ಎಲ್ಲರೂ ದೂರ ಮಾಡಿದರು, ಕೆಟ್ಟ ಆಟಗಾರ ಹಣೆಪಟ್ಟಿ; ನೋವು ತೋಡಿಕೊಂಡ ಕ್ರಿಸ್ ಗೇಲ್!
ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ರಾಷ್ಟ್ರೀಯ ಕ್ರಿಕೆಟ್‌ನಿಂದ ಫ್ರಾಂಚೈಸಿ ಕ್ರಿಕೆಟ್ ವರೆಗೆ ಎದುರಿಸಿದ ಟೀಕೆಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲರ ವರ್ತನೆಗೆ ಗೇಲ್ ನೊಂದಿದ್ದಾರೆ. ಗೇಲ್ ನೋವಿನ ಮಾತುಗಳು ಇಲ್ಲಿವೆ.
ಜೋಹಾನ್ಸ್‌ಬರ್ಗ್ (ನ.25): ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಬೌಂಡರಿ ಸಿಕ್ಸರ್ ಅಬ್ಬರವೇ ಅಭಿಮಾನಿಗಳಿಗೆ ಹಬ್ಬ. ಆನ್ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್‌ನಲ್ಲಿ ಗೇಲ್ ಒಂದೇ ರೀತಿ ಇರುತ್ತಾರೆ. ಸೆಲೆಬ್ರೇಷನ್, ತಮಾಷೆ ಮೂಲಕ ಗೇಲ್ ಬಿಂದಾಸ್. ಗೇಲ್ ಯಾವತ್ತೂ ಬೇಸರ, ನೋವು ಹೊರಹಾಕಿದವರಲ್ಲ. ಇದೀಗ ಮೊದಲ ಬಾರಿಗೆ ಕ್ರಿಸ್ ಗೇಲ್ ತಮ್ಮ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ನಾಟೌಟ್ ತೀರ್ಪಿಗೆ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ ಗೇಲ್!
ಕ್ರಿಸ್ ಗೇಲ್ ಎರಡೂ, ಮೂರು ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಸಾಕು, ಎಲ್ಲರೂ ಗೇಲ್ ಮೇಲೆ ಮುಗಿಬೀಳುತ್ತಾರೆ. ಅಭಿಮಾನಿಗಳು, ಮಾಧ್ಯಮ ಮಾತ್ರವಲ್ಲ, ಫ್ರಾಂಚೈಸಿ, ತಂಡದ ಸಹ ಆಟಗಾರರು ಕೂಡ ಗೌರವ ನೀಡುತ್ತಿಲ್ಲ. ಕೆಟ್ಟ ಆಟಗಾರ, ಆಡೋ ಹನ್ನೊಂದರ ಬಳಗದಲ್ಲಿರುವುದೇ ವೇಸ್ಟ್ ಅನ್ನೋ ಟೀಕೆಗಳನ್ನು ಎದುರಿಸಿದ್ದೇನೆ, ಎದುರಿಸುತ್ತಿದ್ದೇನೆ ಎಂದು ಗೇಲ್ ಹೇಳಿದ್ದಾರೆ.
ಇದನ್ನೂ ಓದಿ: 2ನೇ ಟೆಸ್ಟ್ ಪಂದ್ಯಕ್ಕೆ ವಿಂಡೀಸ್ ತಂಡ ಪ್ರಕಟ; ಗೇಲ್‌ಗೆ ಶಾಕ್..!
MSL ಲೀಗ್ ಟೂರ್ನಿ ಆಡುತ್ತಿರುವ ಕ್ರಿಸ್ ಗೇಲ್, ಜೋಝಿ ಸ್ಟಾರ್ಸ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. 5 ಇನಿಂಗ್ಸ್‌ಗಳಿಂದ 47 ರನ್ ಸಿಡಿಸಿರುವ ಗೇಲ್ ಟೀಕೆಗೆ ಸುರಿಮಳೆ ಎದುರಿಸುತ್ತಿದ್ದಾರೆ. ಆಡಿದ ಎಲ್ಲಾ ಫ್ರಾಂಚೈಸಿಗಳಲ್ಲಿ ಟೀಕೆ ಎದುರಿಸಿದ್ದೇನೆ. ಕಳಪೆ ಪ್ರದರ್ಶನ ನೀಡಿದರೆ, ಬ್ಯಾಟ್ ಹಿಡಿಯಲು ಗೊತ್ತಿಲ್ಲದ ರೀತಿ ನೋಡುತ್ತಾರೆ ಎಂದು ಗೇಲ್ ಹೇಳಿದ್ದಾರೆ.