷಕ ಹೆಡ್‌ಲ್ಯಾಂಪ್ಸ್, ಟೆಲಿಸ್ಕೋಪಿಕ್ ಫೋರ್ಕ್ಸ್ ಸೇರಿದಂತೆ ಹಲವು ಹೊಸ ಬಿಡಿಭಾಗಗಳ ಮೂಲಕ ಬೈಕ್ ರಿಸ್ಟೋರ್ ಮಾಡಲಾಗಿದೆ.
ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ
ಫ್ಯೂಯೆಲ್ ಟ್ಯಾಂಕ್ ಮೇಲೆ ಧೋನಿ ಜರ್ಸಿ ನಂಬರ್ 7 ಎಂದು ಬರೆಯಲಾಗಿದೆ. ಧೋನಿ ಬಳಿ ಇರುವ ಮರ್ಸಿಡಿಸ್ ಬೆಂಜ್ ಸಿಕ್ಲಾಸ್ ಸೇರಿದಂತೆ ಕೆಲ ಕಾರುಗಳಿಗೆ 0007 ನಂಬರ್ ಪಡೆದಿದ್ದಾರೆ.
ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ
ಧೋನಿ ಬಳಿ ಹಲವು ಯಮಹಾ RD350 ಬೈಕ್‌ಗಳಿವೆ. ಇದಕ್ಕೆ ಮತ್ತೊಂದು ಇದೀಗ ಸೇರಿಕೊಂಡಿದೆ. ಧೋನಿ ಹುಡುಕಿ ಹುಡುಕಿ ಯಮಹಾ RD350 ಬೈಕ್ ಖರೀದಿಸಿ ರಿಸ್ಟೋರ್ ಮಾಡಲು ಒಂದು ಕಾರಣವಿದೆ.
ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ
ಧೋನಿಯ ಮೊದಲ ಬೈಕ್ ಇದೇ ಯಮಹಾ RD350. ಕೆಂಪು ಬಣ್ಣದ ಯಮಹಾ RD350 ಬೈಕ್ ಮೇಲೆ ಧೋನಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಯಮಹಾ RD350 ಬೈಕ್ ಎಲ್ಲೇ ಕಂಡರು ಧೋನಿ ಖರೀದಿಸುತ್ತಾರೆ.
ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ
1980 ರಿಂದ 1983ರ ವರೆಗೆ ಯಮಹಾ RD350 ಭಾರತದಲ್ಲಿ ಭರ್ಜರಿ ಮಾರಾಟವಾಗಿತ್ತು. ಬಳಿಕ ಯಮಹಾ ಆರ್‌ಎಕ್ಸ್ ವರ್ಶನ್ ಬೈಕ್ ಬಿಡುಗಡೆ ಮಾಡಿ ಹೊಸ ಸಂಚಲನ ಸೃಷ್ಟಿಸಿತ್ತು.
ಫೋಟೋ ಕೃಪೆ:ಬ್ಲೂ ಸ್ಮೋಕ್ ಕಸ್ಟಮ್ಸ್ ಡಿ350 ಇನ್‌ಸ್ಟಾಗ್ರಾಂ