ಟ್ರಿನಿಡಾಡ್(ಆ.12): ಭಾರತ ವಿರುದ್ದದ 2ನೇ ಏಕದಿನ ಪಂದ್ಯದ ಫಲಿತಾಂಶ ವೆಸ್ಟ್ ಇಂಡೀಸ್‌ಗೆ ನಿರಾಸೆ ತಂದಿದೆ. ದ್ವಿತೀಯ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ವಿಂಡೀಸ್ ಸೋಲಿಗೆ ಶರಣಾಗಿತ್ತು. ಈ ಪಂದ್ಯ ಕ್ರಿಸ್ ಗೇಲ್ ಪಾಲಿಗೆ ಸ್ಮರಣೀಯಾಗಿತ್ತು. ಕಾರಣ 300ನೇ ಏಕದಿನ ಪಂದ್ಯ ಆಡಿದ ಗೇಲ್ ಐತಿಹಾಸಿಕ ಪಂದ್ಯದಲ್ಲಿ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರ ದಾಖಲೆ ಪುಡಿ ಮಾಡಿದರು.

ಇದನ್ನೂ ಓದಿ: ಗೇಲ್ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ಕೊಹ್ಲಿ..! ವಿಡಿಯೋ ವೈರಲ್‌!

2ನೇ ಏಕದಿನ ಪಂದ್ಯದಲ್ಲಿ ಗೇಲ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. 11 ರನ್ ಸಿಡಿಸಿ ಗೇಲ್ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಗೇಲ್ 7 ರನ್ ಸಿಡಿಸುತ್ತಿದ್ದಂತೆ, ಲಾರಾ ದಾಖಲೆ ಪುಡಿ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಪರ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಗೇಲ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ:  ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್!

ಬ್ರಿಯಾನ್ ಲಾರ ಏಕದಿನ ಕ್ರಿಕೆಟ್‌ನಲ್ಲಿ 10348ರನ್ ಸಿಡಿಸಿದ್ದಾರೆ. ಇದೀಗ ಗೇಲ್ 10353 ರನ್ ಸಿಡಿಸೋ ಮೂಲಕ ಲಾರಾ ಹಿಂದಿಕ್ಕಿ, ವಿಂಡೀಸ್ ಪರ ಗರಿಷ್ಠ ರನ್ ಸಿಡಿಸಿದ ಏಕದಿನ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.