ಜಮೈಕ(ಜ.09): ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ವಿದಾಯ ಚರ್ಚೆ ಅಭಿಮಾನಿಗಳಿಗೆ ನಡುಕು ಶುರುವಾಗಲಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ನಿರಾಸೆಯಾಗುವುದು ಖಚಿತ. ಇದೀಗ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ವಿದಾಯದ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. 

ಇದನ್ನೂ ಓದಿ: ಎಲ್ಲರೂ ದೂರ ಮಾಡಿದರು, ಕೆಟ್ಟ ಆಟಗಾರ ಹಣೆಪಟ್ಟಿ; ನೋವು ತೋಡಿಕೊಂಡ ಕ್ರಿಸ್ ಗೇಲ್!..

1999ರ ಸೆಪ್ಟೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕ್ರಿಸ್ ಗೇಲ್,  2 ದಶಕ ಪೂರೈಸಿದ್ದಾರೆ. ಆದರೆ ಗೇಲ್ ಕ್ರಿಕೆಟ್ ದಾಹ ಇನ್ನೂ ಹಾಗೇ ಇದೆ. ಕ್ರಿಸ್ ಕಚ್ಚಿ ನಿಂತರೆ ಬೌಲರ್‌ಗಳ ಕತೆ ಮುಗಿದಂತೆ. ಇದೀಗ 40ರ ಹರೆಯದ ಗೇಲ್ ತಾವು ಕ್ರಿಕೆಟ್ ಆನಂದಿಸುವವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವದಾಗಿ ಹೇಳಿದ್ದಾರೆ.

ಇದನ್ನೂ ಓದಿ: ನಾಟೌಟ್ ತೀರ್ಪಿಗೆ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ ಗೇಲ್!

ಖಾಸಗಿ ಮಾಧ್ಯಮದ ಜೊತೆಗಿನ ಸಂದರ್ಶನದಲ್ಲಿ ಗೇಲ್ ತಾವು 45ನೇ ವಯಸ್ಸಿನವರೆಗೆ ಕ್ರಿಕೆಟ್ ಆಡುವುದಾಗಿ ಹೇಳಿದ್ದಾರೆ. ಈ ಮೂಲಕ 45ರ ಬಳಿಕ ನಿವೃತ್ತಿಯಾಗುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ನನಗೆ ಎಷ್ಟು ಸಾಧ್ಯವೋ ಅಲ್ಲೀವರೆಗೆ ಕ್ರಿಕೆಟ್ ಆಡುತ್ತೇನೆ. 2020ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಗೇಲ್ ಹೇಳಿದ್ದಾರೆ. 

ಇದನ್ನೂ ಓದಿ: ಐತಿಹಾಸಿಕ ಪಂದ್ಯದಲ್ಲಿ ಲಾರಾ ರೆಕಾರ್ಡ್ ಬ್ರೇಕ್ ಮಾಡಿದ ಗೇಲ್!

45 ಉತ್ತಮ ಸಂಖ್ಯೆ. ಹೀಗಾಗಿ ನಾನು 45ರ ವರೆಗೆ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತೇನೆ ಎಂದಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಗೇಲ್ ಆಟ ಇನ್ನೂ 5 ವರ್ಷ ಖಚಿತವಾಗಿ ಸಿಗಲಿದೆ ಅನ್ನೋ ಸೂಚನೆಯನ್ನು ಗೇಲ್ ನೀಡಿದ್ದಾರೆ. ಹೀಗಾಗಿ 2020 ಸೇರಿದಂತೆ 5 ಆವೃತ್ತಿಗಳಲ್ಲಿ ಗೇಲ್ ಆಡುವುದು ಖಚಿತವಾಗಿದೆ. ಅತ್ಯುತ್ತಮ ಫಾರ್ಮ್ ಮುಂದುವರಿಸಿದರೆ ಗೇಲ್ ಖರೀದಿಗೆ ಫ್ರಾಂಚೈಸಿಗಳು ಮುಗಿ ಬೀಳಲಿದೆ.